ಧಾರವಾಡದಲ್ಲಿ ವಿನಯ್ ಕುಲಕರ್ಣಿ V/S ಪ್ರಹ್ಲಾದ ಜೋಶಿ

ಧಾರವಾಡ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಗೆ ಟಿಕೆಟ್ ಘೋಷಿಸಿದ್ದು, ಬಿಜೆಪಿ ಅಭ್ರ್ಥಿಯ ಪ್ರಹ್ಲಾದ್ ಜೋಶಿ ಕಣಕ್ಕಿಳಿದಿದ್ದಾರೆ, ವಿನಯ್ ಕುಲಕರ್ಣಿ ...
ಪ್ರಹ್ಲಾದ್ ಜೋಶಿ ಮತ್ತು ವಿನಯ್ ಕುಲಕರ್ಣಿ
ಪ್ರಹ್ಲಾದ್ ಜೋಶಿ ಮತ್ತು ವಿನಯ್ ಕುಲಕರ್ಣಿ
ಹುಬ್ಬಳ್ಳಿ: ಧಾರವಾಡ ಕಾಂಗ್ರೆಸ್ ಅಭ್ಯರ್ಥಿಯಾಗಿ  ವಿನಯ್ ಕುಲಕರ್ಣಿ ಗೆ ಟಿಕೆಟ್ ಘೋಷಿಸಿದ್ದು, ಬಿಜೆಪಿ ಅಬ್ಯರ್ಥಿ ಪ್ರಹ್ಲಾದ್ ಜೋಶಿ ಕಣಕ್ಕಿಳಿದಿದ್ದಾರೆ, ವಿನಯ್ ಕುಲಕರ್ಣಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಮಾಹಿತಿ  ತಿಳಿದ ನಂತರ ಕಾಂಗ್ರೆಸ್ ವಿನಯ್ ಕುಲಕರ್ಣಿಗೆ ಟಿಕೆಟ್ ನೀಡಿದ್ದಾರೆ.
ಧಾರವಾಡ ಗ್ರಾಮೀಣದಿಂದ 2004ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ, ತಮ್ಮ ಸಾಮರ್ಥ್ಯ ತೋರಿದ್ದರು. 2013 ರ ವಿಧಾನಸಭೆ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಸೀಮಾ ಮಸೂತಿ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು.
2014ರ ಲೋಕಸಭೆ ಚುನಾವಣೆಯಲ್ಲಿ ದಾರವಾಡದಿಂದ ಬಿಜೆಪಿಯ ಪ್ರಹ್ಲಾದ್ ಜೋಷಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಅವರನ್ನು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಣಕ್ಕಿಳಿಸಿದ್ದರು, ವಿನಯ್ ಕುಲಕರ್ಣಿ ಸೋತಿದ್ದರು, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಮುಂದಾಳತ್ವ ವಹಿಸಿದ್ದ  ವಿನಯ್ ಕುಲಕರ್ಣಿ ಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನವೂ ಸಿಕ್ಕಿತ್ತು. ಆದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ವಿಧಾನಸಭೆ ಕ್ಷೇತ್ರದಿಂದ ಸೋತಿದ್ದರು,
ವಿನಯ್ ಕುಲಕರ್ಣಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿದ್ದಾರೆ.,ಹೀಗಾಗಿ ಅವರಿಗೆ ಟಿಕೆಟ್ ದೊರೆತಿದೆ, ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಇನ್ನೂ ಶಕೀರ್ ಗೆ ಟಿಕೆಟ್ ಸಿಗದಿರುವುದರಿಂದ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ, ಸ್ಥಳೀಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಶಕೀರ್ ವಿರುದ್ಧ ಹಾಗೂ ಕುಲಕರ್ಣಿ ಪರ ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಸಮಾಧಾನವಾಗಿರುವುದು, ನಿಜ ಆದರೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ, ನಾನೇ ಅಭ್ಯರ್ಥಿ ಎಂದು ಬಹುತೇಕ ಖಚಿತವಾಗಿತ್ತು, ಆದರೆ ನನಗೆ ಟಿಕೆಟ್ ಸಿಗದಿದ್ದಕ್ಕೆ ಕಾರಣ ತಿಳಿದಿಲ್ಲ, ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಪಕ್ಷಕ್ಕಾಗಿ ನಾನು ದುಡಿಯುವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com