86ನೇ ವಯಸ್ಸಲ್ಲೂ ಕುಂದದ ಉತ್ಸಾಹ: ಉರಿಬಿಸಿಲಲ್ಲೂ ದಣಿವರಿಯದೆ ದೊಡ್ಡ ಗೌಡರ ಓಡಾಟ!

ಮುಖ ಗಂಟ್ಟಿಕ್ಕಿಕೊಂಡು ತೂಕಡಿಸುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ವ್ಯಂಗ್ಯ ಚಿತ್ರಗಳ ಜಮಾನ ಮುಗಿದಿದೆ, ದೊಡ್ಡಗೌಡರ ವ್ಯಂಗ್ಯ ಚಿತ್ರದ ಫೋಟೋಗಳು ...
ತುಮಕೂರಿನ ದೇವಾಲಯದಲ್ಲಿ ದೇವೇಗೌಡರ ಪೂಜೆ
ತುಮಕೂರಿನ ದೇವಾಲಯದಲ್ಲಿ ದೇವೇಗೌಡರ ಪೂಜೆ
ತುಮಕೂರು: ಮುಖ ಗಂಟ್ಟಿಕ್ಕಿಕೊಂಡು ತೂಕಡಿಸುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ವ್ಯಂಗ್ಯ ಚಿತ್ರಗಳ ಜಮಾನ ಮುಗಿದಿದೆ, ದೊಡ್ಡಗೌಡರ ವ್ಯಂಗ್ಯ ಚಿತ್ರದ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದವು, ಆದರೆ ಆ  ನಿದ್ದೆಯ ಹಿಂದೆ 12 ಗಂಟೆ ಕೆಲಸ ಮಾಡಿದ ಶ್ರಮವಿರುತ್ತಿತ್ತು. ಆ ಸತ್ಯ ಮಾತ್ರ ಯಾರಿಗೂ ಗೊತ್ತಾಗುತ್ತಿರಲಿಲ್ಲ, 
ಸದ್ಯ ದೇವೇಗೌಡರಿಗೆ 86 ವರ್ಷ ವಯಸ್ಸು. 86ರ ಹರಯದಲ್ಲೂ ತುಮಕೂರು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರು, 35 ಡಿಗ್ರಿ ಉರಿ ಬಿರಿಸಿಲಿನಲ್ಲೂ ದಣಿವೆನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಸೋಮವಾರ ಬೆಳಗ್ಗೆ 8.30ಕ್ಕೆ ಬೆಂಗಳೂರಿನ ತಮ್ಮ ಪದ್ಮನಾಭ ನಗರ ನಿವಾಸದಿಂದ ಹೊರಟ ದೇವೇಗೌಡರು, ನಗರದಿಂದ 140 ಕಿಮೀ ದೂರವಿರುವ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರಹುವ ಓಂಕಾರೇಶ್ವರ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು, 
ದೇವೇಗೌಡರ ಪರ ಅಖಾಡಕ್ಕೆ ಮಗ ಸಿಎಂ ಕುಮಾರಸ್ವಾಮಿ ಕೂಡ ಧುಮುಕಿದ್ದಾರೆ‌‌. ಪಟ್ಟನಾಯಕನಹಳ್ಳಿಗೆ ದೇವೇಗೌಡರೊಟ್ಟಿಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ. ನಂಜಾವಧೂತ ಶ್ರೀಗಳ ನೇತೃತ್ವದಲ್ಲಿ ನಡೆದ ಪ್ರಧಾನ ಲಲಿತ ಸಹಸ್ರನಾಮ ಹೋಮ,ಗಣ ಹೋಮದಲ್ಲಿ ಪಾಲ್ಗೊಂಡಿದ್ದರು.
ಅರ್ಚಕರು ಸಿಎಂ‌ ಕುಮಾರಸ್ವಾಮಿ ತಲೆಗೆ ಪೇಟ ಸುತ್ತಿ, ವಿವಿಧ ಪೂರ್ಣಾಹುತಿ ಸಾಮಾಗ್ರಿಗಳನ್ನ ಮುಟ್ಟಿಸಿ ನಮಸ್ಕರಿಸಿ ಬಳಿಕ ಪೂರ್ಣಹುತಿ 
ಲೋಕಕಲ್ಯಾಣಕ್ಕಾಗಿ ವಿಶೇಷ ಹೋಮ ಮಾಡಲಾಗಿದ್ದು, ನನ್ನ ಆರೋಗ್ಯ ಹಾಗೂ ದೇವೇಗೌಡರ ಆರೋಗ್ಯಕ್ಕೆ ಶ್ರೀಗಳು ಪ್ರಾರ್ಥನೆ ಸಿಲ್ಲಿಸಿದ್ದಾರೆ, ಇದು ಯಾವ ರಾಜಕೀಯಕ್ಕೂ ಮಾಡಿದ ಯಾಗ ಅಲ್ಲಾ ಅಂತಾ ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟಪಡಿಸಿದರು‌..
ಇನ್ನೂ ದೇವೇಗೌಡರಿಗೆ ಜನರ ಕೆಲಸ ಮಾಡುವಾಗ ಯಾವುದೇ ಸಮಸ್ಯೆ ಇರುವುದಿಲ್ಲ, ಎಂದು ಗೌಡರ ಆಪ್ತ ತಿಪ್ಪೇಸ್ವಾಮಿ ಹೇಳಿದ್ದಾರೆ. ದೇವಾಲಯದಿಂದ ಹೊರಟ ಗೌಡರು ಬುಕ್ಕಾಪಟ್ಟಣ ಗ್ರಾಮದ ಸಭೆ ಉದ್ದೇಶಿಸಿ ಮಾತನಾಡಿದರು.
ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ,. ಹೀಗಾಗಿ ದೇವೇಗೌಡರು ಉದ್ದೇಶ ಪೂರ್ವಕವಾಗಿ  ಆ ಎರಡು ಕ್ಷೇತ್ರಗಳಿಂದ ಪ್ರಚಾರ ಕಾರ್ಯ ಆರಂಭಿಸಿದರು, ರಾತ್ರಿ 8.30 ಕ್ಕೆ ತಿಪಟೂರಿಗೆ ಆಗಮಿಸಿದ ಗೌಡರು ಆಲ್ಲಿ ಬೆಂಬಲಿಗರು ನೀಡಿದ ಎಳನೀರು ಸೇವಿಸಿ, ಸ್ಥಳೀಯರ ಜೊತೆ ಸುಮಾರು ಸಮಯ ಮಾತನಾಡುತ್ತಾ ಕುಳಿತಿದ್ದರು
ನಿಮ್ಮ ಸ್ವಾಗತ ಮತ್ತು ಆತಿಥ್ಯಕ್ಕೆ ನಾನು ಆಬಾರಿಯಾಗಿದ್ದೇನೆ, .ಈ ಭಾಗಕ್ಕೆ ನೀರಾವರಿ ಯೋಜನೆ ತರಲು ನಾನು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇನೆ ಎಂದು ದೇವೇಗೌಡರು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಇದೇ ವೇಳೇ ನರೇಂದ್ರ ಮೋದಿ ವಿರುದ್ದ ದೇವೇಗೌಡರು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com