ರಾಜೀನಾಮೆ ಪ್ರಹಸನ: ಕಾಂಗ್ರೆಸ್, ಬಿಜೆಪಿಯಿಂದ ಅಂತರ ಕಾಯ್ದುಕೊಂಡು ರಮೇಶ್ ಜಾರಕಿಹೊಳಿ ಸೈಲೆಂಟ್!

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಸ್ವಲ್ಪ ತಣ್ಣಾಗದಂತೆ ಕಂಡುಬರುತ್ತಿದೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ  ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಸ್ವಲ್ಪ ತಣ್ಣಾಗದಂತೆ ಕಂಡುಬರುತ್ತಿದೆ.

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ರಮೇಶ್ 15 ಅತೃಪ್ತ ಶಾಸಕರನ್ನು ಕರೆತರುತ್ತಾರೆ ಎಂಬ ವಿಶ್ವಾಸದಲ್ಲಿತ್ತು ಬಿಜೆಪಿ. ಆದರೆ, ರಮೇಶ್ ಅವರ ಜೊತೆಗೆ ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರೂ ಇದ್ದಂತಿಲ್ಲ. ಮುಂಬೈ ಹೋಟೆಲ್ ನಲ್ಲಿ ತಿಂಗಳುಗಳ ಕಾಲ ರಮೇಶ್ ಜಾರಕಿಹೊಳಿ ಜೊತೆಯಲ್ಲಿದ್ದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡಾ  ಬೆಂಬಲಕ್ಕೆ ನಿಲ್ಲುತ್ತಿಲ್ಲ

 ಕಳೆದ ತಿಂಗಳಿನಿಂದಲೂ ಲೋಕಸಭಾ ಚುನಾವಣೆ ಬಗ್ಗೆ ರಮೇಶ್ ಜಾರಕಿಹೊಳಿ ಮಾತನಾಡುತ್ತಿದ್ದಾರೆ. ಆದರೆ, ನಾನು ಯಾವಾಗಲೂ ಅವರ ಜೊತೆಯಲ್ಲಿ ಇರುವುದಾಗಿ ಮಾಧ್ಯಮಗಳು ಬಿಂಬಿಸುತ್ತಿವೆ ಎಂದು ಮಹೇಶ್ ಕಮಟಳ್ಳಿ ಹೇಳಿದ್ದಾರೆ. ಇತರ ಶಾಸಕರಾದ ಭೀಮಾ ನಾಯಕ್, ನಾಗೇಂದ್ರ ಮತ್ತು ಶ್ರೀಮಂತ್ ಪೈಲ್ ಕೂಡಾ ಅಂತರ ಕಾಯ್ದುಕೊಂಡಿದ್ದಾರೆ.

ರಮೇಶ್ ತನ್ನ ಕುಟುಂಬದಿಂದಲೂ ಬೆದರಿಕೆ ಎದುರಿಸುವಂತಾಗಿದೆ. ಗೋಕಾಕ್ ನಿಂದ ರಮೇಶ್ ಜಾರಕಿಹೊಳಿ ರಾಜಕೀಯ ಭವಿಷ್ಯ ಮುಗಿಸಲು ಜಾರಕಿಹೊಳಿ ಹಿರಿಯ ಸಹೋದರ ಲಖನ್ ಸತೀಶ್ ಜಾರಕಿಹೊಳಿ ಕೈ  ಜೋಡಿಸಿದ್ದಾರೆ. ಉಪಚುನಾವಣೆ ನಡೆದರೆ ಲಖನ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ವೈಯಕ್ತಿಕ ಸಂಘರ್ಘಗಳನ್ನು ಪಕ್ಷದ ವ್ಯಾಪ್ತಿಯೊಳಗೆ  ತರಬಾರದು, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರೆ ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್  ಹೇಳಿದ್ದಾರೆ. ಆದಾಗ್ಯೂ, ರಮೇಶ್ ಜಾರಕಿಹೊಳಿ ಪಕ್ಷ ಬಿಡುವುದಿಲ್ಲ, ಅವರಿಗೆ ಅನ್ಯಾಯವಾಗುವಂತೆ ನೋಡಿಕೊಂಡಿಲ್ಲ, ಹಿಂದೆ ಸಂಪುಟ ದರ್ಜೆ ಸಚಿವರಾಗಿ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡಾ ರಮೇಶ್ ಜಾರಿಕಿಹೊಳಿ ಅವರನ್ನು ಭೇಟಿ ಮಾಡಿದ್ದು, ಸರ್ಕಾರ ಅಸ್ಥಿರಗೊಳಿಸುವ ಕೆಲಸ ಮಾಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಭರವಸೆ ನೀಡದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com