ಮೋದಿ ಪ್ರಧಾನಿ ಎಂದು ಜನ ನಿರ್ಧರಿಸಿದ್ದಾರೆ, ಜನರ ತೀರ್ಪನ್ನು ಸ್ವಾಗತಿಸುತ್ತೇವೆ: ರಾಹುಲ್ ಗಾಂಧಿ

ಲೋಕಸಭಾ ಚುನಾವಣೆ 2019ರ ಫಲಿತಾಂಶದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ಮೋದಿ ಪ್ರಧಾನಿ ಎಂದು ಜನ ನಿರ್ಧರಿಸಿದ್ದಾರೆ, ಜನರ ತೀರ್ಪನ್ನು ಸ್ವಾಗತಿಸುತ್ತೇವೆ: ರಾಹುಲ್ ಗಾಂಧಿ
ಮೋದಿ ಪ್ರಧಾನಿ ಎಂದು ಜನ ನಿರ್ಧರಿಸಿದ್ದಾರೆ, ಜನರ ತೀರ್ಪನ್ನು ಸ್ವಾಗತಿಸುತ್ತೇವೆ: ರಾಹುಲ್ ಗಾಂಧಿ
ನವದೆಹಲಿ: ಲೋಕಸಭಾ ಚುನಾವಣೆ 2019ರ ಫಲಿತಾಂಶದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. 
ಮತ ಎಣಿಕೆ ನಿರ್ಣಾಯಕ ಹಂತ ತಲುಪಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಎನ್ ಡಿಎ ಗೆ ಬಹುಮತ ದೊರೆತಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಮೋದಿ ದೇಶದ ಪ್ರಧಾನಿ ಅಂತ ಜನ ನಿರ್ಧಾರ ಮಾಡಿದ್ದಾರೆ. ದೇಶದ ಜನರೇ ನಮ್ಮ ಮಾಲಿಕರು, ಜನರ ತೀರ್ಪನ್ನು ಸ್ವಾಗತಿಸುತ್ತೇವೆ, ಸೋಲು ಗೆಲುವು ಸಾಮಾನ್ಯ. ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ. 
ಇದೇ ವೇಳೆ ಫಲಿತಾಂಶದಿಂದ ಹೆದರುವ ಅಗತ್ಯವಿಲ್ಲ, ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಹೋರಾಟ ಮುಂದುವರೆಸೋಣ, ಎಲ್ಲಾ ಟೀಕೆಗಳಿಗೂ ಪ್ರೀತಿಯಿಂದ ಉತ್ತರಿಸುತ್ತೇನೆ, ಸೋಲಿನ ಕುರಿತು ಸಿಡಬ್ಲ್ಯೂಸಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com