ಕಮ್ಯುನಿಸ್ಟ್ ಸಿದ್ದಾಂತ ರಾಷ್ಟ್ರ ವಿರೋಧಿ, ಭಾರತದ ಆತ್ಮವನ್ನು ಪ್ರತಿನಿಧಿಸುವುದಿಲ್ಲ: ತೇಜಸ್ವಿ ಸೂರ್ಯ

ಭಾರತ ರಾಜಕೀಯ ರಂಗದ ಎರಡು ಪ್ರಮುಖ ಪಕ್ಷಗಳಾದ ಸಿಪಿಐ ಹಾಗೂ ಸಿಪಿಎಂ ಪಕ್ಷಗಳ ಸಿದ್ದಾತವು ರಾಷ್ಟ್ರ ವಿರೋಧಿಯಾಗಿದೆ ಎಂದು ಬೆಂಗಳುರು ದಕ್ಷಿಣದ ಭಾರತೀಯ ಜನತಾ ಪಕ್ಷ ಲೋಕಸಭಾ ಆಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
ಬೆಂಗಳೂರು: ಭಾರತ ರಾಜಕೀಯ ರಂಗದ ಎರಡು ಪ್ರಮುಖ ಪಕ್ಷಗಳಾದ ಸಿಪಿಐ ಹಾಗೂ ಸಿಪಿಎಂ ಪಕ್ಷಗಳ ಸಿದ್ದಾತವು ರಾಷ್ಟ್ರ ವಿರೋಧಿಯಾಗಿದೆ ಎಂದು ಬೆಂಗಳುರು ದಕ್ಷಿಣದ ಭಾರತೀಯ ಜನತಾ ಪಕ್ಷ ಲೋಕಸಭಾ ಆಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ತ್ರಿಪುರಾ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಾಗಾದರೆ ರಾಷ್ಟ್ರ ವಿರೋಧಿಗಳಾಗಿದ್ದಾರೆಯೆ ಎಂದು ಕೇಳಲಾಗಿ ಸೂರ" ಅವರು ಒಳ್ಳೆಯ ವ್ಯಕ್ತಿಗಳು  ಎನ್ನುವುದು ಸತ್ಯ, ಆದರೆ ಅವರ ಪಕ್ಷದ ಸಿದ್ದಾಂತ ಮಾತ್ರ ರಾಷ್ಟ್ರ ವಿರೋಧಿಯಾಗಿದೆ ಎಂದಿದ್ದಾರೆ. ಗುರುವಾರ ಪತ್ರಿಕೆಯೊಡನೆ ನಡೆದ ವಿಶೇಷ ಮಾತುಕತೆಯ ವೇಳೆ ಬಿಜೆಪಿಯ ಹಿರಿಯ ನಾಯಕ ಎಚ್.ಎನ್. ಅನಂತ್ ಕುಮಾರ್ ಅವರ ಪ್ರಬಲ ಕ್ಷೇತ್ರವಾದ ಬೆಂಗಳುರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾತನಾಡಿದರು."ಅನಂತ್ ಕುಮಾರ್ ನನಗೆ ರೊಲ್ ಮಾಡೆಲ್" ಸೂರ್ಯ ಹೇಳಿದ್ದಾರೆ.

ತೇಜಸ್ವಿನಿ ಅನಂತ್ ಕುಮಾರ್ ಅವರ ಸ್ಥಾನದಲ್ಲಿ ಸೂರ್ಯ ಅವರನ್ನು ಬಿಕೆಪಿ ಅಭ್ಯರ್ಥಿ ಎಂದು ಘೋಷಿಸಿದಾಗ ಬಿಜೆಪಿ ರಾಜ್ಯ ಘಟಕದಲ್ಲಿ ಸಣ್ಣ ಪ್ರಮಾಣದ ಕೋಲಾಹಲ ಉಂಟಾಗಿತ್ತು. ಪತ್ರಿಕೆ ಕಛೇರಿಯಲ್ಲಿ 40 ನಿಮಿಷಗಳ ಸಂವಾದದಲ್ಲಿ ಭಾಗವಹಿಸಿದ್ದ ಸೂರ್ಯ ಬಿಜೆಪಿಯ ಹಳೆಯ ನಾಯಕರೊಡನೆ ತಮ್ಮ ಸಂಬಂಧಗಳ ಕುರಿತು ಹೇಳಿದ್ದಾರೆ.ಚುನಾವಣಾ ರಾಜಕೀಯದಲ್ಲಿದ್ದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಮಾತನಾಡಿದ ಅವರು ಎಡರಂಗದ ಪಕ್ಷಗಳು ರಾಷ್ಟ ವಿರೋಧಿ ಎನ್ನುವುದು ತಪ್ಪಲ್ಲ.ಎಂದರು.

ಸರ್ಕಾರವನ್ನು ಟೀಕಿಸಿದರೆ ರಾಷ್ಟ್ರ ವಿರೋಧಿಗಳಾಗಲ್ಲ ಎನ್ನುವುದು ಸರಿ ಆದರೆ ರಾಷ್ಟ್ರದಲ್ಲಿ ಹಿಂಸಾಚಾರಕ್ಕೆ ಆಸ್ಪದ ನೀಡುವ, ಗಲಭೆಗೆ ಕರೆ ನೀಡುವುದನ್ನು ಸಹಿಸಲಾಗುವುದಿಲ್ಲ. ಸಂವಿಧಾನಾತ್ಮಕ ಮೌಲ್ಯಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನೆ ಮತ್ತು ಧರ್ಮದಲ್ಲಿ ನಂಬಿಕೆ ಇರದ ಯಾವುದೇ ಸಿದ್ಧಾಂತವು ರಾಷ್ಟ್ರದಿಂದ ರಾಷ್ಟ್ರೀಯ ವಾದದಿಂದ ಪ್ರತ್ಯೇಕವಾಗಿದೆ. ಅದು ಭಾರತದ ಆತ್ಮವನ್ನು ಪ್ರತಿನಿಧಿಸುವುದಿಲ್ಲ ಎಂದು  ನಾನು ಭಾವಿಸುತ್ತೇನೆ- ಅವರು ಹೇಳಿದರು.

ಬಿಜೆಪಿಯ ಮುಂದಾಳುಗಳಾದ ಆರ್. ಅಶೋಕ್ ಕ್ಷೇತ್ರದ ಜನರ ಮನಸ್ಥಿತಿ ಬಗ್ಗೆ ಅರಿವು ಮೂಡಿಸಿದ್ದಾರೆ. ಸತೀಶ್ ರೆಡ್ಡಿ ನನಗೆ ಪರಿಚಯವಿಲ್ಲದ ಪ್ರಮುಖ ಜನರಿಗೆ ಮತ್ತು ಸ್ಥಳಗಳ ಪರಿಚಯ ಮಾಡಿಸಿದ್ದಾರೆ. ಅವರು ಜನರನ್ನು ಸ್ವಾಗತಿಸಲು ಕಾರ್ ನ ಗಾಜನ್ನು ಕೆಳಗಿಳಿಸುವುದಕ್ಕೆ ನನಗೆ ಹೇಳಿಕೊಟ್ಟರು. ಇನ್ನು ಉದಯ್ ಗರುಡಾಚಾರ್ ನನಗೆ ಗಂಟಲು ತೊಂದರೆಯಾಗಬಹುದೆಂದು ಪ್ಯಾಕೆಟ್ ನಲ್ಲಿನ ಮಜ್ಜಿಗೆ ಕುಡಿಯುವುದನ್ನು ನಿಲ್ಲಿಸಲು ಸೂಚಿಸಿದರು. ಮೇಲ್ನೋಟಕ್ಕೆ ಇದೆಲ್ಲವೂ ಸಣ್ಣ ವಿಚಾರ, ಆದರೆ ಅವೆಲ್ಲವೂ ಮುಖ್ಯವಾಗಿದೆ ಎಂದು ಸೂರ್ಯ ಹೇಳುತ್ತಾರೆ.

ಹಿಂದುತ್ವವನ್ನು ನೋಡುವ ರೀತಿ ಮರುಶೋಧನೆಗೊಳ್ಳಬೇಕಾದ ಅಗತ್ಯವಿದೆ ಎನ್ನುವ ತೇಜಸ್ವಿ ಸೂರ್ಯ ತಾವು ಆಲೋಚನೆಗಳನ್ನು ರೂಪಿಸುವ "ಚಿಂತಕ ರಾಜಕಾರಣಿ" ಎಂದು ಕರೆದುಕೊಂಡಿದ್ದಾರೆ.. "ನಾನು ಪಕ್ಷದ ನಾಯಕತ್ವಕ್ಕಾಗಿ ಪರಿಗಣಿಸಲ್ಪಟ್ಟ ಕಾರಣಗಳಲ್ಲಿ ಇದೂ ಒಂದಾಗಿದೆ.ನಾನು ಚಿಂತಕ ರಾಜಕಾರಣಿ. ನ್ನ ಆಲೋಚನೆಗಳು ವಿಕಾಸಗೊಳ್ಳಬಹುದು ಮತ್ತು ಚಿಕ್ಕ ವಯಸ್ಸಿನಲ್ಲೇ ನಾನು ಹಲವು ಸಮಸ್ಯೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಇದು ನನ್ನ ಅನುಭವವನ್ನು ವಿಶಾಲಗೊಳಿಸಲಿದೆ"

"ಮೋದಿಯವರನ್ನು ಬೆಂಬಲಿಸಲು ನೀವು ಯುವಕರೊಡನೆ ಟಿ ಶರ್ಟ್ ಧರಿಸಿ ನಿಲ್ಲುವಿರಾದರೆ ಏನೂ ತಪ್ಪಲ್ಲ,  ಮೋದಿ ಅಭಿಮಾನಿ ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com