ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಅಫಿಡೆವಿಟ್ ಸಂಕಷ್ಟ

ಹಾಸನದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪ್ರಮಾಣಪತ್ರವನ್ನು ಮರುಪರಿಶೀಲನೆ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್​ ನೀಡಿದ್ದು
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
ನವದೆಹಲಿ: ಹಾಸನದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ  ಪ್ರಮಾಣಪತ್ರವನ್ನು ಮರುಪರಿಶೀಲನೆ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್,   ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್​ ನೀಡಿದ್ದು, ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರವನ್ನು ಮರೆಮಾಚಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದರೆಂಬ ಆರೋಪಕ್ಕೆ ಗುರಿಯಾಗಿದ್ದರು. 
ಅಭ್ಯರ್ಥಿ ಪ್ರಜ್ವಲ್​  ರೇವಣ್ಣ ಹಾಗೂ ಭವಾನಿ ರೇವಣ್ಣ ಪ್ರತ್ಯೇಕವಾಗಿ ಡ್ರೋಣ್ ವರ್ಕ್ ಫೋರ್ಸ್ ಲಿಮಿಟೆಡ್ ಮತ್ತು  ಅಧಿಕಾರ್ ವೆಂಚರ್ಸ್ ಕಂಪನಿಗೆ  ಹಣ ಹೂಡಿಕೆ ಮಾಡಿದ್ದಾರೆ. ಈ ಮಾಹಿತಿಯನ್ನು  ಅವರು ತಮ್ಮ ಆಸ್ತಿ ವಿವರದಲ್ಲಿ ದಾಖಲಿಸಿಲ್ಲ.ಅಲ್ಲದೆ ವಿವಿಧ ಕಂಪನಿಗಳಿಗೆ ಪ್ರಜ್ವಲ್​ ರೇವಣ್ಣ ಪಾಲುದಾರರಾಗಿದ್ದರೂ ಅದರ ಮಾಹಿತಿಯನ್ನು  ನಾಮಪತ್ರ ಸಲ್ಲಿಕೆ ವೇಳೆ ದಾಖಲಿಸಿಲ್ಲ ಎಂದು ಆರೋಪಿಸಿ ಆರ್​ಟಿಐ  ಕಾರ್ಯಕರ್ತ ಟಿ.ಜೆ ಅಬ್ರಾಹಂ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದರು. 
ಈ ದೂರಿನ ಅನ್ವಯ ಕ್ರಮಕ್ಕೆ  ಮುಂದಾಗಿರುವ ಚುನಾವಣಾ ಆಯೋಗ ಈ ಕುರಿತು ವಿಚಾರಣೆ ನಡೆಸುವಂತೆ ನೋಟಿಸ್ ಜಾರಿ  ಮಾಡಿದೆ. ಈ ಹಿಂದೆ ಕೂಡ ಬಿಜೆಪಿ ಅಭ್ಯರ್ಥಿ ಎ. ಮಂಜು ಪ್ರಜ್ವಲ್​ ರೇವಣ್ಣ ಸುಳ್ಳು ಆಸ್ತಿ ವಿವರ  ನೀಡಿದ್ದಾರೆ ಎಂದು ಆರೋಪ ಮಾಡಿ ಚುನಾವಣಾಧಿಕಾರಿಗೆ ದೂರು ನೀಡಿದ್ದರು.
ಮತದಾನಕ್ಕೆ 5 ದಿನಗಳು ಬಾಕಿ ಇರುವಾಗಲೇ ಚುನಾವಣಾ ಆಯೋಗ ಜಾರಿ ಮಾಡಿರುವ ನೋಟಿಸ್​ ಪ್ರಜ್ವಲ್​ ರೇವಣ್ಣಗೆ ಆತಂಕ ತಂದೊಡ್ಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com