ಆರು ತಿಂಗಳ ಹಿಂದಿನ ಫೋಟೋದಲ್ಲಿ ಪ್ರಿಯಾಂಕಾ ಹಣೆ ಮೇಲೆ ಕುಂಕುಮ ಇರಲಿಲ್ಲ, ಈಗ ಹೇಗೆ ಬಂತು: ಬಿ.ಎಲ್. ಸಂತೋಷ್

ಗಂಡ ಇದ್ದರೂ ಕೂಡ ಪ್ರಿಯಾಂಕಾ ಗಾಂಧಿ ಹಣೆ ಮೇಲೆ ಕುಂಕುಮ ಇರಲಿಲ್ಲ. ಆರು ತಿಂಗಳ ಹಿಂದಿನ ಫೋಟೋ ನೋಡಿ ಕುಂಕುಮ ಇರಲಿಲ್ಲ. ಇದೀಗ ಎಲೆಕ್ಷನ್ ಗಾಗಿ ಹಣೆ ....

Published: 20th April 2019 12:00 PM  |   Last Updated: 20th April 2019 12:11 PM   |  A+A-


B.L Santhosh

ಬಿ.ಎಲ್ ಸಂತೋಷ್

Posted By : SD SD
Source : Online Desk
ಕೊಪ್ಪಳ: ಗಂಡ ಇದ್ದರೂ ಕೂಡ ಪ್ರಿಯಾಂಕಾ ಗಾಂಧಿ ಹಣೆ ಮೇಲೆ ಕುಂಕುಮ ಇರಲಿಲ್ಲ. ಆರು ತಿಂಗಳ ಹಿಂದಿನ ಫೋಟೋ ನೋಡಿ ಕುಂಕುಮ ಇರಲಿಲ್ಲ. ಇದೀಗ ಎಲೆಕ್ಷನ್ ಗಾಗಿ ಹಣೆ ಮೇಲೆ ತಿಲಕ ಕಾಣಿಸುತ್ತಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.

ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದ ಶಕ್ತಿ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ದೇವರ ಭಕ್ತರಾಗಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಭಕ್ತ ಎಂದು ಜರಿದಿದ್ದಾರೆ

ಒಂದೇ ಏಟಿಗೆ ಎರಡು ಹಕ್ಕಿಯನ್ನ ಹೊಡೆಯಲು ಕರೆ ನೀಡಿದರು. ಅಲ್ಲದೆ ನೀವು ಒಂದು ಮತ ಹಾಕಿದರೇ ಎರಡು ಸರ್ಕಾರ ಬರುತ್ತದೆ. ನೀವು ಒಂದು ಮತ ಹಾಕಿದರೇ ಡೈರೆಕ್ಟ್ ಮೋದಿ ಸರ್ಕಾರ ಸಿಗತ್ತದೆ. ಇನ್ನೊಂದು ವಿಧಾನಸಭೆಯಲ್ಲಿ ನಮ್ಮ ಸರ್ಕಾರ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಸಂಗಣ್ಣ ಕರಡಿ ಅವರನ್ನು 2 ಲಕ್ಷ ಮತಗಳ ಆಂತರದಿಂದ ಗೆಲ್ಲಿಸಬೇಕು. ಕರ್ನಾಟಕದಲ್ಲಿ ಒಂದು ವೋಟಿಗೆ ಎರಡು ಸರ್ಕಾರ ಸ್ಕೀಮ್ ಜಾರಿಗೆ ತರುತ್ತಿದ್ದೇವೆ. ಸಾಲಮನ್ನಾ ಹೆಸರಲ್ಲಿ ನೋಟಿಸ್ ಕೊಡುವ ಸರ್ಕಾರವನ್ನ ಬೀಳಿಸಬೇಕು ಎಂದು ಸಂತೋಷ್ ಕರೆ ನೀಡಿದರು.

ರಾಹುಲ್ ಗಾಂಧಿ ಪಂಚೆ ಕಟ್ಟಿಕೊಂಡು ದೇವಸ್ಥಾನಕ್ಕೆ ಹೋದ್ರೆ ಜೋಕರ್ ಹೋದಂಗೆ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp