ತುಮಕೂರು: ಬಿಜೆಪಿಯ 'ಮುದಿ ಎತ್ತು' ಜಿ.ಎಸ್ ಬಸವರಾಜ್ ಪ್ರಚಾರದ ಗಮ್ಮತ್ತು!

ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 76 ವರ್ಷದ ಜಿಎಸ್ ಬಸವರಾಜು ದಿನನಿತ್ಯದಂತೆ ಬೆಳಗ್ಗೆ 3.30ಕ್ಕೆ ಎದ್ದು ಒಂದು ಗಂಟೆ ಯೋಗಾಭ್ಯಾಸದೊಂದಿಗೆ ...
ನಿರ್ಮಲಾನಂದ ಸ್ವಾಮೀಜಿ ಭೇಟಿ ಮಾಡಿದ ಜಿ.ಎಸ್ ಬಸವರಾಜು
ನಿರ್ಮಲಾನಂದ ಸ್ವಾಮೀಜಿ ಭೇಟಿ ಮಾಡಿದ ಜಿ.ಎಸ್ ಬಸವರಾಜು
ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 76 ವರ್ಷದ ಜಿಎಸ್ ಬಸವರಾಜು ದಿನನಿತ್ಯದಂತೆ ಬೆಳಗ್ಗೆ 3.30ಕ್ಕೆ ಎದ್ದು ಒಂದು ಗಂಟೆ ಯೋಗಾಭ್ಯಾಸದೊಂದಿಗೆ ತಮ್ಮ ದಿನ ಆರಂಭಿಸುತ್ತಾರೆ.
4 ಬಾರಿ ಸಂಸದರಾದಿರುವ ಜಿ.ಎಸ್ ಬಸವರಾಜು, ಚುನಾವಣೆ ಇರಲಿ ಇಲ್ಲದಿರಲಿ ತಮ್ಮ ನಿತ್ಯದ ಚಟುವಟಿಕೆಗಳು ಎಂದಿನಂತೆ ನಡೆಯುತ್ತಲೇ ಇರುತ್ತವೆ, ರಾಜಕೀಯ ಯೋಧನಂತೆತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ, ತಮ್ಮ ವಿರೋಧಿ ಎಚ್,ಡಿ ದೇವೇಗೌಡ ವಿರುದ್ಧ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಯುವಕರು ನಾಚುವಂತೆ ಬಸವರಕಾಜು ಹಗಲಿರುಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ, ಪ್ರತಿ ಸೀಸನ್ ಕೂಡ ಸುಲಭವಾಗಿರುತ್ತೆ, ಈ ಬಾರಿಯ ಸುಗ್ಗಿಯಲ್ಲಿ ಸಮೃದ್ಧಿಯಾಗಿರುತ್ತದೆ ಎಂದು ಹೇಳಿದ್ದಾರೆ, ದೇವೇಗೌಡರ ಎದುರಾಳಿಯಾಗಿ ಬಸವರಾಜು ಸರಿಸಮವಾಗಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ, 
ಬಸವರಾಜು ಕೂಡ ಮುದ್ದೆ ಮತ್ತು ಸೊಪ್ಪು ಇಷ್ಟ ಪಡುತ್ತಾರೆ,  ಪ್ರತಿದಿನ ಇವರಿಗೆ ಸೊಪ್ಪು ಇರಲೇಬೇಕು, ಪ್ರತಿರಾತ್ರಿ ನಾನು ಅರ್ಧ ಕೆಜಿ ಸೊಪ್ಪು ತಿನ್ನುತ್ತೇನೆ, ಇದೇ ನನ್ನ ಪ್ರಮುಖ ಆಹಾರವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕಳೆದ 30 ವರ್ಷಗಳಿಂದ ಮಧುಮೇಹಿಯಾಗಿದ್ದಾರೆ, ಸಕ್ಕೆರೆ ಪ್ರಮಾಣ ಏರಿದಾಗ ಇನ್ಸುಲಿನ್ ತೆಗೆದುಕೊಳ್ಳುತ್ತಾರೆ, ಕಾರ್ಯಕರ್ತರ ಜೊತೆಗಿನ ಸಭೆ ಯೊಂದಿಗೆ ದಿನಚರಿ ಆರಂಭಿಸುವ ಬಸವರಾಜು ನಂತರ, ಸ್ನೇಹಿತರು ಮತ್ತು ಪರಿಚಯಸ್ಥರ ಮನೆಗೆ ಭೇಟಿ ನೀಡುತ್ತಾರೆ, 
ರಾಷ್ಟ್ರೀಯ ಮಟ್ಟದಲ್ಲಿ ಬಸವರಾಜು ಅವರಿಗೆ ಅಂಥಹ ಅದೃಷ್ಠ ಖುಲಾಯಿಸಿಲ್ಲ, 1996 ರಲ್ಲಿ ದೇವೇಗೌಡರು ಪ್ರದಾನಿಯಾಗಿದ್ದರು, ಬಸವರಾಜದು ಎರಡು ಬಾರಿ ಸಂಸದರಾಗಿದ್ದರು,1999 ಮತ್ತು 2009 ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ,ಅವರನ್ನು ಒಮ್ಮೆಯೂ ಕೇಂದ್ರದ ಮಂತ್ರಿಯಾಗಿಲ್ಲ, 
ಗುರುವಾರ ತುಮಕೂರಿನ ಗುಬ್ಬಿ ಮತ್ತು ಮಧುಗಿರಿಯಲ್ಲಿ ಪ್ರಚಾರ ನಡೆಸಿದ ಬಸವರಾಜು, ನೆರೆಯ  ಆಂಧ್ರಪ್ರದೇಶದ ಹಿಂದಿಜೋಗಿ ಕಾಲೋನಿಯ 8 ಕುಟುಂಬಗಳಿಗೆ ಭೇಟಿ ನೀಡಿದ್ದರು, ನಿರಂರತ ಪ್ರಚಾರದ ನಡುವೆಯೂ ಸುಮಾರು 100 ಫೋನ್ ಕರೆ ಗಳನ್ನು ಅಟೆಂಡ್ ಮಾಡಿದ್ದಾರೆ.
ಚುನಾವಣೆ ಸಮಯದಲ್ಲಿ ನಾನು ಕಾರಿನಲ್ಲೇ ನಿದ್ದೆ ಮಾಡುತ್ತೇನೆ, ಇದೇ ರೀತಿ ನಾನು ನಿದ್ದೆ ಮಾಡಿಕೊಳ್ಳುತ್ತೇನೆ, ಪ್ರತಿದಿನ ಕೇವಲ ಎರಡೂವರೆ ಗಂಟೆ ಮಾತ್ರ ನಿದ್ದೆ ಮಾಡು ಬಸವರಾಜು 20 ಗಂಟೆ ಎಚ್ಚರವಾಗಿಯೇ ಇರುತ್ತಾರೆ, 
ಜಿ.ಎಸ್ ಬಸವರಾಜು ಪ್ರಬಲ ಲಿಂಗಾಯತ ಮುಖಂಡರಾಗಿದ್ದರೂ, ಅವರು ಎಂದಿಗೂ ಜಾತಿ ತಾರತಮ್ಯ ಮಾಡಿಲ್ಲ, ಅವರ ಕೈ ಕೆಳಗೆ ವೀರಣ್ಣಗೌಡ ಅವರಂತ ಒಕ್ಕಲಿಗ ನಾಯಕರು ಬೆಳೆದಿದ್ದಾರೆ, ಅವರು ಎಂದಿಗೂ ಒಂದು ನಿರ್ದಿಷ್ಟ ಜಾತಿಯ ನಾಯಕರಾಗಿ ನಿಂತಿಲ್ಲ,
ಬಿಜೆಪಿಯ ನಿಯತ್ತಿನ ನಾಯಕರಾಗಿರುವ ಬಸವರಾಜು ಯಡಿಯೂರಪ್ಪ ಅವರ ನಿಷ್ಠಾವಂತರಾಗಿದ್ದಾರೆ, ತಮ್ಮಮಗ ಎಂಜನೀಯರ್ ಪದವಿದರ ಜ್ಯೋತಿಗಣೇಶ್ 2013ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ನಗರದಿಂದ ಕೆಜೆಪಿಯಿಂದ ಗೆದ್ದಿದ್ದರು, 2018 ರಲ್ಲಿ ಬಿಜೆಪಿ ಟಿಕೆಟ್ ನಿಂದ ಮತ್ತೆ ಗೆದ್ದಿದ್ದಾರೆ, ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಾಗಿ ಜನಪ್ರಿಯರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com