ಮಮತಾ ಬ್ಯಾನರ್ಜಿಯ ಭದ್ರಕೋಟೆಯನ್ನೇ ಅಲುಗಾಡಿಸಿದ ಮೋದಿ ಸುನಾಮಿ! ದೀದಿ ಕೋಟೆ ಕೆಡವಿದ್ದೇಗೆ?

ಪ್ರಧಾನಿ ನರೇಂದ್ರ ಮೋದಿಗೆ ಟಕ್ಕರ್ ಕೊಡುವ ಎದೆಗಾರಿಕೆ ನನಗೆ ಮಾತ್ರ ಇರೋದು ಎಂದು ಹೇಳಿಕೊಂಡಿದ್ದ ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭದ್ರಕೋಟೆಯನ್ನೇ ಮೋದಿ ಸುನಾಮಿ ಕೆಡವಿದೆ.

Published: 23rd May 2019 12:00 PM  |   Last Updated: 23rd May 2019 01:15 AM   |  A+A-


Narendra Modi-Mamata Banerjee

ನರೇಂದ್ರ ಮೋದಿ-ಮಮತಾ ಬ್ಯಾನರ್ಜಿ

Posted By : VS VS
Source : Online Desk
ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿಗೆ ಟಕ್ಕರ್ ಕೊಡುವ ಎದೆಗಾರಿಕೆ ನನಗೆ ಮಾತ್ರ ಇರೋದು ಎಂದು ಹೇಳಿಕೊಂಡಿದ್ದ ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭದ್ರಕೋಟೆಯನ್ನೇ ಮೋದಿ ಸುನಾಮಿ ಕೆಡವಿದೆ.

ಪಶ್ಚಿಮ ಬಂಗಾಳದ 42 ಲೋಕಸಭೆ ಚುನಾವಣಾ ಕ್ಷೇತ್ರಗಳ ಪೈಕಿ 2014ರಲ್ಲಿ ಕೇವಲ 2 ಕ್ಷೇತ್ರವನ್ನು ಮಾತ್ರ ಗೆದ್ದಿದ್ದ ಬಿಜೆಪಿ ಇದೀಗ ಮೋದಿ ಸುನಾಮಿಯಿಂದಾಗಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಟಿಎಂಸಿ 26 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದುಈ ವಿಚಾರ ದೀದಿಯನ್ನೇ ನಡುಗಿಸಿದೆ.

2014ರಲ್ಲಿ ಟಿಎಂಸಿ 34 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಈ ವೇಳೆ ಬಿಜೆಪಿ ಹಾಗೂ ಎಡಪಂಥಿಯರು ತಲಾ 2 ಕ್ಷೇತ್ರ ಹಾಗೂ ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಚುನಾವಣೆ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆಸಿತ್ತು. 
Stay up to date on all the latest ದೇಶ news with The Kannadaprabha App. Download now
facebook twitter whatsapp