10 ಚುನಾವಣೆಯಲ್ಲಿ ಒಂದನ್ನೂ ಗೆಲ್ಲದ ಸೋಲಿನ ಸರದಾರ: ಎಲೆಕ್ಷನ್ ಗಾಗಿ ಜಮೀನು ಮಾರಾಟ ಮಾಡಿದ ಧೀರ!

ಲೋಕಸಭೆ ಚುನಾವಣೆ ಈತನಿಗೆ ದೊಡ್ಡ ವಿಷಯವೇ ಅಲ್ಲ, ಈ ಅಭ್ಯರ್ಥಿ ಈಗಾಗಲೇ 10 ಚುನಾವಣೆ ಎದುರಿಸಿದ್ದಾರೆ, ಆದರೆ ಒಂದು ಚುನಾವಣೆಯಲ್ಲಿಯೂ ಇವರು ಗೆದ್ದಿಲ್ಲ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಪ್ಪಳ: ಲೋಕಸಭೆ ಚುನಾವಣೆ ಈತನಿಗೆ ದೊಡ್ಡ ವಿಷಯವೇ ಅಲ್ಲ,  ಈ ಅಭ್ಯರ್ಥಿ ಈಗಾಗಲೇ 10 ಚುನಾವಣೆ ಎದುರಿಸಿದ್ದಾರೆ, ಆದರೆ ಒಂದು ಚುನಾವಣೆಯಲ್ಲಿಯೂ ಇವರು ಗೆದ್ದಿಲ್ಲ,
ಏಪ್ರಿಲ್ 23 ರಂದು ನಡೆಯುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಹಡಪದ್ ಸ್ಪರ್ಧಿಸಿದ್ದಾರೆ, ಸೋಲುವ ಮೂಲಕ ಭಯ ಹುಟ್ಟಿಸುತ್ತಾರೆ. ಸೋತರು ಪಟ್ಟು ಬಿಡದ ಮಲ್ಲಿಕಾರ್ಜುನ್, ಒಂದು ಬಾರಿಯಾದರೂ ಜನಪ್ರತಿನಿಧಿಯಾಗಿ ಲೋಕಸಭೆ ಸೇರಬೇಕೆಂಬುದು ಅವರ ಅದಮ್ಯ ಆಸೆಯಾಗಿದೆ.ಐದು ಬಾರಿ ಲೋಕಸಭೆ ಹಾಗೂ 5 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳದಿಂದ ಸ್ಪರ್ಧಿಸಿದ್ದಾರೆ. ಜನಪ್ರತಿನಿಧಿಯಾಗಿ ಆಯ್ಕೆಯಾಗಬೇಕೆಂಬ ಆಸೆಯಿಂದಾಗಿ ತಮ್ಮ 10 ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದಾರೆ.
ಒಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ, ಅವರು ಚುನಾವಣೆ ವೆಚ್ಚದ ವಿವರವನ್ನು ಸಲ್ಲಿಸದಿದ್ದಕ್ಕೆ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಆಯೋಗ ನಿಷೇಧ ಹೇರಿತ್ತು.  ಆದರೆ ಅದರ ನಂತರದ ಚುನಾವಣೆಯಲ್ಲಿ ತಮ್ಮ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದರು, ಆದರೆ ಅವರು ಕೂಡ ಸೋತಿದ್ದರು ಎಂದು ಅಭ್ಯರ್ಥಿಯ ಆಪ್ತರೊಬ್ಬರು ತಿಳಿಸಿದ್ದಾರೆ,
ನಿಮಗೆ ಯಾರು ಬೆನ್ನೆಲುಬಾಗಿ ನಿಂತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮ ಕುಟುಂಬದವರು ಬೆಂಬಲ ನೀಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪ್ರಚಾರಕ್ಕೆ ತಮ್ಮ ಸ್ನೇಹಿತರು ಕೂಡ ಬರುತ್ತಾರೆ, ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಮತಯಾಚನೆ ಮಾಡುತ್ತಾರೆ ಎಂದು ಹೇಳಿದ್ದಾರೆ.
11ನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಅವರಿಗೆ ಸಿಕ್ಕಿರುವ ಕ್ರಮಸಂಖ್ಯೆ ಕೂಡ 11 ಆಗಿದೆ, ಅವರಿಗೆ ಪ್ರೆಸರ್ ಕುಕ್ಕರ್ ಸಿಂಬಲ್ ನೀಡಲಾಗಿದೆ.ಯಾವುದೇ ರಾಜಕೀಯ ಪಕ್ಷ ಅವರಿಗೆ ಬೆಂಬಲ ನೀಡುತ್ತಿಲ್ಲ, ಇಲ್ಲಿನ ಯಾವುದೇ ಮತದಾರರು ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಲು ಇದುವರೆಗೂ ಆಯ್ಕೆ ಮಾಡಿಲ್ಲ, 1952 ರಲ್ಲಿ ಶಿವಮೂರ್ತಿ ಸ್ವಾಮಿ ಅಳ್ವಾಂಡಿ ಎಂಬುವರು ಮಾತ್ರ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.
ಯಾವುದೇ ಪಕ್ಷೇತರ ಅಭ್ಯರ್ಥಿಯಿಂದ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಟ್ರೇಡ್ ಯೂನಿಯನ್ ನಾಯಕ ಬಸವರಾಜ್ ಶೀಲವಂತರ್ ಹೇಳಿದ್ದಾರೆ.ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಮನಸ್ಸು ತೋರುತ್ತಿಲ್ಲ ಎಂದು ಮಲ್ಲಿಕಾರ್ಜುನ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com