ಮತದಾರರನ್ನು ಸೆಳೆಯಲು ಮ್ಯೂಸಿಕ್ ವಿಡಿಯೊ ಮೊರೆ ಹೋದ ರಾಜಕೀಯ ಪಕ್ಷಗಳು

ಸೋಷಿಯಲ್ ಮೀಡಿಯಾಗಳಲ್ಲಿ ನೀವು ಕಳೆದ ಕೆಲ ತಿಂಗಳಿನಿಂದ ನಿರ್ದಿಷ್ಟ ರಾಜಕಾರಣಿಯನ್ನು ಅಥವಾ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸೋಷಿಯಲ್ ಮೀಡಿಯಾಗಳಲ್ಲಿ ನೀವು ಕಳೆದ ಕೆಲ ತಿಂಗಳಿನಿಂದ ನಿರ್ದಿಷ್ಟ ರಾಜಕಾರಣಿಯನ್ನು ಅಥವಾ ರಾಜಕೀಯ ಪಕ್ಷವನ್ನು ಹೊಗಳುವ ಅಥವಾ ನಿಂದಿಸುವ ಒಕ್ಕಣೆಯ ಮ್ಯೂಸಿಕ್ ವಿಡಿಯೊವನ್ನು ನೀವು ಕೇಳಿರಬಹುದು. ಸಂಗೀತ ಮತ್ತು ರಾಜಕೀಯದ ಜುಗಲ್ ಬಂದಿ ಭಾರತದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇವಲ ಆಟೋರಿಕ್ಷಾಗಳಲ್ಲಿ ಮಾತ್ರ ರಾಜಕಾರಣಿಗಳ ಅಥವಾ ರಾಜಕೀಯ ಪಕ್ಷಗಳ ಕುರಿತು ಹಾಡುಗಳು ಕೇಳಿಬರುತ್ತಿಲ್ಲ. ಆನ್ ಲೈನ್ ನಲ್ಲಿ ಬಹಳ ಸುಧಾರಣೆ ಕಂಡುಬರುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿನೂತನ ಸಾಹಿತ್ಯ ಮತ್ತು ಸಂಗೀತ ವಿಡಿಯೊಗಳ ಮೂಲಕ ಆನ್ ಲೈನ್ ನಲ್ಲಿ ರಾಜಕೀಯ ನಾಯಕರ ಕುರಿತು ಪ್ರಚಾರಗಳು ನಡೆಯುತ್ತಿವೆ. ರ್ಯಾಪ್ ಸಂಗೀತ ಕೂಡ ವಿಡಿಯೊದ ಭಾಗವಾಗಿದೆ.
ಇಂದಿನ ಯುವ ಮತದಾರರನ್ನು ತಲುಪಲು 2014ರ ಲೋಕಸಭೆ ಚುನಾವಣೆಯಲ್ಲಿ ಬಿಡೆಪಿ ಇಂತಹ ಮ್ಯೂಸಿಕ್ ವಿಡಿಯೊಗಳ ಪ್ರಯೋಗ ನಡೆಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಕೂಡ ಕೇಸರಿ ಪಕ್ಷ ಸೇರಿದಂತೆ ಕಾಂಗ್ರೆಸ್ ಮತ್ತು ಸ್ಥಳೀಯ ಪಕ್ಷಗಳು ಮತದಾರರನ್ನು ಓಲೈಸಲು ಮ್ಯೂಸಿಕ್ ವಿಡಿಯೊಗಳ ಮೊರೆ ಹೋಗಿವೆ.
ಮೋದಿಒನ್ಸ್ ಮೋರ್ ಎಂಬ ಹ್ಯಾಶ್ ಟಾಗ್ ನೊಂದಿಗೆ ಕಳೆದ ಜನವರಿಯಲ್ಲಿ ಬಿಜೆಪಿ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಒಂದು ಕಾರಣಕ್ಕೆ ವಿಭಿನ್ನವಾದ ರ್ಯಾಪ್ ಎಂದು ವಿಡಿಯೊದ ಟ್ಯಾಗ್ ಲೈನ್ ಆಗಿತ್ತು. ಈ ಬಾರಿ ರ್ಯಾಪ್ ಸಂಗೀತ ವಿಷಯದಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ರಾಜಕೀಯ ವಾರ್ ನಡೆಯಲಿದೆ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನಿಟ್ಟುಕೊಂಡು ರ್ಯಾಪ್ ಹಾಡು ಬಿಡುಗಡೆ ಮಾಡಲಾಗಿದೆ.
ಡಿಎಂಕೆ ತಮಿಳಿನಲ್ಲಿ ಹಾಡೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕಮಲ್ ಹಾಸನ್ ಅವರ ಪಕ್ಷದ ಉದ್ದೇಶವೇನೆಂದು ತಮಾಷೆಯ ಗುರುತು ಬಳಸಿ ಕಮಲ್ ಹಾಸನ್ ಅವರ ಪಕ್ಷದ ಗುರುತು ಟಾರ್ಚ್ ಲೈಟ್  ಮೇಲೆ ವಿಡಿಯೊವೊಂದನ್ನು ಬಿಡುಗಡೆ ಮಾಡಲಾಗಿತ್ತು.
ಚುನಾವಣೆಯಲ್ಲಿ ಮ್ಯೂಸಿಕ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಜನರೊಂದಿಗೆ ಸಂಪರ್ಕ ಬೆಸೆಯಲು ಸಂಗೀತ ಸಹಾಯವಾಗುತ್ತದೆ. ಸಂಗೀತದ ಮೂಲಕ ರಾಜಕೀಯ ಪ್ರಚಾರ ನಡೆಸಲಾಗುತ್ತದೆ ಎನ್ನುತ್ತಾರೆ ಬಿಜೂರ್ ಕನ್ಸಲ್ಟ್ ಇಂಕ್ ನ ಸ್ಥಾಪಕ ಹರೀಶ್ ಬಿಜೂರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com