ಊಟಕ್ಕೆ ಗತಿ ಇಲ್ಲದವರು ಸೇನೆ ಸೇರ್ತಾರೆ: ಸೈನಿಕರಿಗೆ ಕುಮಾರಸ್ವಾಮಿ ಅಪಮಾನ- ಪ್ರಧಾನಿ ಮೋದಿ

ಎರಡು ಹೊತ್ತಿಗೆ ಊಟಕ್ಕೆ ಗತಿ ಇಲ್ಲದವರು ಸೇನೆ ಸೇರುತ್ತಾರೆ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ , ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಗಂಗಾವತಿ: ಎರಡು ಹೊತ್ತಿಗೆ ಊಟಕ್ಕೆ ಗತಿ ಇಲ್ಲದವರು ಸೇನೆ ಸೇರುತ್ತಾರೆ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ , ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಕುಮಾರಸ್ವಾಮಿ ಹೃದಯದಲ್ಲಿರುವುದನ್ನೇ ಹೇಳಿದ್ದಾರೆ. ಈ ಮೂಲಕ ಭಾರತೀಯ ಸೇನೆಗೆ ಅಪಮಾನ ಮಾಡಿದ್ದಾರೆ ಎಂದು ಮೋದಿ ಟೀಕಿಸಿದ್ದಾರೆ.

ದೇಶ ಸೇವೆಗೆ , ರಕ್ಷಣೆಗೆ ಎಲ್ಲಾ ತ್ಯಾಗಕ್ಕೂ ಸಿದ್ಧ ವಿರುವ ಸೈನಿಕರು ಕನಿಷ್ಠ ತಾಪಮಾನದಲ್ಲೂ ಸೇವೆ ಸಲ್ಲಿಸುತ್ತಾರೆ. ತಿಂಗಳಾನುಗುಟ್ಟಲೇ  ಊಟ ಇಲ್ಲದಿದ್ದರೂ  ದೇಶ ಕಾಯುತ್ತಾರೆ. ಅಂತಹ ವೀರ ಸೈನಿಕರ ತಪಸ್ಸನ್ನೂ ನೀವೆಂದೂ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಮಾತು ತಪ್ಪಾಗಿ ಅರ್ಥೈಸಲಾಗಿದೆ ಎಂದು ಈಗ ಹೇಳಿ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದರು.

ಇದೆಂತಹ ಯೋಚನೆ? ಕುಮಾರಸ್ವಾಮಿ ಅವರ ಮನಸ್ಸಿನಲ್ಲಿರುವುದೇ  ಮಾತಿನ ಮೂಲಕ ಹೊರಗೆ ಬಂದಿದೆ. ಈ ಮಾತು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ , ನಿಮ್ಮ ಮಾತು ವೀರಯೋಧರಿಗೆ ಮಾಡಿದ ಅವಮಾನವಾಗಿದೆ. ಗಡಿಯಲ್ಲಿ ಹೋರಾಡವವರ ಬಗ್ಗೆ ನೀವಾಡಿರುವ ಮಾತಿಗೆ  ಬೆಲೆ ತೆರಬೇಕಾಗುತ್ತದೆ ಎಂದು ಮೋದಿ ಹೇಳಿದರು.

ವೀರ ಯೋಧರ ಬಗ್ಗೆ ಈ ರೀತಿ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ. ಯಾವ ಮುಖ ಇಟ್ಟುಕೊಂಡು ವೋಟ್ ಕೇಳಲು ಜನರ ಬಳಿಗೆ ಹೋಗ್ತಿರಿ ನೀವು ಕೂಡಾ ಸಂಪೂರ್ಣ ಮುಳುಗಿ ಹೋಗ್ತಿರಾ ಎಂದು  ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಈ ಹಿಂದೆ 10 ಪರ್ಸೆಂಟ್ ಕಾಂಗ್ರೆಸ್ ಸರ್ಕಾರ ಇತ್ತು. ಈಗ ಜೆಡಿಎಸ್ ಜೊತೆ ಸೇರಿ 20 ಪರ್ಸೆಂಟ್ ಸರ್ಕಾರ ಆಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಮೋದಿ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com