ಮಂಡ್ಯ: ದಿಗ್ಗಜರ ಭಾಷಣದ ಸಾರಾಂಶ ಗ್ರಹಿಸಿದ್ದೇನೆ- ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಸ್ವಾಭಿಮಾನಿ ಸಮ್ಮಿಲನ ಹೆಸರಿನಲ್ಲಿ ಹೆಸರಿನಲ್ಲಿ ನಡೆಸಿದ ಸಮಾವೇಶದ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಸ್ವಾಭಿಮಾನಿ ಸಮ್ಮಿಲನ ಹೆಸರಿನಲ್ಲಿ  ಹೆಸರಿನಲ್ಲಿ ನಡೆಸಿದ ಸಮಾವೇಶದ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ  ಪಕ್ಷೇತರ ಅಭ್ಯರ್ಥಿ ಪರವಾಗಿ ನಡೆದ ಸಮಾವೇಶದ ದಿಗ್ಗಜರ ಭಾಷಣದ ಸಾರಾಂಶವನ್ನು ಗ್ರಹಿಸಿದ್ದೇನೆ. ನನ್ನ ಬಗ್ಗೆ ಮಾಡಿರುವ ವೈಯಕ್ತಿಕ ಆಪಾದನೆಗಳಿಗೆ ಉತ್ತರ ನೀಡುವ ಶಕ್ತಿ ಮಂಡ್ಯ ಜಿಲ್ಲೆಯ ನನ್ನ ಬಾಂಧವರಿಗಿದೆ. ಉತ್ತರ ಕೊಡುವ ರೀತಿಯೂ ಅವರಿಗೆ ಗೊತ್ತಿದೆ ಎಂದಿದ್ದಾರೆ.

ಅಂಬರೀಷ್ ಹಾಗೂ ನನ್ನ ನಡುವಿನ ಸ್ನೇಹ ಮೂರು ದಶಕಗಳದ್ದು. ಅದು ರಾಜಕಾರಣದ ವ್ಯಾಪ್ತಿಯನ್ನೂ ಮೀರಿದ ಅಪ್ಪಟ ಗೆಳೆತನ. ಈ ಸ್ನೇಹಕ್ಕೆ ಅವರ ಕುಟುಂಬ ಸೂಕ್ತ ಕಾಣಿಕೆ ನೀಡಿದೆ' ಎಂದು ಬೇಸರವೂ ವ್ಯಕ್ತಪಡಿಸಿದ್ದಾರೆ.

ಅಂಬರೀಷ್ ಜೊತೆಗಿನ ಸ್ನೇಹ  ರಾಜಕಾರಣದ ವ್ಯಾಪ್ತಿಯನ್ನೂ ಮೀರಿದ ಅಪ್ಪಟ ಗೆಳೆತನ.ಈಸ್ನೇಹಕ್ಕೆ ಅವರ ಕುಟುಂಬ ಸೂಕ್ತಕಾಣಿಕೆ ನೀಡಿದೆ.ಮಂಡ್ಯದ ಮಣ್ಣಿನಮೇಲೆ ನಿಂತು ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿಯ ಪ್ರತಿಯೊಂದು ಮಾತುಕೂಡ ಮಂಡ್ಯದ ಮತದಾರರನ್ನು ಮೋಡಿಮಾಡುವ ತಂತ್ರ ಎಂಬುದರ ನಿಚ್ಚಳ ಅರಿವು ಮಂಡ್ಯದ ಜನರಿಗಿದೆ.ಇದಕ್ಕಿಂತ ಹೆಚ್ಚುಹೇಳಲು ನಾನು ಇಚ್ಛಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com