' ಈ ಬಾರಿ ಮೋದಿ ಅಲೆ ಮಾತ್ರವಲ್ಲ ಸುನಾಮಿ ಎದ್ದಿದೆ; ಮೋದಿ ನನ್ನ ಪಾಲಿನ ಕಾಮಧೇನು'

ಮೈಸೂರು-ಕೊಡಗು ಲೋಕಸಭೆ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ವಿರುದ್ಧ ಹಾಲಿ ಸಂಸದ ಪ್ರತಾಪ್ ಸಿಂಹ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ, ಎರಡನೇ ಬಾರಿ ಸಂಸದರಾಗಲು ಬಯಸಿರುವ ಪ್ರತಾಪ್ ಸಿಂಹ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ...
ನರೇಂದ್ರ ಮೋದಿ
ನರೇಂದ್ರ ಮೋದಿ
ಮೈಸೂರು: ಮೈಸೂರು-ಕೊಡಗು ಲೋಕಸಭೆ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ವಿರುದ್ಧ ಹಾಲಿ ಸಂಸದ ಪ್ರತಾಪ್ ಸಿಂಹ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ, ಎರಡನೇ ಬಾರಿ ಸಂಸದರಾಗಲು ಬಯಸಿರುವ ಪ್ರತಾಪ್ ಸಿಂಹ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ  ಸಂದರ್ಶನ ನೀಡಿದ್ದಾರೆ. ತಾವು ಪ್ರಚಾರಕ್ಕೆ ಹೋದ ಕಡೆಯಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರ: ಒಂದು ತಿಂಗಳ ಹಿಂದೆಯೇ ಪ್ರಚಾರ ಆರಂಭಿಸಿದ್ದೀರಿ?
ಹೌದು, ಕಳೆದ ಒಂದು ತಿಂಗಳಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ, ನಾನು ಹೋದ ಕಡೆಯಲ್ಲೆಲ್ಲಾ ಉತ್ತಮ ಪ್ರೋತ್ಸಾಹ ಹಾಗೂ ಬೆಂಬಲ ಸಿಗುತ್ತಿದೆ,. ಜನರಿಂದ ಬರುವ ಪಾಸಿಟಿವ್ ರೆಸ್ಪಾನ್ಸ್ ನನಗೆ ಮತ್ತಷ್ಟು ಬಲ ತುಂಬುತ್ತಿದೆ.
ಪ್ರ: ದೇಶದಲ್ಲಿ ಮೋದಿ ಅಲೆಯಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಅಂತಹ ಯಾವುದೇ ಅಲೆಯಿಲ್ಲ ಎಂದು ಕಾಂಗ್ರೆಸ್ ಹೇಳಿದೆ?
2014ರ ಲೋಕಸಭೆ ಚುನಾವಣೆ ಮೋದಿ ಅಲೆಗೆ ಸಾಕ್ಷಿಯಾಗಿದೆ, ಆದರೆ ಈ ಬಾರಿ ಮೋದಿ ಅಲೆಯಲ್ಲ ಸುನಾಮಿ ಎದ್ದಿದೆ, ಹಿಂದಿನ ಚುನಾವಣೆಗಿಂತ ಈ ಬಾರಿ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮೋದಿ ಅವರನ್ನು ನರಹಂತಕ ಎಂದು ಕರೆದಿದ್ದರು, ಜನ ಮತಹಾಕಿದ್ದಕ್ಕೆ ಮೋದಿ ಪ್ರಧಾನಿ ಆದರು.
ಪ್ರ: ನಿಮ್ಮ ಎದುರಾಳಿ ಮೈತ್ರಿ ಪಕ್ಷದ ಅಭ್ಯರ್ಥಿ, ಈ ಹಿಂದೆ ಬಿಜೆಪಿಯಲ್ಲಿದ್ದರು, ಅವರ ಸ್ಪರ್ಧೆಯಿಂದ ಬಿಜೆಪಿಯ ಸಾಂಪ್ರದಾಯಿಕ ಮತಗಳು ವಿಭಜನೆಯಾಗುವುದಿಲ್ಲವೇ?
ಸಾಮಾನ್ಯವಾಗಿ ಕೆಲ ನಾಯಕರು ಪಕ್ಷ ಬದಲಿಸುತ್ತಿರುತ್ತಾರೆ, ಅಧಿಕಾರಕ್ಕಾಗಿ ಪಕ್ಷಾಂತರ ನಡೆಯುತ್ತೆ, ನಾನು ತಳಮಟ್ಟದ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟಿದ್ದೇನೆ, ಅವರ ಪಕ್ಷ ನಿಷ್ಠೆ ಯಾವತ್ತೂ ಬದಲಾಗದು.
ಪ್ರ: ಜೆಡಿಎಸ್ ಕಾಂಗ್ರೆಸ್ ಶಕ್ತಿಯಿಂದಾಗಿ ನಿಮಗೆ ಈ ಕ್ಷೇತ್ರದಲ್ಲಿ ಹೋರಾಟ ಕಠಿಣವಾಗಿದೆಯೇ?
ಅದನ್ನು ನಿರ್ಧರಿಸುವವರು ಜನತೆ, ಎರಡು ಪಕ್ಷದ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ, ಆದರೆ ಹೆಚ್ಚಿನ ಜನ ಬಿಜೆಪಿಗೆ ಮತ ಹಾಕಲು ಇಷ್ಟ ಪಡುತ್ತಾರೆ, ಏಕೆಂದರೇ ಅವರಿಗೆ ಮೋದಿ ಮೇಲೆ ನಂಬಿಕೆ ಇದೆ. 1999ರಲ್ಲಿ ಸಂಸತ್ ಮತ್ತು ವಿಧಾನಸಭೆ ಚುನಾವಣೆ ನಡೆದಾಗ, ಎಸ್ ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂತು, ಲೋಕಸಭೆ ಚುನಾವಣೆಯಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು.
ಪ್ರ: ಜನ ನಿಮಗೆ ಮತ ಹಾಕುವುದು ನಿಮ್ಮ ಸಾಧನೆಗಳಿಗಾಗೋ ಅಥವಾ ನಿಮ್ಮ ವ್ಯಕ್ತಿತ್ವಕ್ಕಾಗೋ?
ಸಿಂಹ ನರೇಂದ್ರ ಮೋದಿ ಭಕ್ತ, ಅದಕ್ಕಾಗಿ ಅವರು ನನದೆ ಮತ ಹಾಕುತ್ತಾರೆ,  ಮೋದಿ ಕಾಮಧೇನು ಇದ್ದ ಹಾಗೆ, ನನ್ನ ಎಲ್ಲಾ ಆಶಯಗಳನ್ನು ಈಡೇರಿಸುತ್ತಾರೆ, ನಾನು ಮೈಸೂರು ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಯೋಜನೆಗಳಿಗೆ ಅನುದಾನ ಕೇಳಲು ಹೋದಾಗ ಎಲ್ಲದಕ್ಕೂ ಅನುಮತಿ ನೀಡಿದ್ದಾರೆ, ಕಳೆದ ಚುನಾವೆಯಲ್ಲಿ ನನ್ನನ್ನು ಇಲ್ಲಿನ ಜನರು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದರು, ಈ ಬಾರಿ ಅದಕ್ಕೆ ನಾಲ್ಕು ಪಟ್ಟು ಹೆಚ್ಚಿನ ಮತ ನೀಡಿ ಗೆಲ್ಲಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com