ಮತದಾನಕ್ಕೂ ಮುನ್ನ ದೇವರ ಮೊರೆ ಹೋದ ಅಭ್ಯರ್ಥಿಗಳು: ಗೆಲುವಿಗಾಗಿ ಪ್ರಾರ್ಥನೆ!

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು, ಮತದಾನಕ್ಕೆ ತೆರಳುವ ಮುನ್ನ ರಾಜಕಾರಣಿಗಳು ದೇವರ ದರ್ಶನ ಪಡೆದು ನಂತರ ಮತದಾನ ಮಾಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು, ಮತದಾನಕ್ಕೆ ತೆರಳುವ ಮುನ್ನ ರಾಜಕಾರಣಿಗಳು ದೇವರ ದರ್ಶನ ಪಡೆದು ನಂತರ ಮತದಾನ ಮಾಡಿದ್ದಾರೆ.
ಮಾಜಿ ಪ್ರಧಾನಿ ಹಾಗೂ ತುಮಕೂರು ಕ್ಷೇತ್ರದ ಅಭ್ಯರ್ಥಿ ಎಚ್.ಡಿ ದೇವೇಗೌಡ  ಹರದನಹಳ್ಳಿಯಲ್ಲಿರುವ ಈಶ್ವರ ದೇವಾಲಯದಲ್ಲಿ ತಮ್ಮ ಪುತ್ರ ಎಚ್.ಡಿ ರೇವಣ್ಣ ಹಾಗೂ ಮೊಮ್ಮಗ ಪ್ರಜ್ವಲ್ ರೇವಣ್ಣ ಜೊತೆ ಪೂಜೆ ಸಲ್ಲಿಸಿ ನಂತರ ಮತದಾನ ಮಾಡಿದ್ದಾರೆ. 2014 ರಲ್ಲಿ  ದೇವೇಗೌಡರು ಮತದಾನ ಮಾಡುವ ಮುನ್ನ ಇದೇ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.
ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಕಲಬುರಗಿಯಿಂದ ಮೈಸೂರಿಗೆ ಆಗಮಿಸಿ ಮೈಸೂರಿನ ಸಿದ್ದಾರಮೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ನಂತರ ಮತದಾನ ಮಾಡಿದರು,
ಇನ್ನೂ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಮ್ಮ ಕುಟುಂಬ ಸಮೇತ, ಆದಿಚುಂಚನಗಿರಿ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದು ರಾಮನಗರದ ಕೇತಗಾನಹಳ್ಳಿಯಲ್ಲಿ ಮತ ಚಲಾಯಿಸಿದರು.
ಸಚಿವ ಡಿ.ಕೆ ಶಿವಕುಮಾರ್ ತಮ್ಮ ಪತ್ನಿ ಉಷಾ ಮತ್ತು ಮಗಳು ಐಶ್ವರ್ಯ ಜೊತೆ  ಕಬ್ಬಾಳಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ದೊಡ್ಡಾಲಹಳ್ಳಿ ಮತದಾನ ಮಾಡಿದರು.
ಸಂಸದೆ ಶೋಭಾ ಕರಂದ್ಲಾಜೆ ಅಂಬಲಪಾಡಿ ಮಹಾಕಾಳಿ ಮತ್ತು ಶ್ರೀಕೃಷ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಬೆಂಗಳೂರಿಗೆ ಬಂದು ಮತದಾನ ಮಾಡಿದರು.
ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ,ಸೂರ್ಯ ಮನೆಯಲ್ಲಿ ಪೂಜೆ ಮಾಡಿ ನಂತರ ಮತದಾನ ಮಾಡಿದರು,  ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದಗೌಡ ಕೂಡ ತಮ್ಮ ಪತ್ನಿ ಜೊತೆ ತೆರಳಿ ಮತದಾನ ಮಾಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com