ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಎರಡನೇ ಹಂತದ ಮತದಾನಕ್ಕೆ ಮಳೆಕಾಟ

ಲೋಕಸಭೆ ಮಾಹಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆದಿದ್ದು ರಾಜ್ಯದ ಉತ್ತರ ಭಾಗದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ಸಾಗಿದೆ.

Published: 23rd April 2019 12:00 PM  |   Last Updated: 23rd April 2019 05:19 AM   |  A+A-


Parts of the Karnataka get rain and its effects for Lok Sabha polls

ಶಿರಸಿಯ ಮತಗಟ್ಟೆ ಸಮೀಪ ಮಳೆಯಾಗುತ್ತಿರುವ ದೃಶ್ಯ

Posted By : RHN RHN
Source : ANI
ಕಾರವಾರ: ಲೋಕಸಭೆ ಮಾಹಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆದಿದ್ದು ರಾಜ್ಯದ ಉತ್ತರ ಭಾಗದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಈ ನಡುವೆ ಉತ್ತರ ಕನ್ನಡದ ಶಿರಸಿ, ಶಿವಮೊಗ್ಗದ ಕೆಲವೆಡೆ ಮಳೆಯಾಗಿದ್ದು ಮತ ಹಾಕಲು ಆಗಮಿಸಿದ ಜನರಿಗೆ ಅಡ್ಡಿಯಾಗಿದೆ.

ಮಂಗಳವಾರ ಮಧ್ಯಾಹ್ನದ ನಂತರ ಉತ್ತರ ಕನ್ನಡದ ಶಿರಸಿ, ಮುಂಡಗೋಡ, ಶಿವಮೊಗ್ಗದ ಸಾಗರ ಭಾಗಗಳಲ್ಲಿ ಮಳೆಯಾಗಿದೆ.ಹಲವೆಡೆ ಗುಡುಗು, ಸಿಡಿಲಿನಿಂದಕೂಡಿದ ಭಾರೀ ಮಳೆಯಾಗಿದ್ದು ಶಿರಸಿ ಮತಗಟ್ಟೆ ಸಂಖ್ಯೆ 92ಕ್ಕೆ ಮತ ಚಲಾಯಿಸಲು ಬಂದ ಸಾರ್ವಜನಿಕರು ಪರದಾಡುವಂಟಾಗಿದೆ.

ಮುಂಡಗೋಡಿನಲ್ಲಿ ಸಹ ಅರ್ಧ ಗಂಟೆಗೆ ಹೆಚ್ಚು ಸಮಯದಿಂಡ ಮಳೆ ಸುರಿಯುತ್ತಿದ್ದು ಇದರಿಂದ ಮತ ಹಾಕಲು ಬರುವವರ ಸಂಖ್ಯೆ ಇಳಿಮುಖವಾಗಿದೆ. ಮಳೆಯಿಂಡಾಗಿ ಮತದಾನ ಪ್ರಮಾಣ ಕುಸಿದಿದೆ, ಮಳೆಯಿಂಡ ಶಿರಸಿಯಲ್ಲಿ ವಿದ್ಯುತ್ ಸಂಪರ್ಕ ಸಹ ಕಡಿತವಾಗಿದ್ದು ಕೆಲವು ಮತಗಟ್ಟೆಗಳ ಒಳಗೆ ಕತ್ತಲು ಆವರಿಸಿದೆ.
ಶಿವಮೊಗ್ಗದ ಸಾಗರ ಭಾಗದಲ್ಲಿ ಸಹ ಮಳೆಯಾಗಿದ್ದು ಮತ ಹಾಕಲು ಸಾರ್ವಜನಿಕರು ಮತಗಟ್ಟೆಗೆ ತೆರಳಲು ಕಷ್ಟವಾಗಿದೆ. 

ಇದಲ್ಲದೆ ಚಿಕ್ಕಮಗಳೂರಿನ ಮೂಡಿಗೆರೆಯ ಕಳಸ, ಎನ್.ಆರ್.ಪುರದ ಬಾಳೆಹೊನ್ನೂರು ಸೇರಿ ಣಾನಾ ಭಾಗಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp