ಲೋಕಸಭೆ ಚುನಾವಣೆ: 2ನೇ ಹಂತದ ಮತದಾನಕ್ಕೆ ಖಾಕಿ ಕಣ್ಗಾವಲು!

ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ನಡೆಯುತ್ತಿರುವ 2ನೇ ಹಂತದ ಮತದಾನ ಬಿರುಸಿನಿಂದ ಸಾಗಿರುವಂತೆಯೇ ಮತದಾನದ ವೇಳೆ ಯಾವುದೇ ರೀತಿಯ ಅವಘಡಗಲು ಸಂಭವಿಸದಂತೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದು, ಭದ್ರತೆಗಾಗಿ ಅಪಾರ ಪ್ರಮಾಣದ ಪೊಲೀಸರನ್ನು ನಿಯೋಜಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ನಡೆಯುತ್ತಿರುವ 2ನೇ ಹಂತದ ಮತದಾನ ಬಿರುಸಿನಿಂದ ಸಾಗಿರುವಂತೆಯೇ ಮತದಾನದ ವೇಳೆ ಯಾವುದೇ ರೀತಿಯ ಅವಘಡಗಲು ಸಂಭವಿಸದಂತೆ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದು, ಭದ್ರತೆಗಾಗಿ ಅಪಾರ ಪ್ರಮಾಣದ ಪೊಲೀಸರನ್ನು ನಿಯೋಜಿಸಿದೆ.
ಕರ್ನಾಟಕದ ಒಟ್ಟು 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಮತದಾರರು ಸರತಿ ಸಾಲಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮತದಾನ ನಡೆಯುತ್ತಿರುವ ಎಲ್ಲ  14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಪೊಲೀಸರನ್ನು ನಿಯೋಜಿಸಿದೆ.
ಮೂಲಗಳ ಪ್ರಕಾರ ಒಟ್ಟು 282 ಡಿವೈಎಸ್‍ಪಿ ನೇತೃತ್ವದಲ್ಲಿ ಭದ್ರತೆ ಏರ್ಪಾಡು ಮಾಡಲಾಗಿದ್ದು, 851 ಪೊಲೀಸ್ ನಿರೀಕ್ಷಕರು, 1,188 ಪಿಎಸ್‍ಐ ಗಳು, 42,950 ಮುಖ್ಯಪೇದೆ, ಪೊಲೀಸ್ ಪೇದೆಗಳು, 40,117 ಗೃಹರಕ್ಷಕ ದಳದ ಸಿಬ್ಬಂದಿಗಳು,  414 ಅರಣ್ಯ ರಕ್ಷಕರು ಮತ್ತು 990 ಜೈಲ್ ವಾರ್ಡನ್ ಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 90,997 ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಇನ್ನು ಮತದಾನಕ್ಕಾಗಿ ಒಟ್ಟು 30,197 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಈ ಪೈಕಿ 23,879 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳು ಎಂದು ಮತ್ತು 6,318 ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.
ಪ್ರಸ್ತುತ ಮತದಾನ ನಡೆಯುತ್ತಿರವ ಕರ್ನಾಟಕದ ಒಟ್ಟು 14 ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, 4ರಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ಈ 14 ಕ್ಷೇತ್ರಗಳ ಪೈಕಿ ಮಂಡ್ಯ ಕಣ ಅತ್ಯಂತ ಹೈವೋಲ್ಟೇಜ್, ಹಾಟ್‍ಸೀಟ್ ಎನಿಸಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com