ಈ ಲೋಕಸಭೆ ಚುನಾವಣೆ ನನ್ನ ಕಡೆಯ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ

47 ವರ್ಷಗಳ ಕಾಲ ರಾಜಕೀಯ ಜೀವನ ಕಂಡ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಮ್ಮೆಯೂ ಸೋಲು ಕಂಡವರಲ್ಲ. ಹೀಗಿರುವಾಗ ತಾವು ಮುಂಬರುವ ಲೋಕಸಭೆ ಚುನಾವಣೆಯೇ...
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ಕಲಬುರ್ಗಿ: 47 ವರ್ಷಗಳ ಕಾಲ ರಾಜಕೀಯ ಜೀವನ ಕಂಡ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಮ್ಮೆಯೂ ಸೋಲು ಕಂಡವರಲ್ಲ. ಹೀಗಿರುವಾಗ ತಾವು ಮುಂಬರುವ ಲೋಕಸಭೆ ಚುನಾವಣೆಯೇ ತನ್ನ ಕಡೆಯ ಚುನಾವಣೆ ಆಗಲಿದೆ ಎನ್ನುವ ಮಾತನ್ನು ಹೇಳುವ ಮೂಲಕ ತಾವು ನಿವೃತ್ತಿಯಾಗುವುದಾಗಿ ಸೂಚಿಸಿದ್ದಾರೆ.
ಬುಧವಾರ ಕಲಬುರ್ಗಿಯ ಸೇಡಂ ನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಖರ್ಗೆ ಅವಿಭಜಿತ ಕಲಬುರ್ಗಿ ಜಿಲ್ಲೆಯ ಗುರ್ಮಿಟ್ಕಲ್ ಲೋಕಸಭೆ ಕ್ಷೇತ್ರದ ಮತದಾರರು ನನ್ನನ್ನು 1972 ರಲ್ಲಿ ಮೊದಲ ಬಾರಿಗೆ 9,000 ಮತಗಳ ಅಂತರದಿಂದ ಆಯ್ಕೆ ಮಾಡಿ ದೆಹಲಿಗೆ ಕಳಿಸಿದ್ದರು.ಮತ್ತೆ ಎರಡನೆ, ಮೂರನೇ ನಾಲ್ಕನೇ ಲೋಕಸಭೆ ಚುನಾವಣೆಗಳಲ್ಲಿ ಈ ಗೆಲುವಿನ ಅಂತರ ಹೆಚ್ಚುತ್ತಾ ಹೋಗಿದೆ. ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಿಂದ ನನ್ನ  ಆಯ್ಕೆ ನಡೆದಿದ್ದು ಗೆಲುವಿನ ಅಂತರ 49,000 ಮತಗಳಾಗಿದ್ದವು.ಕಲಬುರ್ಗಿ ಜನತೆ ನನ್ನನ್ನು ಹನ್ನೊಂದು ಲೋಕಸಭೆ ಚುನಾವಣೆಗಳಲ್ಲಿ ಗೆಲ್ಲಿಸುತ್ತಾ ಬಂದಿದ್ದೀರಿ. ಈಗ ಇನ್ನೊಮ್ಮೆ ಕಟ್ಟ ಕಡೆಯ ಬಾರಿಗೆ ಗೆಲ್ಲಿಸಲಿದ್ದೀರಿ ಎನ್ನುವುದು ನನ್ನ ಆಶಯ. ಹನ್ನೊಂದು, ಇನ್ನೊಂದು, ಹನ್ನೆರಡಕ್ಕೆ ಮುಕ್ತಾಯ." ಖರ್ಗೆ ಹೇಳಿದ್ದಾರೆ.
ನನ್ನನ್ನು ಆಯ್ಕೆ ಮಾಡಿಸುವುದು, ಸೋಲಿಸುವುದು ಮತದಾರರ ಕೈಯಲ್ಲಿದೆ ಎಂದ ಖರ್ಗೆ ಕಲಬುರ್ಗಿ ಮತದಾರರು ನನ್ನ ಕೈ ಬಿಡುವುದಿಲ್ಲ ಎನ್ನುವ ನಿರೀಕ್ಷೆ ಇದೆ. ಅವರ ಆಶೀರ್ವಾದವಿರುವವರೆಗೆ ನನಗೆ ಇನ್ನಾರ ಭಯವಿಲ್ಲ ಎಂದೂ ನುಡಿದಿದ್ದಾರೆ.
ಖರ್ಗೆ ಅವರ ನಿವೃತ್ತಿ ಸೂಚನೆ ಕುರಿತಂತೆ ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಮಾತನಾಡಿ "ಒಮ್ಮೆ ನ್ಬಾವು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಸಾರ್ವಜನಿಕರ ನಿರ್ಧಾರಕ್ಕೇ ನಾವು ಕಟ್ಟುಬಿದ್ದಿರಬೇಕು, ಜನತೆಯ ನಿರ್ಧಾರವೇ ಅಂತಿಮ" ಎಂದಿದ್ದಾರೆ. 
ಇದೇ ವೇಳೆ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಲ್ ಅವರು ಮಾತನಾಡಿ ಖರ್ಗೆ ಅವರಿಗೆ ನರೇಂದ್ರ ಮೋದಿಯವರ ಜನಪ್ರಿಯ ಬಿಸಿ ತಟ್ಟಿದೆ. ಈ ಕಾರಣಕ್ಕೆ ಜನರ ಕರುಣೆ ಗಿಟ್ಟಿಸಲು ಅವರು ಈ ರೀರಿ ಹೇಳಿಕೆ ನೀಡಿದ್ದಾರೆ ಎಂದರು. ಕಮಿನಿಸ್ಟ್ ಪಕ್ಷದ ನಾಯಕ ಮಾರುತಿ ಮಾನ್ಪಡೆ ಸಹ ಇದೇ ಅಭಿಪ್ರಾಯ ತಾಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com