ಸೋಷಿಯಲ್ ಮೀಡಿಯಾ, ವಾರ್ ರೂಂ: ಇವೇ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಅಸ್ತ್ರಗಳು!

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ 5 ದಿನಗಳು ಬಾಕಿ ಉಳಿದಿದೆ. ಈ ಅಂತಿಮ ಕ್ಷಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಸಮಸ್ಯೆಗಳ ಕಡೆ ತಮ್ಮ ಗಮನವನ್ನು ಹರಿಸುತ್ತಿವೆ.
ಚುನಾವಣಾ ಕಣ ರಂಗೇರುತ್ತಿದ್ದಂತೆ ನಿನ್ನೆ ಮಂಡ್ಯದಲ್ಲಿ ಸಿದ್ದರಾಮಯ್ಯ ಮತ್ತು ಹೆಚ್ ಡಿ ದೇವೇಗೌಡ ಪ್ರಚಾರ ನಡೆಸಿದರು. ಇಂದು ರಾಹುಲ್ ಗಾಂಧಿ ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಬಿಜೆಪಿ ಕೂಡ ಹಿಂದೆ ಉಳಿದಿಲ್ಲ. ಈ ಬಾರಿ ಬೆಳಗಾವಿಯ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕ್ಷೇತ್ರವನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಇತ್ತ ಬಾಗಲಕೋಟೆಯಲ್ಲಿ ಸಹ ಬಿಜೆಪಿಗೆ ಪ್ರಬಲ ಪೈಪೋಟಿಯಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಾಗಲಕೋಟೆ, ಹಾಸನ ಮತ್ತು ತುಮಕೂರುಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರ ಕಲಬುರಗಿಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರ್ಯಾಲಿಯಲ್ಲಿ ಮಾತನಾಡಲಿದ್ದಾರೆ.
ಬಿಜೆಪಿಯ ಪ್ರಚಾರ ಶೈಲಿ ವಿನೂತವಾಗಿದೆ. ಶಾಸಕ ಆರ್ ಅಶೋಕ್ ನೇತೃತ್ವದ 45 ಸದಸ್ಯರ ಪ್ರಚಾರ ಸಮಿತಿ ವಾರ್ ರೂಂ ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 10 ಸದಸ್ಯರ 34 ತಂಡಗಳಿದ್ದು ಅವರಿಗೆ ನಿರ್ದಿಷ್ಟ ಕೆಲಸ ವಹಿಸಲಾಗಿದೆ. ಸೋಷಿಯಲ್ ಮೀಡಿಯಾ, ಕಾನೂನು, ಸಿಎಗಳು, ತಾತ್ವಿಕ, ಪ್ರಚಾರ ನಿರ್ವಹಣೆ, ಜಾಹೀರಾತು, ಆತಿಥ್ಯ, ಟ್ರೆಂಡ್ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಸೇರಿದ್ದಾರೆ ಎಂದರು ಚುನಾವಣಾ ಪ್ರಚಾರ ಸಮಿತಿ ಸಂಚಾಲಕ ಆರ್ ಅಶೋಕ್.
ಅಸೋಸಿಯೇಷನ್ ಆಫ್ ಬ್ರಿಲ್ಲಿಯಂಟ್ ಮೈಂಡ್ಸ್ ಮೂಲಕ ವೃತ್ತಿಪರರ ತಂಡವನ್ನು ಆಯ್ಕೆ ಮಾಡಲಾಗಿದ್ದು ಕರ್ನಾಟಕದ ಸಣ್ಣ ತಂಡಗಳ ಜೊತೆ ಕೆಲಸ ಮಾಡಲಿದೆ. ಪ್ರತಿನಿತ್ಯ ವರದಿಯನ್ನು ರಾಷ್ಟ್ರ ಮತ್ತು ರಾಜ್ಯ ನಾಯಕರಿಗೆ ಕಳುಹಿಸಲಾಗುತ್ತದೆ.
ಆದರೆ ಕಾಂಗ್ರೆಸ್ ನಲ್ಲಿ ರಾಜ್ಯ ಮಟ್ಟದಲ್ಲಿ ವಾರ್ ರೂಂ ಇಲ್ಲ. ಆದರೆ ಹೆಚ್ ಕೆ ಪಾಟೀಲ್ ನೇತೃತ್ವದಲ್ಲಿ ಚುನಾವಣಾ ತಂಡವಿದೆ. ದೆಹಲಿ ಮೂಲದ ಪಕ್ಷದ ಕಾರ್ಯಕರ್ತರು, ಅಂಕಿಅಂಶ ತಜ್ಞರು, ವಿಶ್ಲೇಷಕರು, ತಾಂತ್ರಿಕ ಕಾರ್ಯಕರ್ತರು ಕಾಂಗ್ರೆಸ್ ನಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ದೆಹಲಿಯಲ್ಲಿ ಎಐಸಿಸಿ ನೇತೃತ್ವದಲ್ಲಿ ಎಲ್ಲಾ ತಂತ್ರ ರೂಪಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ನ ವಾರ್ ರೂಂ ಇಲ್ಲ, ಆದರೆ ಕೆಪಿಸಿಸಿ ಪದಾಧಿಕಾರಿಗಳ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗಿದ್ದು ಎಲ್ಲಾ 28 ಕ್ಷೇತ್ರಗಳಲ್ಲಿ ಹಿರಿಯ ನಾಯಕರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗಿದೆ ಎನ್ನುತ್ತಾರೆ ಕೆಪಿಸಿಸಿ ಪದಾಧಿಕಾರಿಯೊಬ್ಬರು. ಎಐಸಿಸಿ ರಾಜಕೀಯ ವಿಶ್ಲೇಷಕರು, ಅಂಕಿಅಂಶ ವಿಶ್ಲೇಷಕರು, ಮಾಧ್ಯಮ ವೀಕ್ಷಕರು ಮತ್ತು ಸಮೀಕ್ಷೆದಾರರನ್ನು ನೇಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com