ಕೇಂದ್ರದಲ್ಲಿ ಬಲಿಷ್ಠ ಸರ್ಕಾರಕ್ಕಾಗಿ ನಮ್ಮ ಮತ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ನಿವಾಸಿಗಳ ಅಭಿಮತ

ಡಿಸೆಂಬರ್ 2018ರಲ್ಲಿ ಮಲ್ಪೆಯಿಂದ ಹೊರಟ ಎಂಟು ಮೀನುಗಾರರು ನಾಪತ್ತೆಯಾಗಿ ಐದು ತಿಂಗಳಾಗುತ್ತಾ ಬಂದರೂ ನಾಪತ್ತೆಯಾದವರ ಪತ್ತೆಯಾಗಿಲ್ಲ. ಮೀನುಗಾರರನ್ನು ಪತ್ತೆಹಚ್ಚುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂಬ ಕೋಪ....
ಮಲ್ಪೆ ಬಂದರಲ್ಲಿನನ ಒಂದು ದೃಶ್ಯ
ಮಲ್ಪೆ ಬಂದರಲ್ಲಿನನ ಒಂದು ದೃಶ್ಯ
ಉಡುಪಿ: ಡಿಸೆಂಬರ್ 2018ರಲ್ಲಿ ಮಲ್ಪೆಯಿಂದ ಹೊರಟ ಎಂಟು ಮೀನುಗಾರರು ನಾಪತ್ತೆಯಾಗಿ ಐದು ತಿಂಗಳಾಗುತ್ತಾ ಬಂದರೂ ನಾಪತ್ತೆಯಾದವರ ಪತ್ತೆಯಾಗಿಲ್ಲ. ಮೀನುಗಾರರನ್ನು ಪತ್ತೆಹಚ್ಚುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂಬ ಕೋಪವು ಇಲ್ಲಿನ ಸ್ಥಳೀಯ ಮೀನುಫ಼್ಗಾರರಲ್ಲಿ ಇನ್ನೂ ಆರಿಲ್ಲ.ಉಡುಪಿ-ಚಿಕ್ಕಮಗಳೂರು ಕ್ಷೇತ್ರದಡಿಯಲ್ಲಿ ಬರುವ ಮೀನುಗಾರರ ಈ ಪ್ರದೇಶದಲ್ಲಿ ಮೀನುಗಾರರ ಸಮುದಾಯ ತಾವು ಚುನಾವಣೆಯನ್ನು ಬಹಿಷ್ಕರಿರುವುದಾಗಿ ಹೇಳಿದೆ.. "ಯಾವುದೇ ಪಕ್ಷವು ಮೀನುಗಾರರ ಸಮುದಾಯದ ಹಿತ ಕಾಯಲು ಸಫಲವಾಗಿಲ್ಲ.  ನಾವು ಕೆಲಸ ಮತ್ತು ಆಹಾರಕ್ಕಾಗಿ ಹಗಲಿರುಳೂ ಶ್ರಮವಹಿಸಿದರೂ ನಮಗೆ ತಕ್ಕ ಪ್ರತಿಫಲ ದೊರಕುತ್ತಿಲ್ಲ. ಸರ್ಕಾರ  ಕನಿಷ್ಠ ನಮ್ಮ ಕಾಣೆಯಾದ ಮೀನುಗಾರರನ್ನು  ಪತ್ತೆಹಚ್ಚುವ ಕೆ;ಲಸವನ್ನೂ ಮಾಡುತ್ತಿಲ್ಲ.ಎಂದು  ಮೀನುಗಾರರ ಸ್ವಸಹಾಯ ಗುಂಪಿನ ನಾಯಕ ಮಲ್ಪೆ ಅಪ್ಪಿ ಹೇಳಿದ್ದಾರೆ.
ಆದರೆ ಮಲ್ಪೆ ಹೊರತಾಗಿ ಇತರೆ ಕಡೆಗಳಲ್ಲಿ ಮೀನುಗಾರರು ಇಂದಿಗೂ ಶೋಭಾ ಕರಂದ್ಲಾಜೆ ಅವರ ಪರವಾಗಿಯೇ ಇದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಬಯಸುವ ಈ ಮೀನುಗಾರರು ಜೆಡಿಎಸ್ ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ಪ್ರಮೋದ್ ಮದ್ವರಾಜ್ ಅವರ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. 
ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭೆ ಕ್ಷೇತ್ರಗಳಲಿ ಏಳರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.ಅಂತೆಯೇ ಜಿಲ್ಲೆಯಲ್ಲಿ ಯಾವೊಬ್ಬ ಜೆಡಿಎಸ್ ಶಾಸಕರೂ ಇಲ್ಲ. ಜೆಡಿಎಸ್ ಬಗ್ಗೆ ಈ ಕ್ಷೇತ್ರದಲ್ಲಿ ಜನಪ್ರಿಯತೆ ಅಷ್ಟಕ್ಕಷ್ಟೇ ಆಗಿದ್ದು ರಾಷ್ಟ್ರೀಯತೆ ಕುರಿತ ಉತ್ಸಾಹ, ನರೇಂದ್ರ ಮೋದಿ ಪರ ಒಲವು ಸಹ ಸೇರಿಕೊಂಡಿದೆ.ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಗೆಲುವು ಸವಾಲಾಗಿದೆ. ಜನರು ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದನ್ನು ನೋಡುತ್ತಾರೆ. ಎಂದು ಕಾಪುವಿನ ಚಂದ್ರ ಶೆಟ್ಟಿ ಹೇಳಿದ್ದಾರೆ. 
 "ನರೇಂದ್ರ ಮೋದಿ ಪ್ರಧಾನಿಯಾಗಿ ಮರಳಬೇಕೆಂದು ನಾವು ಬಯಸುತ್ತೇವೆ. ನಾವು ಬಿಜೆಪಿಗೆ ಮತ ಚಲಾಯಿಸುತ್ತೇವೆ. ಅವರ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೇರಬೇಕು. ನಾವು ವೈಯಕ್ತಿಕವಾಗಿ ಅಭ್ಯರ್ಥಿಯನ್ನು ಇಷ್ಟಪಡದೆ ಹೋದರೂ ಸಹ ನಮ್ಮ ಒ;ಅವು ಮೋದಿಯವರ ಕಡೆಗಿದೆ" " ಇನ್ನೋರ್ವ ಸ್ಥಳೀಯರಾದ ಪ್ರಕಾಶ್ ಪೂಜಾರಿ ಹೇಳಿದ್ದಾರೆ.
ಇನ್ನು ಹಿಂದುತ್ವ, ರಾಷ್ಟ್ರೀಯತೆಯ ವಿಚಾರದಲ್ಲಿ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ದಲಿತರ ಕೂಗು ದುರ್ಬಲವಾಗಿದೆ.ಕಾಪು ನಿವಾಸಿಯಾದ ಅಕ್ಬರ್ ಅಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ ". "ಅವರು ನಮಗೆ ಪ್ರಾತಿನಿಧ್ಯವನ್ನು ಅಥವಾ ಧ್ವನಿಯನ್ನು ನಿಡಲಾರರು, . ಈಗ, ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರಾದರೂ ಸರಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ" :ಇನ್ನ್ಯು ಉಡುಪಿಯ ರಾಜೀವ್ ನಗರದಲ್ಲಿನ ಎಸ್ಸಿ ಎಸ್ಟಿ ಕಾಲೋನಿಗೆ ಭೇಟಿ ನೀಡಿದಾಗ ಅಲ್ಲಿನ ಜನರು ಇಂದಿಗು ಪ್ರತಿದಿನ ನೀರಿನ ಸಮಸ್ಯೆ ಎದುರಿಸುವುದು ಕಂಡುಬಂದಿದೆ. ಮೂರು ದಿನಗಳಲ್ಲಿ ಒಮ್ಮೆ ಬರುವ ನೀರಿಗಾಗಿ  ಮನೆಯಲ್ಲಿರುವ ಎಲ್ಲಾ ಪಾತ್ರೆಗಳನ್ನು ಬಳಸಲಾಗುತ್ತದೆ. "ನನ್ನ ಮಗಳು ಎಂಕಾಂ ಪದವೀಧರೆ. ಆದರೆ  ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ.. ಉಡುಪಿಯ ಗಾಜಿನ ಕಾರ್ಖಾನೆಯಲ್ಲಿ ಸಣ್ಣ ಕೆಲಸಕ್ಕೆ ಸೇರಿ ದುಡಿಯಬೇಕಾಗಿದೆ."ಕಾಲೋನಿಯ ನಿವಾಸಿ ಜಿ. ತಿಮ್ಮ ಎಂಬುವವರು ಹೇಳಿದ್ದಾರೆ.ಈ ಕಾಲೋನಿಯ ಹೆಚ್ಚಿನ ಮಹಿಳೆಯರು ಮನೆಗೆಲಸ, ಬಳೆ ಕಾರ್ಕಾನೆ, ಗಾಜಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.. ಯಾವುದೇ ಸಂಘಟಿತ ಕ್ಷೇತ್ರದ ಉದ್ಯೋಗಗಳು ಇಲ್ಲಿಲ್ಲವಾಗಿ ಪುರುಷರು ಸಹ ಕೂಲಿ ಕಾರ್ಮಿಕರಾಗಿ ದಿನದ ಸಂಬಳಕ್ಕೆ ದುಡಿಉತ್ತಿದ್ದಾರೆ."ನಾನು ಹಿಂದೆ ಪಕ್ಷವೊಂದಕ್ಕೆ ಸೇರಿದ್ದೆ. ಆದರೆ ಚುನಾವಣೆ ಮುಗಿದ ಬೆನ್ನಲ್ಲೇ ನಾಯಕರು ನಮ್ಮನ್ನು ಮರೆಯುತ್ತಾರೆ"  ಜಗದೀಶ್ ಜೆ ಎಂಬುವವರು ಹೇಳಿದ್ದಾರೆ.
ಕಾಪು ಪ್ರದೇಶದ ಅನೇಕ ಮಹಿಳೆಯರಿಗೆ ಬೀಡಿ ಕಟ್ಟುವುದು ಪ್ರಮುಖ ಉದ್ಯೋಗವಾಗಿದೆ.ಅನೇಕ ಮಹಿಳೆಯರು ಇದನ್ನು ಅರೆಕಾಲಿಕ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಅವರು ದಿನಕ್ಕೆ 150 ರೂ ಸಂಪಾದಿಸುತ್ತಾರೆ.ಇನ್ನು ಇಲ್ಲಿನ ಕೆಲ ಗ್ರಾಮಗಳಿಗೆ ಇಂದಿಗೂ ಬಸ್ ಸೌಕರ್ಯವಿಲ್ಲ.ಆಟೋರಿಕ್ಷಾಗಳಿಗೆ ದುಬಾರಿ ಹಣ ತೆತ್ತು ಪೇಟೆಗೆ ಹೋಗಬೇಕಾಗುವುದು.  ಕಿರಾಣಿ ಸಾಮಾನು ಖರೀದಿಗೆ ಸಹ    2 ಕಿ.ಮೀ ದೂರ ಹೋಗಬೇಕು.. "ನಾನು ಯಾವಾಗಲೂ ಕಾಂಗ್ರೆಸ್ ಗೆ ಮತ ಹಾಕುತ್ತೇನೆ. ಆದರೆ ಕಳೆದ ಬಾರಿಯಿಂದ ನಾನು ಬಿಜೆಪಿಗೆ ಬದಲಾಗಿದ್ದೇನೆ. ಎಂದು ಕಲ್ಲುಗುಡ್ಡ  ನಿವಾಸಿ 75  ವರ್ಷದ ಮಂಗರಮ್ಮ ಹೇಳಿದ್ದಾರೆ. ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಕಾಣಿಸಿದ ಬಳಿಕ ಅವರನ್ನು ಅವರ ಪುತ್ರ ಎರಡು ಕಿಮೀ ದೂರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.
"ಒಬ್ಬ ಸಂಸದ ದರಿಗಿಂತ ತಳಮಟ್ಟದಲ್ಲಿ ಬದಲಾವಣೆಗೆ ಕಾರಣವಾಗುವ ಗ್ರಾಮ ಪಂಚಾಯತ್ ಸದಸ್ಯರು ನಮಗೆ ಅತೀ ಮುಖ್ಯ.ಕುಂದಾಪುರ ತಾಲೂಕು ಹೇರೂರು ಗ್ರಾಮದ  ಬಡಗಿ ಜನಾರ್ಧನ್ ಆಚಾರಿ ಹೇಳೀದ್ದಾರೆ.ಮತದಾನದ ಬಗ್ಗೆ ಆಸಕ್ತಿ ಇಲ್ಲದ ಹೊರತಾಗಿಯೂ ಅವರು ಗ್ರಾಮಸ್ಥರು ಒಂದೇ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾರೆ ಎಂದು ಹೇಳುತ್ತಾರೆ. ಅಲ್ಲದೆ ಓರ್ವ ಪ್ರಧಾನಿ ಕೆಲಸವನ್ನು ಪರೀಕ್ಷಿಸಲು ಐದು ವರ್ಷಗಳ ಅವಧಿ ಬಹಳ ಕಡಿಮೆ ಎನ್ನುವುದು ಅವರ ನಿಲುವು. ಕುಂದಾಪುರದಲ್ಲಿರುವ ಮಧುಗಡ್ಡೆಯ ನಿವಾಸಿ ಪ್ರವೀಣ್ ಖಾರ್ವಿ . ಹಿಂದುತ್ವ, ರಾಷ್ಟ್ರೀಯತೆ ಹೊರತು ಇತರೆ ಯಾವ ವಿಚಾರಗಳೂ ಇಲ್ಲಿ ಕೆಲಸ ಮಾಡುತ್ತಿಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com