ಶಿವಮೊಗ್ಗ: ಮಾಜಿ ಸಿಎಂ ಮಕ್ಕಳ ಜಿದ್ದಾ ಜಿದ್ದಿನ ಕದನ; ರಾಘವೇಂದ್ರಗೆ ಮೋದಿ ಬಲ, ಮಧುಗೆ ಮೈತ್ರಿ ಬಲ

ಎರಡನೇ ಹಂತದ ಮತದಾನ ನಡೆಯುವಲ್ಲಿ ಶಿವಮೊಗ್ಗ ಕ್ಷೇತ್ರವು ಅತ್ಯಂತ ಮಹತ್ವದ್ದೆನಿಸಿದೆ. ಈ ವೇಳೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ...
ಮಧು ಬಂಗಾರಪ್ಪ
ಮಧು ಬಂಗಾರಪ್ಪ
ಶಿವಮೊಗ್ಗ: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಗಿದಿದ್ದು, ಶಿವಮೊಗ್ಗ ಸೇರಿ 14 ಕ್ಷೇತ್ರಗಳ ಮತದಾನ ಏಪ್ರಿಲ್ 23 ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ನಡೆಯುವಲ್ಲಿ ಶಿವಮೊಗ್ಗ ಕ್ಷೇತ್ರವು ಅತ್ಯಂತ ಮಹತ್ವದ್ದೆನಿಸಿದೆ. ಈ ವೇಳೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಪ್ರ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಮಾದರಿ ಅಭಿವೃದ್ಧಿಯನ್ನು ಹೇಗೆ ನಿಭಾಯಿಸುವಿರಿ?
ಶಿಕಾರಿಪುರ ಯಡಿಯೂರಪ್ಪ ಅವರ ಸ್ವಂತ ಸ್ಥಳ, ರೈತರ ಕೃಷಿಭೂಮಿ ಗೆ ನೀರಾವರಿ ಸೌಕರ್ಯ ಕಲ್ಪಿಸಿಲ್ಲ, ಸಿಎಂ ಕುಮಾರಸ್ವಾಮಿ 200 ಕೋಟಿ ಮತ್ತು ಶಿವಮೊಗ್ಗ ನಗರದ ಪೈಪ್ ಲೈನ್ ಗಾಗಿ ಒಂದು ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಯಡಿಯೂರಪ್ಪ ಅವರು ಅಭಿವೃದ್ಧಿ ಎಂದು ಹೇಳುತ್ತಾರೆ. ಆದರೆ ಕ್ಷೇತ್ರಕ್ಕೆ ಅಗತ್ಯವಾದ ಅಭಿವೃದ್ಧಿ ಆಗಲಿಲ್ಲ, ಒಂದು ವೇಳೆ ಕ್ಷೇತ್ರದ ಅಭಿವೃದ್ಧಿ ಆಗಿದ್ದರೇ ಮೋದಿ ಹೆಸರಲ್ಲಿ ಏಕೆ ಮಗನ ಪರವಾಗಿ ಮತ ಕೇಳಬೇಕು.
ಪ್ರ: ಮೋದಿ ಅಲೆ  ಕೆಲಸ ಮಾಡುತ್ತದೆ ಎಂದು ನಿಮಗೆ ಅನ್ನಿಸುತ್ತಾ?
ಇಲ್ಲಿ ಯಾವುದೇ ಮೋದಿ ಅಲೆಯಿಲ್ಲ, ಮೋದಿ ಮೌಲ್ಯ ಕುಸಿಯುತ್ತಿದೆ, ಒಂದು ವೇಳೆ ಮೋದಿ ಅಲೆ ಇದ್ದಿದ್ದರೇ ರಾಘವೇಂದ್ರ ಅವರ ಗೆಲುವಿನ ಅಂತರ ಕುಸಿಯುತ್ತಿರಲಿಲ್ಲ, ನಾನು ಉಪಚುನಾವಣೆಯಲ್ಲಿ ಕೇವಲ 13 ದಿನ ಮಾತ್ರ ಪ್ರಚಾರ ಮಾಡಿದ್ದೆ. ನನಗೆ ತುಂಬಾ ಮತದಳು ಬಂದಿದ್ದವು.ಡಿ.ಕೆ ಶಿವಕುಮಾರ್ ಇದನ್ನು ವಯಕ್ತಿಕವಾಗಿ ತೆಗೆದುಕೊಂಡಿದ್ದಾರೆ, ಹೀಗಾಗಿ ಶಿವಮೊಗ್ಗದಲ್ಲಿ ಗೆಲುವು ಖಚಿತ.
ಪ್ರ: ಬುಗರ್ ಹುಕುಂ ಮತ್ತು ಕಸ್ತೂರಿ ರಂಗನ್ ವರದಿ ಬಗ್ಗೆ ನಿಮ್ಮ ಭರವಸೆ ಏನು?
ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸುತ್ತೇವ, ಆದರೆ ಬಿಜೆಪಿ ಸರ್ಕಾರದ ಮೂಲಕ ಅದು ಅನುಷ್ಠಾನಗೊಳ್ಳುವುದಕ್ಕೆ ನಾವು ಬಿಡುವುದಿಲ್ಲ, ಬಗರ್ ಹುಕುಂ ಮತ್ತೊಂದು ವಿಷಯವಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ರೈತರನ್ನು ಅಲ್ಲಿಂದ ತೆರವುಗೊಳಿಸುವುದಿಲ್ಲ ಎಂಗು ಹೇಳಿದ್ದಾರೆ.
ಪ್ರ: ಜನ ನಿಮಗೆ ಏಕೆ ಮತ ಹಾಕಬೇಕು?
ನಾನು ಸಂಸತ್ತಿನಲ್ಲಿ ಜನರ ದನಿಯಾಗಿರುತ್ತೇನೆ,ಭದ್ರಾವತಿಯಲ್ಲಿ ಕೈಗಾರಿಕಾ ಘಟಕ ಸ್ಥಾಪಿಸುತ್ತೇವೆ,  ಬಿಜೆಪಿ ಅವಧಿಯಲ್ಲಿ  ವಿಐಎಸ್ ಎಲ್ ಕಬ್ಬಿಣ ಕಾರ್ಖಾನೆ  ಪುನರುಜ್ಜೀವನ ಗೊಳಿಸಬಹುದಿತ್ತು, ಆದರೆ ಅವರು ಅದನ್ನು ಮಾಡಲಿಲ್ಲ, ಸ್ಟೀಲ್ ಫ್ಯಾಕ್ಟರಿ ಮತ್ತು ಪೇಪರ್ ಮಿಲ್ ಗಳನ್ನು ನಾವು ಪುನರುಜ್ಜೀವನಗೊಳಿಸುತ್ತೇವೆ, ಜೊತೆಗೆ ಇಡಿ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತೇವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com