ಮೂಲಸೌಕರ್ಯ ಇಲ್ಲ, ಮತದಾನ ಇಲ್ಲ: ಚಿತ್ರದುರ್ಗದಲ್ಲಿ 2 ಗ್ರಾಮಗಳ ಜನರಿಂದ ಮತದಾನ ಬಹಿಷ್ಕಾರ

ಮೂಲಭೂತ ಸೌಕರ್ಯ, ಗ್ರಾಮಾಭಿವೃದ್ಧಿಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಚಿತ್ರದುರ್ಗದ ನಾಲ್ಕು ಗ್ರಾಮಗಳ ಪೈಕಿ 2 ಗ್ರಾಮದ ಜನರು ಮಾತ್ರ ಮತದಾನ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಿತ್ರದುರ್ಗ: ಮೂಲಭೂತ ಸೌಕರ್ಯ, ಗ್ರಾಮಾಭಿವೃದ್ಧಿಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಚಿತ್ರದುರ್ಗದ ನಾಲ್ಕು ಗ್ರಾಮಗಳ ಪೈಕಿ 2 ಗ್ರಾಮದ ಜನರು ಮಾತ್ರ ಮತದಾನ ಮಾಡಿದ್ದಾರೆ. 
ಚಿತ್ರದುರ್ಗ ತಾಲೂಕಿನ ಪಂಜಯ್ಯನಹಟ್ಟಿ, ಓಬಣ್ಣನಹಳ್ಳಿ ಹಾಗೂ ಹೊಳಲ್ಕೆರೆ ತಾಲೂಕಿನ ನಗರಘಟ್ಟ, ಐನಹಳ್ಳಿ ಗ್ರಾಮಸ್ಥರು, ಗ್ರಾಮಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ, ಸಮಸ್ಯೆಗಳಿಗೆ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕಾರಕ್ಕೆ ಮುಂದಾದರು.
ಸುಮಾರು 650 ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ನಗರಘಟ್ಟದಲ್ಲಿ ಮತಗಟ್ಟೆ ಸಂಖ್ಯೆ 192 ರಲ್ಲಿ ಮತದಾನಕ್ಕೆ ಅವಕಾಶ ಮಾಡಲಾಗಿತ್ತು. ಆದರೆ ಕುಡಿಯುವ ನೀರು, ನೀರು ಶುದ್ಧೀಕರಣ ಘಟಕ, ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡದ ದುರಸ್ತಿ  ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿದ ನಗರಘಟ್ಟ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದಾಗ, ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು. 
ಐನಹಳ್ಳಿ ಗ್ರಾಮಸ್ಥರದ್ದೂ ಇದೇ ಪರಿಸ್ಥಿತಿಯಾಗಿತ್ತು. ನಂತರ ಅಧಿಕಾರಿಗಳ ಮನವೊಲಿಕೆಗೆ ಸ್ಪಂದಿಸಿದ ಐನಹಳ್ಳಿ, ನಗರಘಟ್ಟ ಗ್ರಾಮಸ್ಥರು ಮತದಾನಕ್ಕೆ ಮುಂದಾದರು. ಆದರೆ ಪಂಜಯ್ಯನಹಟ್ಟಿ, ಓಬಣ್ಣನಹಳ್ಳಿ ಗ್ರಾಮಸ್ಥರು ತಮ್ಮ ಪಟ್ಟು ಸಡಿಲಿಸದೇ ಮತದಾನ ಬಹಿಷ್ಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com