ಮೈಸೂರು: ಚುನಾವಣೆಯ ಅಬ್ಬರದ ನಡುವೆಯೂ ಸಕ್ರಿಯ ರಾಜಕೀಯದಿಂದ ದೂರವೇ ಉಳಿದ ರಾಜಮನೆತನ

ಕೆಲವೇ ದಶಕಗಳ ಹಿಂದೆ, ಮೈಸೂರುನಲ್ಲಿ ಯಾವುದೇ ಚುನಾವಣೆಗಳಿರಲಿಲ್ಲ, ಇದ್ದರೂ ರಾಜವಂಶಸ್ಥರು ಇದರಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ....
ಮೈಸೂರು ರಾಜಮನೆತನ
ಮೈಸೂರು ರಾಜಮನೆತನ
ಬೆಂಗಳೂರು: ಕೆಲವೇ ದಶಕಗಳ ಹಿಂದೆ, ಮೈಸೂರುನಲ್ಲಿ ಯಾವುದೇ ಚುನಾವಣೆಗಳಿರಲಿಲ್ಲ, ಇದ್ದರೂ ರಾಜವಂಶಸ್ಥರು ಇದರಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಹಣ, ಅಧಿಕಾರ, ಜಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಕಾರಣದಿಂದ ರಾಜಮನೆತನವು ಸ್ವಯಂಪ್ರೇರಿತವಾಗಿ ರಾಜಕೀಯದಿಂದ ದೂರ ಉಳಿದಿದೆ.ಒಂದು ಕಾಲದಲ್ಲಿ ದೇವರೆಂದೇ ಕರೆಸಿಕೊಳ್ಳುತ್ತಿದ್ದ ರಾಜಮನೆತನದ ಸದಸ್ಯರು ಇಂದು ಸಕ್ರಿಯ ರಾಜಕೀಯದಿಂದ ದೂರಾಗಿರುವುದು ಕ್ಷೇತ್ರದಲ್ಲಿ ಸುತ್ತಾಡುವ ಯಾರಿಗಾದರೂ ಮೇಲ್ನೋಟಕ್ಕೆ ಕಾಣಿಸುತ್ತದೆ. ರಾಜ್ಯ ಸರ್ಕಾರದೊಡನೆ ಜ್ಕಾನುನಿನ ಹೋರಾಟ ನಡೆಸಿರುವ ರಾಜವಂಶ ಜಾತಿ ರಾಜಕಾರಣದ ಕಗ್ಗಂಟಿನಲ್ಲಿ ಸಿಲುಕಲು ಒಪ್ಪುತ್ತಿಲ್ಲ. ಆದರೂ ರಾಜಮನೆತನಕ್ಕೆ ಗೌರವ ನೀಡುವ ಯಾರನ್ನಾದರೂ ಬೆಂಬಲಿಸಲು ನಿರ್ಧರಿಸಿದೆ ಎನ್ನಲಾಗಿದೆ. ರಾಜವಂಶದ 26ನೇ ತಲೆಮಾರಿನವರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತಾವು 1984, 1996 ಹಾಗು 1998ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.
ಸ್ಥಳೀಯರಿಗೆ ದೇವರಂತಿದ್ದ ರಾಜರು ಸಹ ರಾಜಕೀಯರಂಗದ ಬದಲಾದ ಪರಿಸ್ಥಿತಿಯಲ್ಲಿ ಸೋಲಿನ ಕಹಿ ಅನುಭವಿಸಬೇಕಾಗಿತ್ತು. 2004ರ ಲೋಕಸಭೆ ಚುನಾವಣೆಯಲ್ಲಿ ಶೀಕಂಠದತ್ತ ನರಸಿಂಹರಾಜ ಒಡೆಯರ್ ಸೋತಿದ್ದರು.ಆದರೆ ಆನಂತರ ಅವರು ಫ್ಯಾಷನ್ ಡಿಸೈನ್, ಮೈಸೂರು ಸಿಲ್ಕ್ ನ ಬ್ರ್ಯಾಂಡ್ ಪ್ರಚಾರ ನಡೆಸುತ್ತಾ ಬಂದರು. ಅಲ್ಲದೆ  ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ನ ಅಧ್ಯಕ್ಷ ಹುದ್ದೆಗೇರಿದರು.
ವಿಜಯದಶಮಿ ದಿನ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ದರ್ಬಾರ್ ನಡೆಸುವ ರಾಜರು ತಾವು ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸಿ ಸೋಲು, ಗೆಲುವುಗಳನ್ನು ಕಾಣುವುದರಲ್ಲಿ ಅಷ್ಟು ಆಸಕ್ತಿ ಉಳಿದಿಲ್ಲ. ಕಾಂಗ್ರೆಸ್ ಮುಖಂಡರು ಈಗಲೂ ಕುಟುಂಬದ ಬಗ್ಗೆ ಗೌರವ ಮತ್ತು ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ ಪ್ರಬಲ ಸಮುದಾಯಗಳು, ಇತರ ಹಿಂದುಳಿದ ವರ್ಗಗಳು ಮತ್ತು ದಲಿತರ ನಡುವೆ ಸ್ಪರ್ಧಾತ್ಮಕ ರಾಜಕೀಯದ ಯುಗದಲ್ಲಿ  ರಾಜವಂಶದ ರಾಜಕೀಯ ಬೆಳವಣಿಗೆ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ಭಾವಿಸಲಾಗಿದೆ.
ರಾಜಕೀಯ ವ್ಯಾಖ್ಯಾನಕಾರ ಪ್ರೊಫೆಸರ್ ಮುಜಫರ್ ಆಸಾಡಿ ಹೇಳುವಂತೆ ರಾಜಕೀಯದಿಂದ ರಾಜಕುಟುಂಬ ದೂರವಿರುವುದು ಪ್ರಜಾಪ್ರಭುತ್ವೀಕರಣ ಪ್ರಕ್ರಿಯೆಯ ಒಂದು ಭಾಗವಾಗಿತ್ತು ಮತ್ತು ಊಳಿಗಮಾನ್ಯ ಪದ್ದತಿಯ ಅಂತ್ಯವನ್ನು ಸೂಚಿಸಿ, ಅವುಗಳನ್ನು ಕೇವಲ ನಾಮಿನಲ್ ರಾಜರನ್ನಾಗಿ ಮಾಡಿತು
2013 ರಲ್ಲಿ ಶ್ರೀಕಂಠದತ್ತರು ಹಠಾತ್ ಸಾವಿಗೀಡಾಗಿದ್ದು ರಾಜಕೀಯ ಕ್ಷೇತ್ರದಲ್ಲಿ ಮತ್ತೆ ಪ್ರವೇಶಿಸಲು ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್ ಮೇಲೆ ಸಾಕಷ್ಟು ಒತ್ತಡಕ್ಕೆ ಕಾರಣವಾಗಿತ್ತು. 2015 ರಲ್ಲಿ ಯಡುವೀರ್ ಕೃಷ್ಣದತ್ತ  ನರಸಿಂಹರಾಜ ಒಡೆಯರ್ ಅವರ ರಾಜ್ಯಾಭಿಷೇಕದ ಬಳಿಕ ಮತ್ತೆ ರಾಜಕೀಯ ಪ್ರವೇಶಕ್ಕೆ ಒತ್ತಡ ಹೆಚ್ಚಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಇತರರು ಯದುವೀರ್ ಮತ್ತು ಪ್ರಮೋದಾ ದೇವಿಯೊಂದಿಗೆ ಮಾತುಕತೆ ನಡೆಸಿದರು. ಅವರು ತಾಯಿ ಮತ್ತು ಮಗನನ್ನು ಮನವೊಲಿಸಲು ಪ್ರಯತ್ನಿಸಿದರು.ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಕುಟುಂಬವು ರಾಜಕಾರಣದಿಂದ ತಾವು ದೂರವೇ ಉಳಿಯುವುದಾಗಿ ಹೇಳಿತು. ಅಲ್ಲದೆ ಹಲವು ಬಾರಿ ತಾವು ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಪ್ರಸಕ್ತ ಚುನಾವಣೆಗಳಲ್ಲಿ ಸಹ ಪಕ್ಷವು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಿಂದ ಗೌರವಾನ್ವಿತ ಅಂತರವನ್ನು ಉಳಿಸಿಕೊಂಡಿದೆ. ಇತ್ತೀಚೆಗೆ ಯದುವೀರ್ ಮೈಸೂರು ಅರಮನೆಯಲ್ಲಿ ನಟ ಉಪೇಂದ್ರರನ್ನು ಭೇಟಿಯಾಗಿದ್ದಾಗ, ಅರಮನೆಯ ಬಾಗಿಲುಗಳು ಹೊಸ ಆಲೋಚನೆಗಳು ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ಯೋಜನೆಗಳಿಗೆ ಸದಾ ತೆರೆದಿರಲಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com