'ಮತದಾರರಿಗೆ ಏನು ಬೇಕೆಂಬುದು ಗೊತ್ತಿದೆ, ಹೀಗಾಗಿ ನನ್ನನ್ನು ಆಯ್ಕೆ ಮಾಡುತ್ತಾರೆ'

ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಸಿ,ಎಸ್ ವಿಜಯ್ ಶಂಕರ್ ಈ ಬಾರಿ ತಮ್ಮ ಗೆಲುವು ಖಚಿತ ಎಂಬ ಆತ್ಮ ವಿಶ್ವಾಸ ...
ಸಿ.ಎಚ್ ವಿಜಯ್ ಶಂಕರ್
ಸಿ.ಎಚ್ ವಿಜಯ್ ಶಂಕರ್
ಮೈಸೂರು: ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ  ಮೈತ್ರಿ ಅಭ್ಯರ್ಥಿಯಾಗಿರುವ ಸಿ,ಎಸ್ ವಿಜಯ್ ಶಂಕರ್ ಈ ಬಾರಿ ತಮ್ಮ ಗೆಲುವು ಖಚಿತ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರ: ನಿಮ್ಮ ಪ್ರಚಾರಕ್ಕೆ ಜನರಿಂದ ಹೇಗೆ ಪ್ರತಿಕ್ರಿಯೆ ಸಿಗುತ್ತಿದೆ?
ಮತದಾರರು ಪ್ರಬುದ್ಧರು ಹಾಗೂ ಬುದ್ಧಿವಂತರು, ಪ್ರತಿ ಚುನಾವಣೆಯಲ್ಲಿ ಮತದಾರರಿಗೆ ಏನು ಬೇಕೇಂಬುದು ಅವರಿಗೆ ತಿಳಿದಿದೆ, ಹೀಗಾಗಿ ಯಾವುದನ್ನು ಆಯ್ಕೆ ಮಾಡಬೇಕೆಂದು ಅವರಿಗೆ ತಿಳಿದಿದೆ,ನಾನು ಪ್ರಾಮಾಣಿಕವಾಗಿ ಅವರ ಬೆಂಬಲ ಕೋರುತ್ತಿದ್ದೇನೆ, ಅವರ ಮನಸಾಕ್ಷಿ ಪ್ರಕಾರ ಮತ ಚಲಾಯಿಸುತ್ತಾರೆ, ಅವರನ್ನು ನಾವು ಟೇಕನ್ ಪಾರ್ ಗ್ರಾಂಟೆಡ್ ಆಗಿ ತೆಗೆದುಕೊಂಡಿಲ್ಲ.
ಪ್ರ: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಘರ್ಷಣೆ ನಿಮ್ಮ ಮೇಲೆ ಪರಿಣಾಮ ಬೀರಲಿದ್ಯಾ?
ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ಯಾವುದೇ ಘರ್ಷಣೆಯಿಲ್ಲ, ಮಾಜಿ ಪ್ರದಾನಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಜಿ,ಟಿದೇವೇಗೌಡ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. 
ಪ್ರ: ಈ ಮೊದಲು ಸಂಸದರಾಗಿದ್ದಾಗ ನೀವು ಕೊಟ್ಟ ಕೊಡುಗೆ ಏನು ಎಂಬ ಬಗ್ಗೆ ಪದೇ ಪದೇ ಹಾಲಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸುತ್ತಿದ್ದಾರಲ್ಲ?
ಎಲ್ಲಾ ಆರೋಪಗಳನ್ನು ಜನರಿಗೆ ಬಿಡುತ್ತೇನೆ, ನಾನು 2004 ರಿಂದ 2009ರ ವರೆಗೆ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಮೂರು ಪ್ಲಾಟ್ ಪಾರ್ಮ್ ನಿರ್ಮಿಸಿದ್ದೇನೆ, ಜೊತೆಗೆ ಮೈಸೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಗೇಜೆಗೇರಿಸಿದ್ದೇನೆ, ನನ್ನ ಅವಧಿಯಲ್ಲಿ ವಿಮಾನ ನಿಲ್ದಾಣದ ಕೆಲಸ ಕೂಡ ನೀಡಿದೆ.
ಪ್ರ: ನಿಮಗೆ ಏಕೆ ಜನ ಮತ ಹಾಕಬೇಕು?
ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ,ಜನರ ಜೊತೆ ಉತ್ತಮ ಸಂಪರ್ಕ ಹೊಂದಿದ್ದೇನೆ, ಸಮಸ್ಯೆಗಳಿಗೆ ಸ್ಪಂದಿಸುವ ನಾನು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದೇನೆ, ಜನರು ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಆತ್ಮ ವಿಶ್ವಾಸ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com