ಮಕ್ಕಳ ಗೆಲುವಿಗೆ ಟೊಂಕಕಟ್ಟಿ ನಿಂತಿರುವ ಹೆಚ್ ಡಿ ಬ್ರದರ್ಸ್: ಜ್ಯೋತಿಷಿ, ದೇವಾಲಯಗಳ ಮೊರೆ

ಹೆಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣ ಇಬ್ಬರೂ ಕೂಡ ತಮ್ಮ ಮಕ್ಕಳನ್ನು ಮೊದಲ ಬಾರಿಗೆ ಸಕ್ರಿಯ...
ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ
ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ
ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣ ಇಬ್ಬರೂ ಕೂಡ ತಮ್ಮ ಮಕ್ಕಳನ್ನು ಮೊದಲ ಬಾರಿಗೆ ಸಕ್ರಿಯ ರಾಜಕಾರಣಕ್ಕೆ ತರುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಒಬ್ಬರು ರಾಜ್ಯದ ಮುಖ್ಯಮಂತ್ರಿ, ಮತ್ತೊಬ್ಬರು ಸಂಪುಟದಲ್ಲಿ ಹಿರಿಯ ಸಚಿವರು ತಮ್ಮೆಲ್ಲಾ ಮತ್ತು ಸರ್ಕಾರದ ಕೆಲಸಗಳನ್ನು ಬದಿಗೊತ್ತಿ ತಮ್ಮ ಮೊಮ್ಮಕ್ಕಳನ್ನು ಸಂಸತ್ತು ಮೆಟ್ಟಿಲು ಹತ್ತಿಸಲು ಚುನಾವಣಾ ಕಣಕ್ಕಿಳಿಸಿದ್ದು ಅವರ ಗೆಲುವಿಗಾಗಿ ಹೋರಾಡುತ್ತಿದ್ದಾರೆ.
ನಿನ್ನೆ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ 8 ಮಂದಿ ಶಾಸಕರು, ವಿಧಾನಪರಿಷತ್ ಸದಸ್ಯರು, ಮೂವರು ಸಚಿವರು ಮತ್ತು ಹಿರಿಯ ನಾಯಕರನ್ನು ಭೇಟಿಯಾಗಿ ನಾಡಿದ್ದು 25ರಂದು ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಅಭೂತಪೂರ್ವ ಜನ ಸೇರಲು ಯೋಜನೆ ರೂಪಿಸಿದ್ದಾರೆ.
ಅಲ್ಲದೆ ಕುಮಾರಸ್ವಾಮಿ ಮೊನ್ನೆ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ನಿಖಿಲ್ ಗೆಲುವಿಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುವಂತೆ ಕೋರಿದ್ದಾರೆ. ಮೊನ್ನೆ ಬುಧವಾರ ನಾಮಪತ್ರ ಸಲ್ಲಿಕೆ ವೇಳೆ ಸುಮಲತಾ ಅಂಬರೀಷ್ ಗೆ ಸಿಕ್ಕ ಗೆಲುವು ಕಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಾಯಕರು ಆತಂಕಗೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಕರೆತರಲು ಯೋಜಿಸಿದ್ದಾರೆ,
ಸಮಲತಾ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಯಶ್ ಮತ್ತು ದರ್ಶನ್ ನೋಡಲು ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ನಾಡಿದ್ದು ಸೋಮವಾರ ದೇವೇಗೌಡರ ಕುಟುಂಬ ಮಂಡ್ಯದಲ್ಲಿ ಕಾಳಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ 1 ಕಿಲೋ ಮೀಟರ್ ಮೆರವಣಿಗೆ ಸಾಗಿ ನಂತರ ಮಧ್ಯಾಹ್ನ ನಿಖಿಲ್ ಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ.
ಜ್ಯೋತಿಷ್ಯವನ್ನು ಬಲವಾಗಿ ನಂಬುವ ರೇವಣ್ಣನವರು ಇಂದು ಮಧ್ಯಾಹ್ನ 1 ಗಂಟೆಗೆ ಶುಭ ಮುಹೂರ್ತದಲ್ಲಿ ತಮ್ಮ ಮಗ ಪ್ರಜ್ವಲ್ ಕೈಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಗ್ಗೆಯಿಂದ ಪ್ರಜ್ವಲ್ ರೇವಣ್ಣ ಹರದನಹಳ್ಳಿ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ, ಈಶ್ವರ ದೇವಸ್ಥಾನ ಮತ್ತು ಮಾವಿನಕೆರ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ರೋಡ್ ಶೋಗೆ ನೂರಾರು ಜೆಡಿಎಸ್ ಕಾರ್ಯಕರ್ತರು ಬೆಂಬಲ ಸೂಚಿಸಲಿದ್ದಾರೆ.
ನಿಖಿಲ್ ಗೆ ಸಿದ್ದರಾಮಯ್ಯ ಸಾಥ್?:

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com