ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಶೇ.67.67ರಷ್ಟು ಮತದಾನ, ಮಂಡ್ಯದಲ್ಲಿ ಅತಿ ಹೆಚ್ಚು

ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದಲ್ಲಿ ಕರ್ನಾಟಕ ಸೇರಿದಂತೆ ದೇಶದ ಒಟ್ಟು 11 ರಾಜ್ಯಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ....

Published: 18th April 2019 12:00 PM  |   Last Updated: 18th April 2019 11:22 AM   |  A+A-


Loka Sabha Elections-2019: State records 67 percent voter turnout till 8pm

ಹಕ್ಕು ಚಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ

Posted By : LSB LSB
Source : Online Desk
ಬೆಂಗಳೂರು: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದಲ್ಲಿ ಕರ್ನಾಟಕ ಸೇರಿದಂತೆ ದೇಶದ ಒಟ್ಟು 11 ರಾಜ್ಯಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ರಾಜ್ಯದಲ್ಲಿ ರಾತ್ರಿ 8 ಗಂಟೆಯವರೆಗೆ  ಒಟ್ಟಾರೆ ಶೇ.67.67 ರಷ್ಟು ಮತದಾನವಾಗಿದೆ.

ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಮಾಹಿತಿ ನೀಡಿದ್ದು, ಮಂಡ್ಯದಲ್ಲಿ ಶೇ. 80ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ.49.76 ರಷ್ಟು ಮತದಾನವಾಗಿದೆ.

ಜಿಲ್ಲೆಗಳಲ್ಲಿ ಶೇಕಡಾವಾರು ಮತದಾನದ ವಿವರ
ಹಾಸನ                       77.28%
ದಕ್ಷಿಣ ಕನ್ನಡ             77.70%
ಚಿತ್ರದುರ್ಗ                  70.59 %
ತುಮಕೂರು                 77.01%
ಮಂಡ್ಯ                        80. 23%
ಮೈಸೂರು                   68.72%
ಚಾಮರಾಜನಗರ         73.45%
ಬೆಂಗಳೂರು ಗ್ರಾಮಾಂತರ 64.9%
ಬೆಂಗಳೂರು ಉತ್ತರ           50.03%
ಬೆಂಗಳೂರು ಕೇಂದ್ರ           49.76 %
ಬೆಂಗಳೂರು ದಕ್ಷಿಣ            53.53 %
ಚಿಕ್ಕಬಳ್ಳಾಪುರ      76.14%
ಕೋಲಾರ      71.99%
ಉಡುಪಿ, ಚಿಕ್ಕಮಗಳೂರು  75.26%
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp