ಕೇಂದ್ರದಲ್ಲಿ ಯಾರನ್ನೂ ಬೆಂಬಲಿಸಲು ಸಿದ್ಧ, ಆದರೆ ಷರತ್ತು ಅನ್ವಯ: ವೈಎಸ್ ಆರ್ ಪಿ; ಏನದು ಷರತ್ತು?

2019 ರ ಲೋಕಸಭಾ ಚುನಾವಣೆ ಫಲಿತಾಂಶ ಮೇ.23 ರಂದು ಪ್ರಕಟಗೊಳ್ಳಲಿದ್ದು, ಒಂದು ವೇಳೆ ಅತಂತ್ರ ಸಂಸತ್ ಎದುರಾದರೆ...

Published: 22nd May 2019 12:00 PM  |   Last Updated: 22nd May 2019 07:29 AM   |  A+A-


On counting eve, YSRCP says it will support anybody who gives special status to Andhra

ಯಾರನ್ನೂ ಬೆಂಬಲಿಸಲು ಸಿದ್ಧ, ಆದರೆ ಷರತ್ತು ಅನ್ವಯ-ವೈಎಸ್ ಆರ್ ಪಿ, ಏನದು ಷರತ್ತು?

Posted By : SBV SBV
Source : The New Indian Express
ನವದೆಹಲಿ: 2019 ರ ಲೋಕಸಭಾ ಚುನಾವಣೆ ಫಲಿತಾಂಶ ಮೇ.23 ರಂದು ಪ್ರಕಟಗೊಳ್ಳಲಿದ್ದು, ಒಂದು ವೇಳೆ ಅತಂತ್ರ ಸಂಸತ್ ಎದುರಾದರೆ ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕತ್ವ ಮಹತ್ವದ ಪಾತ್ರ ನಿರ್ವಹಿಸಲಿದೆ. ಈ ಪೈಕಿ ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಅವರೂ ಒಬ್ಬರು. 

ಈ ನಡುವೆ ಅಂದಿಕೊಂಡಂತೆಯೇ ಕೇಂದ್ರದಲ್ಲಿ ಅತಂತ್ರ ಫಲಿತಾಂಶ ಬಂದರೆ ತಾವು ಯಾರನ್ನು ಬೇಕಾದರೂ ಬೆಂಬಲಿಸಲು ಸಿದ್ಧವಿರುವುದಾಗಿ ವೈಎಸ್ ಆರ್ ಕಾಂಗ್ರೆಸ್  ಪಕ್ಷ ಹೇಳಿದೆ. 

ಆದರೆ ಬೆಂಬಲ ನೀಡುವುದಕ್ಕೆ ವೈಎಸ್ ಆರ್ ಕಾಂಗ್ರೆಸ್ ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಈ ವರೆಗೂ ಯಾವುದೇ ಮೈತ್ರಿಕೂಟದೊಂದಿಗೂ ಗುರುತಿಸಿಕೊಳ್ಳದ ವೈಎಸ್ ಆರ್ ಕಾಂಗ್ರೆಸ್, ಆಂಧ್ರಪ್ರದೇಶಕ್ಕೆ ಯಾರು ವಿಶೇಷ ಸ್ಥಾನ-ಮಾನ ನೀಡುತ್ತಾರೋ ಅವರಿಗೆ ಸರ್ಕಾರ ರಚನೆಗೆ ಬೆಂಬಲ ಘೋಷಿಸುವುದಾಗಿ ವೈಎಸ್ ಆರ್ ನ ಹಿರಿಯ ನಾಯಕ ಮೆಕಪತಿ ರಾಜಮೋಹನ್ ರೆಡ್ಡಿ ಹೇಳಿದ್ದಾರೆ. 
Stay up to date on all the latest ದೇಶ news with The Kannadaprabha App. Download now
facebook twitter whatsapp