ರಾಫೆಲ್ ಕುರಿತಂತೆ ಪ್ರಧಾನಿ ಮೋದಿ 'ಮೌನ'ವಾಗಿದ್ದೇಕೆ: ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಪ್ರಶ್ನೆ

ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್.ಡಿ.ಎ ಬಹುಮತ ಗಳಿಸಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಹಂಕಾರಿಯಾಗಿ ಬದಲಾಗಿದ್ದಾರೆ ಎಂದು ನಟ, ರಾಜಕಾರಣಿಯಾಗಿರುವ ಬಿಹಾರದ ಪಟ್ನಾ ....
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ
ಮಂಗಳೂರು: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್.ಡಿ.ಎ ಬಹುಮತ ಗಳಿಸಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಹಂಕಾರಿಯಾಗಿ ಬದಲಾಗಿದ್ದಾರೆ ಎಂದು ನಟ, ರಾಜಕಾರಣಿಯಾಗಿರುವ ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಸಿನ್ಹಾ ಅಪನಗದೀಕರಣ ಹಾಗೂ ಜಿಎಸ್ಟಿ ಜಾರಿ ಮಾಡಿ ಪ್ರಧಾನಿ ಮೋದಿ "ತುಘಲಕ್ ದರ್ಬಾರ್" ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನಾಯಕರ ನಡೆಯು ಸಾಮಾನ್ಯ ಜನರಿಗಷ್ಟೇ ಅಲ್ಲದೆ ನಮ್ಮಂತಹಾ ನಿಷ್ಠಾವಂತರಿಗೆ ಸಹ ಆಸಮಾಧಾನಕ್ಕೆ ಕಾರಣವಾಗಿತ್ತು. ಎಂದು ಅವಫ಼್ರು ಹೇಳಿದ್ದಾರೆ.
ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಯ್ಹಿ ಮಿಥುನ್ ರೈ ಪರ ಪ್ರಚಾರಕ್ಕೆ ಆಗಮಿಸಿದ್ದ ಸಿನ್ಹಾ ಬಿಜೆಪಿಯಲ್ಲಿ ಮೋದಿ ಪ್ರಜಾಪ್ರಭುತ್ವವನ್ನು ತೊಡೆದು ಸರ್ವಾಧಿಕಾರ ತರುತ್ತಿದ್ದಾರೆ ಎಂದು ದೂಷಿಸಿದ್ದಾರೆ. ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಯಶ್ವಂತ್ ಸಿನ್ಹಾ, ಅರುಣ್ ಶೌರಿ ಅಂತಹಾ ನಾಯಕರು ಮೋದಿಯನ್ನು ವಿರೋಧಿಸುತ್ತಿದ್ದಾರೆ ಎಂದರು.
ರಾಫೆಲ್ ಒಪ್ಪಂದದ ಕುರಿತು ಮೋದಿ ವಿವರಣೆ ನೀಡಬೇಕೆಂದು ಆಗ್ರಹಿಸಿದ ಸಿನ್ಹಾ ಅವರು ರಾಫೆಲ್ ಕುರಿತು ಸ್ಪಷ್ಟ ವಿವರಣೆ ನೀಡಲು ವಿಫಲರಾದ ಮೋದಿ "ಮೂಕರು"  ಎಂದಿದ್ದಾರೆ."ನಾವು ಮೋದಿಯವರು ತಪ್ಪಿತಸ್ಥರು ಎಂದು ಕರೆಯುತ್ತಿಲ್ಲ, ಆದರೆ ಅವರು ಪ್ರಶ್ನೆಗಳಿಗೆ ಉತ್ತರಿಸಬೇಕು.ಖರೀದಿಸಲಾದ ಜೆಟ್ ಗಳ ಸಂಖ್ಯೆಯು 126 ರಿಂಡ 36ಕ್ಕೆ ಇಳಿಕೆಯಾಗಿದ್ದೇಕೆ? ಎಚ್.ಎ.ಎಲ್.ಗೆ ಅದನ್ನು ತಯಾರಿಸಲು ಆದೇಶವನ್ನೇಕೆ ನೀಡಿಲ್ಲ?ಜನರು ಅದನ್ನು ತಿಳಿದುಕೊಳ್ಳಲು ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ . ಆದರೆ ನೀವು ಅವರ ಗಮನವನ್ನು ಬೇರೆಡೆ ತಿರುಗಿಸಿ ನಿಜವಾದ ಸಮಸ್ಯೆಗಳಿಂಡ ತಪ್ಪಿಸಿಕೊಳ್ಳುತ್ತಿದ್ದೀರಿ. ಹೀಗೇ ನಡೆದುಕೊಂಡಿರಾದರೆ ಜನರು ನಿಮ್ಮನ್ನು "ಮೂಕರೆಂದು" ಭಾವಿಸಿ ಮನೆಗೆ ಕಳಿಸಲಿದ್ದಾರೆ"
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕ್ರಿಯಾತ್ಮಕ, ಆಲೋಚನೆಗಳುಳ್ಳ, ಅತ್ಯಾಕರ್ಷಕ ಮತ್ತು ದಾರ್ಶನಿಕ ಮುಖಂಡರಾಗಿದ್ದಾರೆ  ದೇಶಕ್ಕೆ ಪ್ರಸ್ತುತ ಅವರಂತಹಾ ನಾಯಕತ್ವ ಬೇಕಿದೆ ಎಂದು ಸಿನ್ಹಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com