ಚುನಾವಣಾ ರಾಯಭಾರಿಯೇ ಈ ಬಾರಿ ಮತದಾನದಿಂದ ವಂಚಿತ! ರಾಹುಲ್ ದ್ರಾವಿಡ್ ಓಟ್ ಮಾಡಲ್ಲ!

ಚುನಾವಣಾ ರಾಯಭಾರಿಯಾಗಿರುವ, ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಈ ಬಾರಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.
Rahul Dravid
Rahul Dravid
ಬೆಂಗಳೂರು: ಚುನಾವಣಾ ರಾಯಭಾರಿಯಾಗಿರುವ, ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಈ ಬಾರಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. 
ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗರಾಗಿರುವ ರಾಹುಲ್​ ದ್ರಾವಿಡ್​ ಕರ್ನಾಟಕ ಚುನಾವಣಾ ಆಯೋಗದ ರಾಯಭಾರಿ. 2018ರ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರಿಗೆ  ತಪ್ಪದೇ ಮತ ಚಲಾಯಿಸುವಂತೆ ಮತದಾನದ ಜಾಗೃತಿ ಮೂಡಿಸಿದ  ರಾಹುಲ್​ ದ್ರಾವಿಡ್​ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆಶ್ಚರ್ಯವಾದರೂ ಇದು ಸತ್ಯ. ಈ ಬಾರಿ ದ್ರಾವಿಡ್​ ಕುಟುಂಬ ಮತದಾನದ ಹಕ್ಕಿನಿಂದ ವಂಚಿತವಾಗಿದೆ.
ಹೌದು, ಪ್ರತಿ ಬಾರಿಯೂ ತಪ್ಪದೇ ಮತದಾನ ಮಾಡುತ್ತಿದ್ದ ರಾಹುಲ್ ದ್ರಾವಿಡ್ ಈ ಬಾರಿ ಮತದಾನ ಮಾಡುವಂತಿಲ್ಲ.  ವಿಳಾಸ ಬದಲಾವಣೆಯಾದರೂ ಫಾರ್ಮ್ 6 ನ್ನು ಸರಿಯಾದ ಸಮಯಕ್ಕೆ ಸಲ್ಲಿಸದೇ ಇದ್ದದ್ದು ಇದಕ್ಕೆ ಕಾರಣ. 
ಇಂದಿರಾನಗರದಲ್ಲಿದ್ದ ರಾಹುಲ್​ ಕುಟುಂಬ ಈಗ ಮತ್ತಿಕೆರೆಗೆ ಸ್ಥಳಾಂತರಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ದ್ರಾವಿಡ್ ಅವರ ಸಹೋದರ ವಿಜಯ್ ಶಾಂತಿನಗರ ವಿಧಾನಸಭಾ ವ್ಯಾಪ್ತಿಗೆ ಬರುವ ಚುನಾವಣಾ ಅಧಿಕಾರಿಗಳಿಗೆ ಫಾರ್ಮ್ 7 ನ್ನು ( ಹೆಸರನ್ನು ಅಳಿಸಿಹಾಕುವುದಕ್ಕೆ ನೀಡಲಾಗುವ ಫಾರ್ಮ್) ನೀಡಿ ರಾಹುಲ್ ದ್ರಾವಿಡ್ ಹೆಸರನ್ನು ತೆಗೆಸಿದ್ದರು. 
ವಿಳಾಸ ಬದಲಾದ ನಂತರ ದ್ರಾವಿಡ್​ ಮನೆಗೆ ನಮ್ಮ ಸಿಬ್ಬಂದಿಗಳು ಹೋಗಿದ್ದರು. ಅವರ ಕುಟುಂಬದ ಸದಸ್ಯರು ಮನೆಯೊಳಗೆ ಬಿಡಲಿಲ್ಲ. ಈ ಬಗ್ಗೆ ಸ್ಪೇನ್ ಪ್ರವಾಸದಲ್ಲಿದ್ದ  ರಾಹುಲ್​ ಅವರ ಗಮನಕ್ಕೂ ಕೂಡ ತರಲಾಯಿತು, ಆದರೆ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಚುನಾವಣಾ ಅಧಿಕಾರಿ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​ ತಿಳಿಸಿದ್ದಾರೆ. 
ಮಾರ್ಚ್​ 16ಕ್ಕೆ ಮುಂಚೆ ರಾಹುಲ್ ದ್ರಾವಿಡ್ ಫಾರ್ಮ್​ 6 ನೀಡಿದ್ದರೆ ಅವರ ಹೆಸರು ದಾಖಲಾಗುತ್ತಿದ್ದು . ಇದನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ. ಚುನಾವಣೆ ನಂತರವೇ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com