ಪಕ್ಷ ವಹಿಸಿದ ಕೆಲಸ ನಿರ್ವಹಿಸುತ್ತಿದ್ದೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯಿಸಿಲ್ಲ: ಶೋಭಾ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ....

Published: 09th April 2019 12:00 PM  |   Last Updated: 09th April 2019 11:51 AM   |  A+A-


Shobha Karandlaje

ಶೋಭಾ ಕರಂದ್ಲಾಜೆ

Posted By : SD SD
Source : The New Indian Express
ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಚುನಾವಣೆ ನಂತರ ಕಳೆದ ಐದು ವರ್ಷಗಳಿಂದ ಸ್ವಕ್ಷೇತ್ರದಲ್ಲಿ ಶೋಭಾ ಅವರು ಹೆಚ್ಚು ಕಾಣಿಸಿಕೊಂಡಿಲ್ಲ, ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ,  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಎಲ್ಲಾ ಆರೋಪಗಳಿಗೂ ಸಮರ್ಥನೆ ನೀಡಿದ್ದಾರೆ.

ಪ್ರ: ಯಾವ ಸಾಧನೆಗಳ ಆಧಾರದ ಮೇಲೆ ಮತ್ತೆ ಪುನಾರಾಯ್ಕೆ ಬಯಸಿದ್ದೀರಿ?
ರಾಜ್ಯದ ಎಲ್ಲಾ ರಾಷ್ಚ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿದ್ದೇವೆ, ಕರಾವಳಿಯ ಜನರ ಬಹು ನಿರೀಕ್ಷಿತ ಮಂಗಳೂರು-ಮುಂಬೈ ಕೊಂಕಣ ರೈಲ್ವೆ ಮಾರ್ಗವನ್ನು ದ್ವಿಪಥ ಮತ್ತು ವಿದ್ಯುದೀಕರಣ ಗೊಳಿಸುವ ಪ್ರಕ್ರಿಯೆಯು ಈಗಾಗಲೇ ಪ್ರಗತಿಯಲ್ಲಿದ್ದು ಮುಂದಿನ ಅವಧಿಯಲ್ಲಿ ಕಾಮಗಾರಿ ಆರಂಭವಾಗಲಿದೆ. ಕೇಂದ್ರೀಯ ವಿದ್ಯಾಲಯ ತಂದಿದ್ದೇನೆ, ಕೌಶಲ್ಯಾಭಿವೃದ್ಧಿ ಕಾಲೇಜು, ಜಿಟಿ ಮತ್ತು ಟಿಸಿ, ಅಡಿಕೆ ಬೆಲೆ ಕಡಿಮೆಯಾದಾಗ ಅದರ ಬೆಲೆ ಏರಿಕ ಮಾಡಿಸಿದ್ದೇನೆ, ಮೋದಿ ಅವರು ದೇಶಕ್ಕೆ ಅನಿವಾರ್ಯ

ಪ್ರ:ಕರಾವಳಿ ಕರ್ನಾಟಕದಲ್ಲಿ ಮೋದಿ ಅಲೆಯಿಂದ ಮಾತ್ರ ಅಭ್ಯರ್ಥಿಗಳ ಗೆಲುವು ಎಂಬುದನ್ನು ನೀವು ನಂಬುತ್ತೀರಾ?
ನಮ್ಮ ಸಾಧನೆಗಳ ಬಗ್ಗೆ ನಮ್ಮ ವಿರೋಧಿಗಳು ತಪ್ಪಾಗಿ ಬಿಂಬಿಸುತ್ತಿದ್ದಾರೆ, ಪ್ರಚಾರ ತೆಗೆದುಕೊಳ್ಳುವಲ್ಲಿ ನಾವು ಹಿಂದೆ ಉಳಿದಿರಬಹುದು, ಆದರೆ ಅಭಿವೃದ್ಧಿ, ಅನುಷ್ಠಾನಗಲ್ಲಿ ಮುಂದಿದ್ದೇವೆ, ಮೋದಿ ನಮ್ಮ ನಾಯಕ ಅದರ ಬಗ್ಗೆ ಹೆಮ್ಮೆ ಇದೆ.

ಪ್ರ: ಎಂಟು ಮೀನುಗಾರರು ನಾಪತ್ತೆಯಾಗಿ ನಾಲ್ಕು ತಿಂಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ?
ಮೀನುಗಾರರ ನಾಪತ್ತೆ ನಂತರ ಎಫ್ ಐ ಆರ್ ದಾಖಲಾದ ಮೇಲೆ ಅವರನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಪ್ರಯತ್ನಿಸಿತು. ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ನಾವು ಚರ್ಚಿಸಿದ್ದೇವೆ, ಹೀಗಾಗಿ ಸದ್ಯ ಕೇಂದ್ರ ಸರ್ಕಾರ ನೌಕಾ ದಳದ ಜೊತೆ ಜಂಟಿ ಪರಿಶೀಲನೆ ನಡೆಸುತ್ತಿದೆ.

ಪ್ರ: ಕಳೆದ ಐದು ವರ್ಷಗಳಲ್ಲಿ ನೀವು ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲವಲ್ಲ?
ಪಕ್ಷ ನನಗೆ ಕೆಲವು ಮಹತ್ತರವಾದ ಜವಾಬ್ದಾರಿಗಳನ್ನು ವಹಿಸಿತ್ತು, ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ್ದೇನೆಸ  ಮಧ್ಯದಲ್ಲಿ ವಿಧಾನ ಸಭೆ ಚುನಾವಣೆ ಎದುರಾಯಿತು, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಯಿತು. ಆದರೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ, ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp