ಜಗದೀಶ್ ಶೆಟ್ಟರ್ ನಮ್ಮ ತಾಯಿ ಬಗ್ಗೆ ಆಡಿದ ಮಾತು ಬೇಸರ ತಂದಿದೆ: ಸಿಎಂ ಕುಮಾರಸ್ವಾಮಿ

ತಮ್ಮ ಕುಟುಂಬದ ಮೇಲೆ ಬಿಜೆಪಿಯವರು ನಿರಂತರವಾಗಿ ಆರೋಪ ಮಾಡುತ್ತಲೇ ಬಂದಿದ್ದಾರೆ. ನನ್ನ ತಾಯಿ ...

Published: 19th April 2019 12:00 PM  |   Last Updated: 19th April 2019 12:18 PM   |  A+A-


CM Kumaraswamy and other leaders in press meet

ಸುದ್ದಿಗೋಷ್ಠಿಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಇತರ ಮುಖಂಡರು

Posted By : SUD SUD
Source : Online Desk
ಹುಬ್ಬಳ್ಳಿ: ತಮ್ಮ ಕುಟುಂಬದ ಮೇಲೆ ಬಿಜೆಪಿಯವರು ನಿರಂತರವಾಗಿ ಆರೋಪ ಮಾಡುತ್ತಲೇ ಬಂದಿದ್ದಾರೆ. ನನ್ನ ತಾಯಿ ಚಿನ್ನಮ್ಮನವರನ್ನು ರಾಜ್ಯಸಭಾ ಸದಸ್ಯೆಯನ್ನಾಗಿ ಮಾಡಲಿ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆ ಮನಸ್ಸಿಗೆ ಬೇಸರ ತಂದಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮೈತ್ರಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರು ಯಾವತ್ತಿಗೂ ನಮ್ಮ ತಾಯಿಯನ್ನು ರಾಜಕೀಯಕ್ಕೆ ಕರೆತರಬೇಕೆಂದು ಬಯಸಿದವರಲ್ಲ, ಅವರಿಗೆ ಅಷ್ಟು ಮನಸ್ಸಿದ್ದಿದ್ದರೆ 1985ರಲ್ಲಿಯೇ ರಾಜಕೀಯಕ್ಕೆ ಕರೆತರುವ ಅವಕಾಶವಿತ್ತು. ನಮ್ಮ ತಾಯಿ ರಾಜಕೀಯ ಮಾಡಿದವರಲ್ಲ, ತಮ್ಮ 80 ವರ್ಷಗಳ ಜೀವನದಲ್ಲಿ ಅವರು ಬಡಜನರ ಪರವಾಗಿ ಕೆಲಸ ಮಾಡಿದ್ದು ಯಾವುದೇ ರಾಜಕೀಯ ಆಕಾಂಕ್ಷೆಗಳನ್ನು ಇಟ್ಟುಕೊಂಡವರಲ್ಲ ಎಂದು ತಿರುಗೇಟು ನೀಡಿದರು.
Stay up to date on all the latest ಕರ್ನಾಟಕ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp