ಯಡಿಯೂರಪ್ಪ
ಯಡಿಯೂರಪ್ಪ

2014ಕ್ಕಿಂತ ಈ ಬಾರಿ ಎಲ್ಲಾ ಕಡೆ ಮೋದಿ ಅಲೆ ಹೆಚ್ಚಿದೆ, ನಾವು 22 ಸೀಟು ಗೆಲ್ಲುತ್ತೇವೆ: ಯಡಿಯೂರಪ್ಪ

ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಬಿಜೆಪಿ 22 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ....
ಬೆಂಗಳೂರು: ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಬಿಜೆಪಿ 22 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಗೆ ನೀಡಿರುವ ಸಂದರ್ಶನದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾದರೂ ತಾವೂ ರಾಜ್ಯ ರಾಜಕೀಯದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.
ಪ್ರ: 22 ಲೋಕಸಭೆ ಕ್ಷೇತ್ರಗಳನ್ನು ಹೇಗೆ ತಲುಪುತ್ತೀರಿ?
ನಾನು ರಾಜ್ಯದ ಎಲ್ಲಾ ಲೋಕಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ, 2014ಕ್ಕೆ ಹೋಲಿಸಿದರೇ 2019ರಲ್ಲಿ ಮೋದಿ ಅಲೆ ಹೆಚ್ಚಾಗಿದೆ.  ಎಲ್ಲೆಡೆ ಮೋದಿ ಜಪ ಕೇಳಿ ಬರುತ್ತಿದೆ,  ನಾನು ನಿನ್ನೆ ಕೋಲಾರದಲ್ಲಿದ್ದೆ, ಅಷ್ಟೊಂದು ದೊಡ್ಡ ಮಟ್ಟದಲ್ಲಿ ನಾನು ಜನಸ್ತೋಮವನ್ನು ನೋಡಿರಲಿಲ್ಲ, ಖರ್ಗೆ ಮತ್ತು ಮುನಿಯಪ್ಪ ಸೋಲು ಖಚಿತ.
ಪ್ರ: ನಿಮ್ಮ ಅಭ್ಯರ್ಥಿಗಳು ಮೋದಿ ಹೆಸರು ಹೇಳಿಕೊಂಡು ಮತಯಾಚಿಸುತ್ತಿದ್ದಾರೆ, ಇದು ಕೇವಲ ಒಬ್ಬ ವ್ಯಕ್ತಿಗಾಗಿ  ಈ ಚುನಾವಣೆ ನಡೆಯುತ್ತಿದೆಯೇ?
ರಾಜ್ಯ ಸರ್ಕಾರದ ವೈಫಲ್ಯ ಹಾಗೂ  ಕೇಂದ್ರದ ಸಾಧನೆಗಳನ್ನು ಜನರಿಗೆ ತಿಳಿಸುತ್ತೇವೆ, ಕಳೆದ ಐದು ವರ್ಷಗಳಿಂದ ಮೋದಿ ಸರ್ಕಾರ ಮಾಡಿರುವ ಸಾಧನೆಗಳನ್ನು ಈಗಾಗಲೇ ಕರ್ನಾಟಕಲ್ಲಿ ತಿಳಿಸಿದ್ದೇವೆ, ಜನರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ, ಅವರಿಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಬೇಕಿದೆ.
ಈ ಬಾರಿ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ?
ನಾವು 104 ಶಾಸಕರನ್ನು ಹೊಂದಿದ್ದೇವೆ, ಕಾಂಗ್ರೆಸ್ ಕೆಲವು ಶಾಸಕರನ್ನು ಕಣಕ್ಕಿಳಿಸಿದೆ,  ಮತ್ತು ಕೆಲ ಶಾಸಕರು ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಅವರ ಶಾಸಕರ ಸಂಖ್ಯೆ ಕಡಿಮೆಯಾಗುತ್ತದೆ, ಲೋಕಸಭೆ ಚುನಾವಣೆ ನಂತರ ಏನು ಬೇಕಾದರೂ ಆಗಬಹುದು, ನಾವು ಈ ಮೊದಲೇ ನಾವು ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದೆಂದು ನಿರ್ಧರಿಸಿದ್ದೆವು, 
ಪ್ರ: ಲೋಕಸಭೆ ಚುನಾವಣೆ ನಂತರ ನೀವು ರಾಜ್ಯ ರಾಜಕೀಯದಲ್ಲೇ ಇರುತ್ತೀರಾ ಅಥವಾ ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತೀರೋ?
ಹಾಗೆಲ್ಲ ಏನೂ ಇಲ್ಲ, ನಾನು ಕರ್ನಾಟಕದಲ್ಲೇ ಇದ್ದು ಕೆಲಸ ಮಾಡುತ್ತೇನೆ, ಮುಂದಿನ ನಾಲ್ಕು ವರ್ಷಗಳ ಕಾಲ ವಿರೋಧ ಪಕ್ಷದ ಮುಖಂಡನಾಗಿ ಕೆಲಸ ಮಾಡುತ್ತೇನೆ, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟುತ್ತೇನೆ, 
ಪ್ರ: ವಿಜಯಪುರ ಮತ್ತು ಚಿಕ್ಕೋಡಿಯಲ್ಲಿ ಪಕ್ಷ ಆಂತರಿಕ ಕಲಹ ಎದುರಿಸುತ್ತಿದೆಯಲ್ಲಾ?
ಬಸವನಗೌಡ ಪಾಟೀಲ್,ನರೇಂದ್ರ ಮೋದಿ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಅವರು ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಲ್ಲ, ಚಿಕ್ಕೋಡಿಯಲ್ಲಿ ನಮ್ಮ  ನಾಯಕರುಗಳೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ, ಹಾಲಿ ಸಂಸದರ ಬಗ್ಗೆ ವಿರೋಧಿ ಅಲೆ ಎದ್ದಿದೆ, ಹೀಗಾಗಿ ನಮ್ಮ ಅಭ್ಯರ್ಥಿ ಭಾರೀ ಮತಗಳ ಅಂತರದಿಂದ ಗೆಲ್ಲುತ್ತಾರೆ.
ಪ್ರ: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಭಿನ್ನಾಭಿಪ್ರಾಯ ಚುನಾವಣೆ ನಂತರ ಹೇಗೆ ಪರಿಣಾಮ ಬೀರುತ್ತದೆ?
ಇದು ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ, 22 ಸೀಟುಗಳಲ್ಲಿ ನಾವು ಜಯಗಳಿಸುತ್ತೇವೆ.
ಪ್ರ: ರಾಜ್ಯ ನಾಯಕರ ಸಲಹೆ ಕಡೆಗಣಿಸಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ್ದೇಕೆ?
ನಮ್ಮದು ರಾಷ್ಟ್ರೀಯ ಪಕ್ಷ, ಪ್ರಧಾನಿ ಮೋದಿ ಅವರನ್ನೊಳಗೊಂಡ ಕೇಂದ್ರ ಚುನಾವಣಾ ಸಮಿತಿ,ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಕೆಲವು ನಿಯಂತ್ರಿಸಲಾಗದ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ದೊರೆತಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪ್ರ: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ,.ಹೇಗೆ ನಿಮಗೆ ಇಷ್ಟೊಂದು ಆತ್ಮ  ವಿಶ್ವಾಸ?
ಸುಮಲತಾ ಅವರು ಗೆಲ್ಲುತ್ತಾರೆ, ನಿರಂತರವಾಗಿ ನಮ್ಮ ನಾಯಕರು ಅರ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಕುಮಾರಸ್ವಾಮಿ ಮತ್ತವರ ಬೆಂಬಲಿಗರ ಹೇಳಿಕೆಗಳು ಆಕೆಗೆ ಸಹಾಯ ಮಾಡಲಿವೆ, ಅವರ ಪ್ರಬುದ್ಧ ನಡವಳಿಕೆ ಗೌರವಾನ್ವಿತ ನಡವಳಿಕೆ ಮೆಚ್ಚುವಂತಹದ್ದು.,
ಪ್ರ: ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕಾಂಗ್ರೆಸ್ ಪ್ರಣಾಳಿಕೆಗೆ ಮೌಲ್ಯವೇ ಇಲ್ಲ,ಅವರು ಆಕಾಶ ತೋರಿಸುತ್ತಾರೆ, ಕಾಂಗ್ರೆಸ್ 60-70 ಸೀಟು ಗೆಲ್ಲುತ್ತದೆ. 

Related Stories

No stories found.

Advertisement

X
Kannada Prabha
www.kannadaprabha.com