ಲೋಕಸಭಾ ಚುನಾವಣೆ: ಧಾರವಾಡ ಕ್ಷೇತ್ರದ ಕೈ ಅಭ್ಯರ್ಥಿ ಇನ್ನೂ ನಿಗೂಢ

ಗಂಡು ಮೆಟ್ಟಿದ ನಾಡು ಉತ್ತರ ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಪ್ರಚಾರವನ್ನು ಆರಂಭಿಸಿದ್ದರೆ, ಕಾಂಗ್ರೆಸ್ ನಲ್ಲಿ ಇನ್ನೂ ಸೂಕ್ತ ಅಭ್ಯರ್ಥಿಯ ಅಂತಿಮವಾಗಿಲ್ಲ.

Published: 02nd April 2019 12:00 PM  |   Last Updated: 02nd April 2019 11:52 AM   |  A+A-


Vinay Kulakarni

ವಿನಯ್ ಕುಲಕರ್ಣೀ

Posted By : ABN ABN
Source : The New Indian Express
ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಉತ್ತರ ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಪ್ರಚಾರವನ್ನು ಆರಂಭಿಸಿದ್ದರೆ, ಕಾಂಗ್ರೆಸ್ ನಲ್ಲಿ ಇನ್ನೂ ಸೂಕ್ತ ಅಭ್ಯರ್ಥಿಯ ಅಂತಿಮವಾಗಿಲ್ಲ.

ನಾಮಪತ್ರ ಸಲ್ಲಿಸುವ ಕೊನೆಯ ದಿನದಲ್ಲಿ ಅಭ್ಯರ್ಥಿ ಘೋಷಿಸಿರುವ ಉದಾಹರಣೆ ಕಾಂಗ್ರೆಸ್ ಪಕ್ಷದಲ್ಲಿದ್ದು, ವಿಳಂಬದಿಂದಾಗಿ ಪಕ್ಷದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ.

ಒಂದು ಬಾರಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ  ಧಾರವಾಡ ಲೋಕಸಭಾ ಕ್ಷೇತ್ರ ಕಳೆದ ಎರಡು ದಶಕಗಳಿಂದಲೂ ಬಿಜೆಪಿ ಹಿಡಿತದಲ್ಲಿದೆ.  2014ರ ಚುನಾವಣೆಯಲ್ಲಿ ಪ್ರಹ್ಲಾದ್ ಜೋಷಿ ವಿರುದ್ಧ ಕುಲಕರ್ಣೀ ಸೋತಿದ್ದರೂ, ಆದರೂ, ನಂತರ ಸಂಪುಟದ ಸಚಿವರನ್ನಾಗಿ ಮಾಡಲಾಗಿತ್ತು.

ಆದಾಗ್ಯೂ, ಕುಲಕರ್ಣೀ ಟಿಕೆಟ್ ಗಾಗಿ ಲಾಬಿ ನಡೆಸುವುದಿಲ್ಲ, ಪರ್ಯಾಯ ಮಾರ್ಗವಿಲ್ಲದೆ ಹೈಕಮಾಂಡ್ ನನ್ನನೇ ಅಭ್ಯರ್ಥಿಯನ್ನಾಗಿ ಮಾಡುತ್ತದೆ ಎಂದು ಕುಲಕರ್ಣಿ ವಿಶ್ವಾಸದಲ್ಲಿದ್ದಾರೆ. ಆದಾಗ್ಯೂ, ಪಕ್ಷ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ, ಒಂದು ವೇಳೆ ಘೋಷಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕುಲಕರ್ಣೀ ಸಿದ್ದವಾಗಿದ್ದಾರೆ ಎಂಬುದು  ಮೂಲಗಳಿಂದ ತಿಳಿದುಬಂದಿದೆ.

ಶಕಿರ್ ಸನದಿ, ಸದಾನಂದ ದಂಗಾನವರ್ ಮತ್ತು ಶ್ರೀನಿವಾಸ್ ಮಾನೆ ಹೆಸರುಗಳ ಬಗ್ಗೆ ಹೈಕಮಾಂಡ್ ಚರ್ಚಿಸಿದೆ. ಈ ಮಧ್ಯೆ ಸೀಮಾ ಸಿದ್ದಿಕಿ ಹೆಸರು ಕೂಡಾ ಕೇಳಿಬರುತ್ತಿದೆ. ಆದಾಗ್ಯೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾರೊಬ್ಬರು ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ

ಅಭ್ಯರ್ಥಿ ಘೋಷಣೆಯಲ್ಲಿ ವಿಳಂಬ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ, ನಾಯಕರು ಜಾತಿ, ಗೆಲ್ಲುವ ಅಭ್ಯರ್ಥಿಯನ್ನು ನೋಡುತ್ತಿದ್ದಾರೆ. ರಾಹುಲ್ ಗಾಂಧಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp