ರಾಜ್ಯದ ಸಮ್ಮಿಶ್ರ ಸರ್ಕಾರ ಶೇ.20ರ ಕಮಿಷನ್ ಸರ್ಕಾರ: ಬಿಎಸ್‌ವೈ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಾಸದಲ್ಲಿನ ಐದು ಕಾಮಗಾರಿಗಳ ಪೂರ್ಣಗೊಳ್ಳುವಿಕೆಗಾಗಿ 1344 ಕೋಟಿ ರೂ. ಅಕ್ರಮ ಹಣವನ್ನು ಗುತ್ತಿಗೆದಾರರಿಗೆ ವಿತರಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ
ದಾವಣಗೆರೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಾಸದಲ್ಲಿನ ಐದು ಕಾಮಗಾರಿಗಳ ಪೂರ್ಣಗೊಳ್ಳುವಿಕೆಗಾಗಿ 1344 ಕೋಟಿ ರೂ. ಅಕ್ರಮ ಹಣವನ್ನು ಗುತ್ತಿಗೆದಾರರಿಗೆ ವಿತರಿಸಿದ್ದಾರೆ. ಇದಕ್ಕೆ ಸಿಎಂ ಮೊದಲು ಉತ್ತರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
"ಇದಕ್ಕೆ ಹೆಚ್ಚಿನ ವಂಚನೆಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ, ಈ ಸಮ್ಮಿಶ್ರ ಸರ್ಕಾರ 10% ಸರಕಾರವಲ್ಲ, ಬದಲಿಗೆ 20% ಕಮಿಷನ್ ಸರ್ಕಾರ" ಯಡಿಯೂರಪ್ಪ ಹೇಳೀದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಯಡಿಯೂರಪ್ಪ "ದೇವೇಗೌಡರು ತುಮಕೂರಿನಲ್ಲಿ ಸೋಲುತ್ತಾರೆ, ಸುಮಲತಾ ಮಂಡ್ಯದಲ್ಲಿ ಗೆಲ್ಲುತ್ತಾರೆ. ಕುಮಾರಸ್ವಾಮಿ ಅವರು ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಅವರಿಗೆ, ಅವರ ಕುಟುಂಬಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.
ಬಿಜೆಪಿ ಕರ್ನಾಟಕದಲ್ಲಿ 22, ಭಾರತದಾದ್ಯಂತ 300ಕ್ಕಿಂತ ಹೆಚ್ಚು ಸ್ಥಾನ ಗಳಿಸಲಿದೆ" ಅವರು ಹೇಳೀದರು.ಹಾಗೆಯೇ ನರೇಂದ್ರ ಮೋದಿ ಎರಡನೇ ಅವಧಿಗೆ ಭಾರತದ ಪ್ರಧಾನಿಯಾಗುವುದರಲ್ಲಿ ಯಾವ ಸಂದೇಹವಿಲ್ಲ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com