ಅಮಿತ್ ಶಾ ದಾಖಲೆ ಹಿಂದಿಕ್ಕಿದ ರಾಹುಲ್ ಗಾಂಧಿ, ವಯನಾಡ್ ನಲ್ಲಿ 7.90 ಲಕ್ಷ ಮತಗಳ ಭರ್ಜರಿ ಮುನ್ನಡೆ

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಅಮೇಥಿಯಲ್ಲಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ದಾಖಲೆಯ ಮುನ್ನಡೆ ಪಡೆದಿದ್ದಾರೆ.

Published: 23rd May 2019 12:00 PM  |   Last Updated: 23rd May 2019 04:03 AM   |  A+A-


Congress President Rahul Gandhi leading with over 7,90,000 votes from Kerala's Wayanad

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಅಮೇಥಿಯಲ್ಲಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ದಾಖಲೆಯ ಮುನ್ನಡೆ ಪಡೆದಿದ್ದಾರೆ.

ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ 14030 ಮತಗಳ ಮುನ್ನಡೆ ಸಾಧಿಸಿದ್ದು, ಅಮೇಥಿಯಲ್ಲಿ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಅವರಿಗೆ ಭರ್ಜರಿ ಬೆಂಬಲ ದೊರೆತಿದ್ದು, ವಯನಾಡಿನಲ್ಲಿ ರಾಹುಲ್ ಗಾಂಧಿ ಬರೊಬ್ಬರಿ 7.90 ಲಕ್ಷ ಮತಗಳ  ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆ ಮೂಲಕ ವಯನಾಡಿನಲ್ಲಿ ರಾಹುಲ್ ಗೆಲುವು ಬಹುತೇಕ ಸ್ಪಷ್ಟವಾಗಿದೆ,

ಅಮಿತ್ ಶಾ ದಾಖಲೆ ಹಿಂದಿಕ್ಕಿದ ರಾಹುಲ್ ಗಾಂಧಿ
ಇನ್ನು ಗುಜರಾತ್ ನ ಗಾಂಧಿನಗರದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬರೊಬ್ಬರಿ 5 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಗೆಲುವನ್ನೂ ಮೀರಿಸುವಂತೆ ರಾಹುಲ್ ಗಾಂಧಿ ಗೆಲುವಿನತ್ತ ದಾಪುಗಾಲಿರಿಸಿದ್ದು, ಈಗಾಗಲೇ 7.90 ಲಕ್ಷ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂಬ ಕಾರಣಕ್ಕೇ ವಯನಾಡ್ ಕ್ಷೇತ್ರ ಭಾರಿ ಸುದ್ದಿಗೆ ಗ್ರಾಸವಾಗಿದೆ.
Stay up to date on all the latest ದೇಶ news with The Kannadaprabha App. Download now
facebook twitter whatsapp