ಕೆಎಚ್ ಮುನಿಯಪ್ಪ
ಕೆಎಚ್ ಮುನಿಯಪ್ಪ

ಕೋಲಾರ: ಕೆಎಚ್ ಮುನಿಯಪ್ಪ ಸ್ಪರ್ಧೆಗೆ ವಿರೋಧ, ಬಿಜೆಪಿ ಬೆಂಬಲಿಸುತ್ತಿರುವ ಕೈ ಮುಖಂಡರು

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಎಚ್ , ಮುನಿಯಪ್ಪ ಪರ ಭಾರೀ ವಿರೋಧ ವ್ಯಕ್ತವಾಗಿದ್ದು ಕಾಂಗ್ರೆಸ್ ಮುಖಂಡರು ಬಿಜೆಪಿ ಅಭ್ಯರ್ಥಿ ಮುನಿಯಪ್ಪ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.

ಕೋಲಾರ:  ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಎಚ್ , ಮುನಿಯಪ್ಪ ಪರ ಭಾರೀ ವಿರೋಧ ವ್ಯಕ್ತವಾಗಿದ್ದು  ಕಾಂಗ್ರೆಸ್ ಮುಖಂಡರಾದ ಮುಳಬಾಗಲು ಕ್ಷೇತ್ರದ ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಹಾಗೂ ಹಾಲಿ ಸಂಸದ ಹೆಚ್ ನಾಗೇಶ್  ಬಿಜೆಪಿ ಅಭ್ಯರ್ಥಿ ಮುನಿಯಪ್ಪ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ಕೂಡಾ ಮುನಿಯಪ್ಪ ಬೆಂಬಲಿಸುವ ಅಥವಾ ವಿರೋಧಿಸುವ ಯಾವುದೇ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.

ಮುಳಬಾಗಿಲಿನಲ್ಲಿ ನಿನ್ನೆ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಮಂಜುನಾಥ್ ಹಾಗೂ ನಾಗೇಶ್ ನಿರ್ಧಾರ ಕೈಗೊಂಡಿದ್ದಾರೆ. ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮಂಜುನಾಥ್, ಮುನಿಯಪ್ಪ ನನ್ನ ರಾಜಕೀಯ ಜೀವನವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಿದ್ದು, ವರ್ಚಸ್ಸು ಕುಂದಿಸಲು ಪ್ರಯತ್ನಿಸುತ್ತಿದ್ದಾರೆ ಹೀಗಾಗಿ ಮುನಿಸ್ವಾಮಿ ಅವರನ್ನು ಬೆಂಬಲಿಸುವುದಾಗಿ ಹೇಳಿದರು.

ನಾಗೇಶ್ ಕೂಡಾ ಮಂಜುನಾಥ್ ಹಾದಿಯಲ್ಲಿಯೇ ಸಾಗುವುದಾಗಿ ಹೇಳಿದರು. 2013ರ ಚುನಾವಣೆಯಲ್ಲಿ ಮುನಿಯಪ್ಪ ತಮ್ಮ ಕಡೆಯ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.

ಆದರೆ, ಮತದಾರರು ನನ್ನ ವಿರುದ್ಧವಾಗಿ ಮತ ಚಲಾಯಿಸುವುದಿಲ್ಲ ಎಂಬ ವಿಶ್ವಾಸದಲ್ಲಿರುವುದಾಗಿ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.ಕೆಲವರು ವಿರೋಧಿಸುವುದು ಸಾಮಾನ್ಯ. ಆದರೆ, ಕ್ಷೇತ್ರದ ಎಂಟು ಆಸೆಂಬ್ಲಿ ವ್ಯಾಪ್ತಿಯಲ್ಲೂ ತಮ್ಮ ಪರವಾಗಿ ಮತದಾರರು ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ಅವರು ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com