ನೇರಪ್ರಸಾರದಲ್ಲಿ ಕಣ್ಣೀರಿಟ್ಟ ಚುನಾವಣಾ ಸಮೀಕ್ಷೆ ಸಂಸ್ಥೆಯ ಮುಖ್ಯಸ್ಥ: ಇಲ್ಲಿದೆ ಕಾರಣ

ಸುದ್ದಿವಾಹಿನಿಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಚುನಾವಣಾ ಸಮೀಕ್ಷೆ ಸಂಸ್ಥೆಯ ಮುಖ್ಯಸ್ಥ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.

Published: 23rd May 2019 12:00 PM  |   Last Updated: 23rd May 2019 06:53 AM   |  A+A-


Axis My India chief, who got election results 100% right, breaks down on live TV

ನೇರಪ್ರಸಾರದಲ್ಲಿ ಕಣ್ಣೀರಿಟ್ಟ ಚುನಾವಣಾ ಸಮೀಕ್ಷೆ ಸಂಸ್ಥೆಯ ಮುಖ್ಯಸ್ಥ: ಇಲ್ಲಿದೆ ಕಾರಣ

Posted By : SBV SBV
Source : Online Desk
ನವದೆಹಲಿ: ಸುದ್ದಿವಾಹಿನಿಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಚುನಾವಣಾ ಸಮೀಕ್ಷೆ ಸಂಸ್ಥೆಯ ಮುಖ್ಯಸ್ಥ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. 

ಆಕ್ಸಿಸ್ ಮೈ ಇಂಡಿಯಾದ ಮುಖ್ಯಸ್ಥ ಪ್ರದೀಪ್ ಗುಪ್ತಾ ಸುದ್ದಿವಾಹಿನಿಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದಾರೆ. 

ಪ್ರದೀಪ್ ಗುಪ್ತಾ ಅವರ ನೇತೃತ್ವದ ಸಂಸ್ಥೆ ಈ ಹಿಂದೆ ನೀಡಿದ್ದ ಸಮೀಕ್ಷೆ ಶೇ.95 ರಷ್ಟು ನಿಖರವಾಗಿತ್ತು. 2019 ರ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಅದು ಮುಂದುವರೆದಿದೆ.  

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಗೆ 339-365 ಸ್ಥಾನಗಳು ಸಿಗಲಿದೆ ಎಂದು ಆಕ್ಸಿಸ್ ಇಂಡಿಯಾ ಸಮೀಕ್ಷೆಯ ಅಂದಾಜಾಗಿತ್ತು. 8 ಲಕ್ಷ ಮತದಾರರನ್ನು ಸಮೀಕ್ಷೆಗೊಳಪಡಿಸಿದ್ದ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಯುಪಿಎಗೆ 77-108 ಸ್ಥಾನಗಳನ್ನು ಅಂದಾಜಿಸಲಾಗಿತ್ತು. 

ಚುನಾವಣಾ ಫಲಿತಾಂಶದ ಟ್ರೆಂಡಿಂಗ್ ಆಕ್ಸಿಸ್ ಮೈ ಇಂಡಿಯಾದ ಸಮೀಕ್ಷೆಗೆ ಹತ್ತಿರವಾಗಿದ್ದು, ತಮ್ಮ ಸಂಸ್ಥೆಯ ನಿಖರತೆಯಿಂದ ಸಂತೋಷಗೊಂಡು ಭಾವುಕರಾದ ಪ್ರದೀಪ್ ಗುಪ್ತ ಸುದ್ದಿ ವಾಹಿನಿಯ ನೇರಪ್ರಸಾರದಲ್ಲಿ ಕಣ್ಣೀರಿಟ್ಟಿದ್ದಾರೆ. 

ಆಕ್ಸಿಸ್ ಮೈ ಇಂಡಿಯಾದ ಸಮೀಕ್ಷೆಗೆ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರದೀಪ್ ಗುಪ್ತ, ತನ್ನ ತಂಡದ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿತ್ತು ಎಂದು ಹೇಳಿದ್ದಾರೆ. 
Stay up to date on all the latest ದೇಶ news with The Kannadaprabha App. Download now
facebook twitter whatsapp