ದೇವೇಗೌಡ್ರು ರಾಜಕೀಯ ನಿವೃತ್ತಿ ತೆಗೆದುಕೊಂಡ್ರಾ?, ಅಪ್ಪನಂತೆ ಮಗ: ರೇವಣ್ಣ ವಿರುದ್ಧ ಮೋದಿ ವಾಗ್ದಾಳಿ

ಜೆಡಿಎಸ್ ನಲ್ಲಿ ಇದೀಗ ರಾಜಕೀಯ ನಿವೃತ್ತಿ ಪರ್ವ ಶುರುವಾಗಿದೆ. 2019ರಲ್ಲಿ ಮೋದಿ ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೀನಿ ಅಂತಾ ಸಚಿವ ಹೆಚ್ ಡಿ ರೇವಣ್ಣ ಶಪತ ಮಾಡಿದ್ದು...
ನರೇಂದ್ರ ಮೋದಿ
ನರೇಂದ್ರ ಮೋದಿ
ಕೊಪ್ಪಳ: ಜೆಡಿಎಸ್ ನಲ್ಲಿ ಇದೀಗ ರಾಜಕೀಯ ನಿವೃತ್ತಿ ಪರ್ವ ಶುರುವಾಗಿದೆ. 2019ರಲ್ಲಿ ಮೋದಿ ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೀನಿ ಅಂತಾ ಸಚಿವ ಹೆಚ್ ಡಿ ರೇವಣ್ಣ ಶಪತ ಮಾಡಿದ್ದು 2014ರಲ್ಲೂ ಇದೇ ರೀತಿಯ ಹೇಳಿಕೆಯನ್ನು ಮಾಜಿ ಪ್ರಧಾನಿ ದೇವೇಗೌಡರು ನೀಡಿದ್ದರು. ಆದರೆ ಅವರು ರಾಜಕೀಯ ನಿವೃತ್ತಿ ಪಡೆದರಾ? ಇಲ್ಲ ತಮ್ಮ ಪರಿವಾರದವರನ್ನೇ ರಾಜಕೀಯಕ್ಕೆ ತರುವ ಮೂಲಕ ಪರಿವಾರ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. 
ಕೊಪ್ಪಳದಲ್ಲಿ ನಡದೆ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದಿನ ಕಾಂಗ್ರೆಸ್ ಸರ್ಕಾರ 10 ಪರ್ಸೆಂಟ್ ಸರ್ಕಾರವಾಗಿತ್ತು. ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಸೇರಿ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದು ಇದೀಗ 20 ಪರ್ಸೆಂಟ್ ಸರ್ಕಾರ ನಡೆಯುತ್ತಿದೆ. ಇವರ ಆಲೋಚನೆ ಬರೀ ಕಮಿಷನ್ ಮಾಡುವುದರಲ್ಲಿ ನಿರತವಾಗಿದೆ ಎಂದರು.
ಟಿಪ್ಪು ಸುಲ್ತಾನ್ ಜಯಂತಿ ಮಾಡಲು ಇವರ ಬಳಿ ಹಣವಿರುತ್ತದೆ. ಆದರೆ ಹಂಪಿ ಜಯಂತಿ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಅಂತಹ ಸರ್ಕಾರ ನಿಮಗೆ ಬೇಕಾ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ರೈತರ ಸಾಲ ಮನ್ನಾ ಮಾಡುತ್ತೀನಿ ಅಂತಾ ಹೇಳಿದ್ರು ಆದರೆ ಸಾಲ ಮನ್ನ ಮಾಡಿದ್ರಾ?. ಕೇಂದ್ರ ಸರ್ಕಾರದ ಕಿಸಾನ್ ಸನ್ಮಾನ್ ಯೋಜನೆ ಕರ್ನಾಟಕ ರೈತರಿಗೆ ತಲುಪದಂತೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ರೈತರ ಪಟ್ಟಿಯನ್ನು ಕಳುಹಿಸಿ ಅಂದ್ರೆ ಅದಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಹೀಗೆ ಆದರೆ ರೈತರಿಗೆ ಯೋಜನೆಯ ಫಲ ಸಿಗುವುದು ಹೇಗೆ ಎಂದು ಪ್ರಶ್ನಿಸಿದರು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಕೆಲ ತಿಂಗಳು ಮಾತ್ರ ಆಗಿದೆ. ಆದರೆ ಅಲ್ಲಿಂದ ದೆಹಲಿಗೆ ಕೋಟಿ ಕೋಟಿ ರುಪಾಯಿ ಹಣ ರವಾನೆಯಾಗಿದೆ. ಆದರೆ ರಾಜ್ಯದಲ್ಲಿ ಅಪೌಷ್ಟಿಕ ಮಕ್ಕಳ ಅನ್ನದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಮೋದಿ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com