ಬಳ್ಳಾರಿಗಿಲ್ಲ ತಾರಾ ಮೆರಗು: ಹಳೇ ಕೋಟೆ ರಕ್ಷಣೆಗೆ ಬೃಹತ್ ಸಮರ

ಕಳೆದ ಎರಡು ದಶಕಗಳಿಂದ ರಿಪಬ್ಲಿಕ್ ಆಫ್ ಬಳ್ಳಾರಿ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸೋನಿಯಾಗಾಂಧಿ ಮತ್ತು ಸುಷ್ಮಾ ...
ಬಳ್ಳಾರಿಯಲ್ಲಿ ಉಗ್ರಪ್ಪ ಪ್ರಚಾರ
ಬಳ್ಳಾರಿಯಲ್ಲಿ ಉಗ್ರಪ್ಪ ಪ್ರಚಾರ
ಧಾರವಾಡ/ಗದಗ: ಕಳೆದ ಎರಡು ದಶಕಗಳಿಂದ ರಿಪಬ್ಲಿಕ್ ಆಫ್ ಬಳ್ಳಾರಿ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸೋನಿಯಾಗಾಂಧಿ ಮತ್ತು ಸುಷ್ಮಾ ಸ್ವರಾಜ್ ಇಬ್ಬರು ಬಳ್ಳಾರಿಯಿಂದ ಸ್ಪರ್ಧಿಸಿದ್ದರು. 
2008ರಲ್ಲಿ  ಯಡಿಯೂರಪ್ಪ ಸರ್ಕಾರ ರಚನೆಯಾದಾಗ ರೆಡ್ಡಿ ಸಹೋದರರು ಹಿಡಿತ ಸಾಧಿಸಿದ್ದರು. ಬಳ್ಳಾರಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು, ಆದರೆ ರೆಡ್ಡಿ ಸಹೋದರರಿಂದ ಕ್ಷೇತ್ರದ ಮೇಲೆ ಕಾಂಗ್ರೆಸ್ ಹಿಡಿತ ಕಳೆದುಕೊಂಡಿತ್ತು. ಆದರೆ ನಂತರ ನಡೆದ ರಾಜಕೀಯ ಮೇಲಾಟಗಳಿಂದಾಗಿ ಬಿಜೆಪಿ ಹಣ ಮತ್ತು ಅಧಿಕಾರ ಕಳೆದುಕೊಂಡಿತ್ತು.
ಏಪ್ರಿಲ್ 23 ರ ಚುನಾವಣೆ ಎರಡು ಪಕ್ಷಗಳಿಗೆ ನಿರ್ಣಾಯಕವಾಗಿದೆ, ಇರುವ 9 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಳ್ಳಾರಿ ಕ್ಷೇತ್ರ ಪಡೆಯಲು ಎರಡು ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಿವೆ. ಎರಡು ಪಕ್ಷಗಳಲ್ಲೂ ಆಂತರಿಕ ಭಿನ್ನಾಭಿಪ್ರಾಯಗಳಲ್ಲೇ ಮುಳುಗಿವೆ, ಯಾರೊಬ್ಬರು ಕುಡಿಯುವ ನೀರಿನ ಸಮಸ್ಯೆ, ನೀರಾವರಿ ತುಂಗಾಭದ್ರ ನಾಲೆ ನನೀಕರಣದ ಬಗ್ಗೆ ಚಿಂತಿಸುತ್ತಿಲ್ಲ.
2018ರ ನವೆಂಬರ್ ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ವಿ ಉಗ್ರಪ್ಪ, ಶಾಸಕ ಶ್ರೀರಾಮುಲು ಸಹೋದರಿ ಜೆ. ಶಾಂತಾ ವಿರುದ್ದ ಜಯಭೇರಿ ಬಾರಿಸಿದ್ದರು. ಅದಾದ ನಂತರ ಕಾಂಗ್ರೆಸ್ ಪಕ್ಷ  ಬೇಡದ ಕಾರಣಗಳಿಗಾಗಿ ಸುದ್ದಿಯಲ್ಲಿತ್ತು, ಬಳ್ಳಾರಿ ಶಾಸಕರಾದ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಹೊಡೆದಾಡಿಕೊಂಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು.
ಇನ್ನೂ ಜನವರಿ ತಿಂಗಳಿನಲ್ಲಿ, ಶಾಸಕರಾದ ಭೀಮಾ ನಾಯಕ್ ಮತ್ತು ಬಿ ನಾಗೇಂದ್ರ ನಾಪತ್ತೆಯಾಗಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಈಗ ಎಲ್ಲವೂ ಸರಿಯಾಗಿದೆ.ಈ ಬಾರಿ ನಾನು ಅತ್ಯಧಿಕ ಮತಗಳ ಅಂತರಿಂದ ಗೆಲುವು ಸಾಧಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ 
1952 ರಿಂದ 1999ರ ವರೆಗೂ ಬಳ್ಳಾರಿ ಕಾಂಗ್ರೆಸ್ ಕೋಟೆಯಾಗಿದೆ, ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಮೇಲೆ ಬಳ್ಳಾರಿಗೆ ಸ್ಟಾರ್ ವ್ಯಾಲ್ಯೂ ಬಂತು.  ಅದಾದ ನಂತರ ರೆಡ್ಡಿ ಸಹೋದರರಿಗೆ ತಾಯಿಯಾಗಿ ಸುಷ್ಮಾ ಸ್ವರಾಜ್ ಪ್ರಸಿದ್ದರಾದರು. 
ಗಾಲಿ ಕರುಣಾಕರ ರೆಡ್ಡಿ,  ಕಾಂಗ್ರೆಸ್ ಸಂಸದ ಕೆ.ಸಿ ಕೊಂಡಯ್ಯ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದರು. ಅದಾದ ನಂತರ ನಡೆದ ಎರಡು  ಚುನಾವಣೆಗಳಲ್ಲಿ  ಅಂದರೆ 2009 ರಲ್ಲಿ  ಜೆ. ಶಾಂತಾ ಮತ್ತು 2014 ರಲ್ಲಿ ಶ್ರೀರಾಮುಲು ಜಯ ಗಳಿಸಿದ್ದರು,
ಸದ್ಯ ಬಿಜೆಪಿಯಿಂದ ಈ ಬಾರಿ ವೈ. ದೇವೇಂದ್ರಪ್ಪ ಸ್ಪರ್ಧಿಸಿದ್ದಾರೆ, ಇವರಿಗೆ ಶ್ರೀರಾಮುಲು ಮತ್ತು ಜನರಾದ್ಧನ ರೆಡ್ಡಿ ಜೊತೆ ಯಾವುದೇ ರೀತಿಯ ಸಂಬಂಧವೇ ಇಲ್ಲ, ಇವರು ಜಾರಕಿಹೊಳಿ ಸಹೋದರರ ಸಂಬಂಧಿಯಾಗಿದ್ದಾರೆ, ನನ್ನ ಸಹೋದ್ಯೋಗಿಗಳು ಹಾಗೂ ಸಂಬಂಧಿಕರ ಹಾರೈಕೆಯಿಂದಾಗಿ ಈ ಬಾರಿ ನಾನು ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com