ಲೋಕ ಸಮರ: ಭದ್ರಾವತಿಯಲ್ಲಿ ಅಮಿತ್ ಶಾ ರೊಡ್ ಶೊ, ಬಿವೈ ರಾಘವೇಂದ್ರ ಪರ ಮತಯಾಚನೆ

ಶಿವಮೊಗ್ಗ ಲೋಕಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಸಂಸದ ಬಿ.ವೈ. ರಾಘವೇಂದ್ರ ಪರ ಪ್ರಚಾರಕ್ಕಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶನಿವಾರ ಭದ್ರಾವತಿಗೆ ಆಗಮಿಸಿ ರೊಡ್ ಶೋ ನಡೆಸಿದ್ದರು.

Published: 21st April 2019 12:00 PM  |   Last Updated: 21st April 2019 09:15 AM   |  A+A-


Amit Shah stirs up Bhadravati, seeks votes for Raghavendra

ಭದ್ರಾವತಿಯಲ್ಲಿ ಅಮಿತ್ ಶಾ ರೊಡ್ ಶೊ, ಬಿವೈ ರಾಘವೇಂದ್ರ ಪರ ಮತಯಾಚನೆ

Posted By : RHN RHN
Source : The New Indian Express
ಭದ್ರಾವತಿ: ಶಿವಮೊಗ್ಗ ಲೋಕಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಸಂಸದ ಬಿ.ವೈ. ರಾಘವೇಂದ್ರ ಪರ ಪ್ರಚಾರಕ್ಕಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶನಿವಾರ ಭದ್ರಾವತಿಗೆ ಆಗಮಿಸಿ ರೊಡ್ ಶೋ ನಡೆಸಿದ್ದರು.ಭದ್ರಾವತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದೆ. ಜೆಡಿಎಸ್ ಮಾಜಿ ಶಾಸಕ ಎಂಜೆ ಅಪ್ಪಾಜಿ ಗೌಡ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್  ಕಾರಣದಿಂಡಾಗಿ ಇಲ್ಲಿ ಮೈತ್ರಿ ಅಭ್ಯರ್ಥಿ ಪರ ಅಲೆ ಇದೆ ಎನ್ನಲಾಗುತ್ತಿದೆ.ಬಿಜೆಪಿಗೆ ಈ ಪಟ್ಟಣದಲ್ಲಿ ಇನ್ನೂ ನೆಲೆ ಕಂಡುಕೊಳ್ಲಲಾಗದೆ ಹೋಗಿದ್ದು ಇದೀಗ ಶಾ ರ್ಯಾಲಿ ಬಿಜೆಪಿಗೆ ಹೊಸ ನೆಲೆ ಒದಗಿಸಲಿದೆಯೆ ನೋಡಬೇಕಿದೆ.

ರ್ಯಾಲಿಯಲ್ಲಿ ಭಾಗವಹಿಸಿ ಶಾ ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಲು ರಾಘವೇಂದ್ರನನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ."ನಾನು ಸಹ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಏಪ್ರಿಲ್ 23ಕ್ಕೆ ನನ್ನ ಕ್ಷೇತ್ರದ ಮತದಾನವೂ ನಡೆಯುತ್ತಿದೆ.ಆದರೆ ರಾಜ್ಯ ಬಿಜೆಪಿ ನಾಯಕರು ನನ್ನನ್ನು ಇಲ್ಲಿಗೆ ಬರಲು ಮತ್ತು ರಾಘವೇಂದ್ರ ಅವರ ವಿಜಯವನ್ನು ಖಚಿತಪಡಿಸಿಕೊಳ್ಳಲು ಮನವಿ ಮಾಡಿದರು. ರಾಘವೇಂದ್ರಕ್ಕೆ ನೀವು ತುಂಬಾ ಪ್ರೀತಿಯನ್ನು ನೀಡಿದ್ದೀರಿ. ನಾನು ನಿಮಗೆ ಕೃತಜ್ಞನಾಗಿದ್ದೇನೆ "ಎಂದು ಅವರು ಹೇಳಿದರು.

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಕಾರ್ಖಾನೆ  ಪುನರುಜ್ಜೀವನ ಭರವಸೆಯನ್ನಿತ್ತ ಯಡಿಯೂರಪ್ಪ 2014 ರ ಲೋಕಸಭೆ ಚುನಾವಣೆಯಲ್ಲಿ  ತಮ್ಮ ಪುತ್ರನಿಗೆ ಭಾರೀ ಅಂತರದ ಗೆಲುವು ದಕ್ಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ 2018ರಲ್ಲಿ ನಡೆದ ಚುನವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ  ವಿರುದ್ಧ ಹೆಚ್ಚಿನ ಮತ ಗಳಿಸಿಕೊಳ್ಲಲು ವಿಫಲರಾಗಿದ್ದರು.

ಇದೇ ವೇಳೆ ಶನಿವಾರ ರ್ಯಾಲಿಯಲ್ಲಿ ಮಾತನಾಡಿದ ಶಾ ಮೂರು ನಿಮಿಷಗಳ ತಮ್ಮ ಮಾತುಗಳಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಕಾರ್ಖಾನೆ ಪುನರುಜ್ಜೀವನ ಕುರಿತು ಏನನ್ನೂ ಹೇಳಲಿಲ್ಲ.

ಕ್ಷೇತ್ರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ತಾವು ಕಷ್ಟಪಟ್ಟು ಕೆಲಸ ಮಾಡುವುದಾಗಿ ಅಭ್ಯರ್ಥಿ ರಾಘವೇಂದ್ರ ಹೇಳಿದ್ದಾರೆ. ಪ್ರತಿ ಬಿಜೆಪಿ ಕಾರ್ಯಕರ್ತರೂ ರಾಘವೇಂದ್ರ ಅವರಿಗೆ 10 ಮತಗಳನ್ನು ತಂದುಕೊಡಲು ಪ್ರಯತ್ನಿಸಿರಿ ಎಂದು ಶಿವಮೊಗ್ಗ ಭಾಗದ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದ್ದಾರೆ. ಹಿರಿಯ ಬಿಜೆಪಿ ನಾಯಕರು ಕೆ.ಎಸ್. ಈಶ್ವರಪ್ಪ, ಅಭ್ಯರ್ಥಿ ಬಿ.ಆರ್. ರಾಘವೇಂದ್ರ, ವಿಶ್ವೇಶ್ವರ ಹೆಗ್ಡೆ ಕಾಗೆರಿ ಮತ್ತು ಇತರರುರ್ಯಾಲಿಯಲ್ಲಿ ಭಾಗವಹಿಸಿದ್ದರು.6,000 ಕ್ಕಿಂತ ಹೆಚ್ಚು ಕಾರ್ಯಕರ್ತರು ರೋಡ್ ಶೋ ವೇಳೆ ಭಾಗಿಗಳಾಗಿದ್ದರು.
Stay up to date on all the latest ಕರ್ನಾಟಕ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp