ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಚುನಾವಣಾ ಪ್ರಚಾರ: ವೈಯುಕ್ತಿಕ ತೆಗಳಿಕೆ, ಟೀಕೆಗಳಲ್ಲಿ ಹೊಸ ದಾಖಲೆ ನಿರ್ಮಿಸಿದ ರಾಜಕಾರಣಿಗಳು

ಈ ಲೋಕಸಭೆ ಚುನಾವಣೆ ಸಮಯವು ರಾಜಕಾರಣಿಗಳ ಪಾಲಿಗೆ ಮುಖಾಮುಖಿ ಟೀಕೆಗಳ ಅತಿರೇಕದ ಕಾಲವಾಗಿ ಪರಿಣಮಿಸಿದೆ.ಎರಡನೇ ಹಂತದ ಮತದಾನಕ್ಕೆ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿರುವ ಬೆನ್ನಲ್ಲೇ....
ಬೆಂಗಳೂರು: ಈ ಲೋಕಸಭೆ ಚುನಾವಣೆ ಸಮಯವು ರಾಜಕಾರಣಿಗಳ ಪಾಲಿಗೆ ಮುಖಾಮುಖಿ ಟೀಕೆಗಳ ಅತಿರೇಕದ ಕಾಲವಾಗಿ ಪರಿಣಮಿಸಿದೆ.ಎರಡನೇ ಹಂತದ ಮತದಾನಕ್ಕೆ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿರುವ ಬೆನ್ನಲ್ಲೇ ಶನಿವಾರ ವಿವಿಧ ಪಕ್ಷಗಳ ನಾಯಕರ ನಡುವಿನ ವಾಕ್ಸಮರ ಇನ್ನಷ್ಟು ತಾರಕಕ್ಕೇರಿದೆ.ಇತ್ತೀಚಿನ ಉದಾಹರಣೆಯೆಂದರೆ, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ "ತಲೆ ಇಲ್ಲದವನು" ಎಂದಿದ್ದರು. ಅಲ್ಲದೆ ಜಮೀರ್ ಅಹ್ಮದ್ ಖಾನ್ ನರೇಂದ್ರ ಮೋದಿ "ಪತ್ನಿಯ ಮುಖ ಸರಿಯಿಲ್ಲ" ಎಂಬ ಕಾರಣಕ್ಕೆ ಹೆಂಡತಿ ಬಿಟ್ಟರು ಎಂದು ಹೇಳಿಕೆ ಕೊಟ್ಟಿದ್ದರು.
ರಾಜಕೀಯ ವಿರೋಧಿಗಳ ಬಗ್ಗೆ ವಿವಾದಾಸ್ಪದ ಟೀಕೆಗಳಿಗೆ ಹೆಸರುವಾಸಿಯಾಗಿದ್ದ ಈಶ್ವರಪ್ಪ ಅವರಿಂದ ಡಿಕೆಶಿ ವಿರುದ್ಧ ಯಾವ ಪ್ರತಿಕ್ರಿಯೆ ಬಂದಿಲ್ಲವಾದರೂ ಪ್ರಧಾನ ಮಂತ್ರಿಯ ಕುರಿತು ಖಾನ್ ಅವರ ಹೇಳಿಕೆ ಸಂಬಂಧ ಬಿಜೆಪಿ ನಾಯಕ ಬಿ.ಶ್ರೀರಾಮುಲು ತೀವ್ರ ಪ್ರತಿಕ್ರಿಯೆಕೊಟ್ಟಿದ್ದಾರೆ.ಮೊಳಕಾಲ್ಮೂರು ಶಾಸಕ  ರಾಮುಲು ಇದು ಆ ಮಂತ್ರಿಗಳ ಸಂಸ್ಕೃತಿಯೇ ಆಗಿದೆ ಎಂದಿದ್ದಾರೆ. "ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಬ್ಬ ಮನುಷ್ಯನು ತನ್ನ ಹೆಂಡತಿಯನ್ನು ಸಾಯುವವರೆಗೆ ಕೈಬಿಡುವುದಿಲ್ಲ. ಆದರೆ ಜಮೀರ್ ಅಹ್ಮದ್ ಖಾನ್ ಅವರ ಸಂಸ್ಕೃತಿಯ ಬಗ್ಗೆ ನನಗೆ ಗೊತ್ತಿಲ್ಲ '' ಎಂದು ಶ್ರೀರಾಮುಲು ಹೇಳಿದರು.
ಹುಬ್ಬಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ಮೋದಿಯವರನ್ನು 'ಮಾಫಿಯಾ ಪ್ರಧಾನಿ' ಎಂದು ಕರೆದರು. "ಐ-ಟಿ, ಇಡಿ ಮತ್ತು ಸಿಬಿಐ ಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ.ಇದಕ್ಕೆ ಮಾದ್ಯಮ ಸಹ ಅಡ್ಡಿಯಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಮಾಜಿ ಶಾಸಕ ರಾಜು ಕಾಗೆ  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯನ್ನು ಎಷ್ಟೇ ಬಣ್ಣ ಹಚ್ಚಿದರೂ ಬಿಳಿಯಾಗದ ಎಮ್ಮೆ ಎಂಬುದಾಗಿ ಕರೆದಿದ್ದರು. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಮೋದಿ ತಾವು ಮೇಕಪ್ ಮಾಡಿಕೊಂಡು ಚುನಾವಣಾ ಸಭೆಗೆ ಆಗಮಿಸುತ್ತಾರೆ ಎಂದಿದ್ದ ನಂತರ ಬಿಜೆಪಿ ನಾಯಕರ ಈ ಪ್ರತಿಕ್ರಿಯೆ ಬಂದಿದೆ.
ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ  ಬಗೆಗೆ ಪಿಡಬ್ಲ್ಯೂಡಿ ಸಚಿವ ಎಚ್.ಡಿ. ರೆವಣ್ಣ ಅವರು "ಪತಿ ಅಂಬರೀಶ್ ಇತ್ತೀಚೆಗೆ ನಿಧನರಾಗಿದ್ದರೂ ಅವರ ಮುಖದಲ್ಲಿ ಯಾವುದೇ ದುಃಖ ಕಾಣಿಸುತ್ತಿಲ್ಲ ಎಂದು ಜರಿದಿದ್ದರು.ಮತ್ತೊಬ್ಬ ಸಚಿವ ಡಿ.ಸಿ.ತಮ್ಮಣ್ಣ ಸುಮಲತಾ ಈ  ಹಿಂದೆ ತಮ್ಮ ಮನೆಗೆ ಬಂದವರಿಗೆ ಒಂದು ಲೋಟ ನೀರನ್ನೂ ಕೊಟ್ಟಿರಲಿಲ್ಲ ಎಂದು ವಾಕ್ ಪ್ರಹಾರ ನಡೆಸಿದ್ದರು. ಅಲ್ಲದೆ ಜೆಡಿಎಸ್ ನಾಯಕ ಶಿವರಾಮೇಗ್ಗೌಡ ಸುಮಲತಾ ಗೌಡ್ತಿಯಲ್ಲ ಎಂಬ ಮೂಲಕ ಜಾತಿ ಪ್ರಸ್ತಾಪವನ್ನೂ ಮಾಡಿದ್ದರು.
ವಾರಾಂತ್ಯದ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬ್ರಾಹ್ಮಣರಲ್ಲ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿವಾದಕ್ಕೆ ಆಸ್ಪದವಾಗಿತ್ತು. ಅಲ್ಲದೆ ಅವರೇ ನೀಡಿದ್ದ ಯಾವುದೇ ಹಿಂದೂ ಹುಡುಗಿಯನ್ನು ಮುಟ್ಟುವ ಮುಸ್ಲಿಮರ ಕೈ ಕಡಿಯಿರಿ ಎಂಬ ಹೇಳಿಕೆ ಸಹ ಗಂಬೀರ ಚರ್ಚೆಗೆ ಗ್ರಾಸವಾಗಿತ್ತು.
ರಾಜಕೀಯ ಭಾಷಣ ಹಿಂಸಾತ್ಮಕ, ಪ್ರಚೋದನಾಕಾರಿಯಾಗಿದೆ ಎಂದು ವಿಶ್ಲೇಷಕ ಬಿ. ಮೂರ್ತಿ ಹೇಳಿದ್ದಾರೆ.  ಅಲ್ಲದೆ ಮತದಾರರನ್ನು ತಮ್ಮ ಕೀಳುಮಟ್ಟದ  ಹೇಳಿಕೆಗಳೊಂದಿಗೆ ನಾಯಕರು ಸೆಳೆಯಲು ಹೊರಟಿದ್ದಾರೆ., "ಕಾಂಗ್ರೆಸ್ / ಜೆಡಿಎಸ್ಮತ್ತು ಬಿಜೆಪಿ - ಎರಡೂ ಕಡೆಗಳಲ್ಲಿ ಪ್ರಚೋದನಾಕಾರಿ, ಕೀಳು ಮಟ್ಟದ ಹೇಳಿಕೆಗಳು ಬರುತ್ತಿದೆ.ಇದರಲ್ಲಿ ಯಾವುದೇ ಬೇಧವಿಲ್ಲ. ಅವರು ಒತ್ತಡದಲ್ಲಿ, ಧಾವಂತದಲ್ಲಿ ಹೀಗೆ ಹೇಳುತ್ತಾರೆ.ಆದರೆ, ಕೆಲವೊಮ್ಮೆ ಅವರು ಇತರರ ಹೇಳಿಕೆಗೆ ಸಮರ್ಥನೆ ನೀಡಲು  ಸುಳ್ಳು ಹೇಳಬೇಕಾಗಿದೆ.ಕೆಲವೊಮ್ಮೆ ಪದಗಳು ಪ್ರಭಾವ ಬೀರುತ್ತವೆ. ಹೋರಾಟ ಬಹಳ ಹತ್ತಿರದಲ್ಲಿದ್ದರೆ ಇಂತಹಾ ಕಾಮೆಂಟ್ ಗಳನ್ನು ತುಸು ಹೆಚ್ಚು ಬಳಸಲಾಗುತ್ತದೆ"

Related Stories

No stories found.

Advertisement

X
Kannada Prabha
www.kannadaprabha.com