ಕೈ ಟಿಕೆಟ್ ಫೈನಲ್: ಧಾರವಾಡದಿಂದ ವಿನಯ್ ಕುಲಕರ್ಣಿ, ದಾವಣಗೆರೆಯಿಂದ ಎಚ್.ಬಿ ಮಂಜಪ್ಪ ಕಣಕ್ಕೆ

ಕಾಂಗ್ರೆಸ್ ನಲ್ಲಿ ತೀವ್ರಗೊಂದಲಕ್ಕೆ ಕಾರಣವಾಗಿದ್ದ ಧಾರವಾಡ ಮತ್ತಿ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕೊನೆಗೂ ಬಗೆಹರಿದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಾಂಗ್ರೆಸ್ ನಲ್ಲಿ ತೀವ್ರಗೊಂದಲಕ್ಕೆ ಕಾರಣವಾಗಿದ್ದ ಧಾರವಾಡ ಮತ್ತಿ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕೊನೆಗೂ ಬಗೆಹರಿದಿದೆ.
ಪಕ್ಷದ ನಾಯಕ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಮಣೆ ಹಾಕಿದ್ದು, ತಡರಾತ್ರಿ ಟಿಕೆಟ್ ಪಟ್ಟಿ ಪ್ರಕಟಿಸಿದೆ. ಕ್ಷೇತ್ರದ ಟಿಕೆಟ್‍ಗಾಗಿ ಶಾಕಿರ್ ಸನದಿ ಹಾಗೂ ವಿಜಯ್ ಕುಲಕರ್ಣಿ ನಡುವೆ ತೀವ್ರ ಪೈಪೋಟಿ ಇತ್ತು. ಆದ್ರೆ ಹೈಕಮಾಂಡ್ ಕುಲಕರ್ಣಿಗೆ ಟಿಕೆಟ್ ನೀಡಿದೆ.
ದಾವಣಗೆರೆ ಕ್ಷೇತ್ರದಲ್ಲಿ ಎಚ್.ಬಿ.ಮಂಜಪ್ಪಗೆ ಟಿಕೆಟ್ ನೀಡಲಾಗಿದ್ದು, ಶ್ಯಾಮನೂರು ತಮ್ಮ ಬೆಂಬಲಿಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜಪ್ಪ ಕುರುಬ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ.
ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು, ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್, ಎಸ್ ಮಲ್ಲಿಕಾರ್ಜುನ ನಿರಾಕರಿಸಿದ್ದರು, ಈ ಹಿನ್ನೆಲೆಯಲ್ಲಿ ಎಚ್.ಬಿ ಮಂಜಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com