ಬಿಜೆಪಿಗೆ ಸ್ಪಷ್ಟ ಬಹುಮತ ಬರಲ್ಲ ಎಂದಿದ್ದ ಉತ್ತರ ಪ್ರದೇಶ ಸಚಿವ ಸಂಪುಟದಿಂದ ವಜಾ!

ಉತ್ತರ ಪ್ರದೇಶದ ಸಚಿವ ಒ.ಪಿ ರಾಜ್ ಭರ್ ಅವರನ್ನು ಸಿಎಂ ಯೋಗಿ ಆದಿತ್ಯನಾಥ್ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ.

Published: 20th May 2019 12:00 PM  |   Last Updated: 20th May 2019 12:02 PM   |  A+A-


Yogi Adityanath sacks sulking UP minister OP Rajbhar from Cabinet

ಬಿಜೆಪಿಗೆ ಸ್ಪಷ್ಟ ಬಹುಮತ ಬರಲ್ಲ ಎಂದಿದ್ದ ಉತ್ತರ ಪ್ರದೇಶ ಸಚಿವ ಸಂಪುಟದಿಂದ ವಜಾ!

Posted By : SBV SBV
Source : Online Desk
ಉತ್ತರ ಪ್ರದೇಶದ ಸಚಿವ ಒ.ಪಿ ರಾಜ್ ಭರ್ ಅವರನ್ನು ಸಿಎಂ ಯೋಗಿ ಆದಿತ್ಯನಾಥ್ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. 

ರಾಜ್ ಭರ್ ಹಾಗೂ ಸಚಿವ ಸ್ಥಾನ ಪಡೆದಿರುವ ಅವರ ಪಕ್ಷದ ಇತರ ಸದಸ್ಯರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಯೋಗಿ ಆದಿತ್ಯನಾಥ್ ಪತ್ರ ಬರೆದಿದ್ದಾರೆ. 

ಬಿಜೆಪಿ ವಿರುದ್ಧ ನಿರಂತರವಾಗಿ ಟೀಕಾ ಪ್ರಹಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಈ ಕ್ರಮ ಕೈಗೊಂಡಿದ್ದಾರೆ.

ಸುಹೆಲ್ ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಹಿಂದುಳಿದ ಕಲ್ಯಾಣ ಹಾಗೂ ದಿವ್ಯಾಂಗ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಈ ಹಿಂದೆ ಅವರು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಲಾಗಿರಲಿಲ್ಲ. ಆದರೆ ಚುನಾವಣೋತ್ತರ ಸಮೀಕ್ಷೆ ಬಂದ ದಿನ ರಾಜ್ ಭರ್ ಎಸ್ ಪಿ-ಬಿಎಸ್ ಪಿ ಮೈತ್ರಿಕೂಟ ಬಿಜೆಪಿ ವಿರುದ್ಧ ಹೆಚ್ಚಿನ ಬಹುಮತ ಗಳಿಸಲಿದೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವುದಿಲ್ಲ ಎಂದು ಹೇಳಿದ್ದರು.   
Stay up to date on all the latest ದೇಶ news with The Kannadaprabha App. Download now
facebook twitter whatsapp