ಅಭ್ಯರ್ಥಿಗಳ ಪಟ್ಟಿಯೋ, ವಿಜೇತರ ಪಟ್ಟಿಯೋ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕುರಿತು ರಮ್ಯಾ ಟೀಕೆ!

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಿನ್ನೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಈ ಕುರಿತು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಿನ್ನೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಈ ಕುರಿತು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಕಿಡಿಕಾರಿದ್ದಾರೆ.
ಹೌದು.. ಬಿಜೆಪಿ ವೆಬ್‍ಸೈಟ್ ನಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದಕ್ಕೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಲೇವಡಿ ಮಾಡಿದ್ದು, ಬಿಜೆಪಿ ವೆಬ್ ಸೈಟಿನಲ್ಲಿ, 'ನಾವು ಶೀಘ್ರವೇ ವಾಪಸ್ ಬರುತ್ತೇವೆ' ಎಂದು ಸಂದೇಶ ಪೇಜ್ ಲಿಂಕ್ ಓಪನ್ ಮಾಡಿದಾಗ ಕಾಣಸಿಗುತ್ತಿದೆ. ಇದೇ ವಿಚಾರವನ್ನೇ ಮುಂದಿಟ್ಟುಕೊಂಡು ರಮ್ಯಾ ಬಿಜೆಪಿ ವೆಬ್ ಸೈಟ್ ಅನ್ನು ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ರಮ್ಯಾ, 'ಬಿಜೆಪಿ ಕೇವಲ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ವಿಜೇತರ ಪಟ್ಟಿ ಎಂಬಂತೆ ಬಿಂಬಿಸುತ್ತಿದೆ. ಬಹುಶಃ ವಿಜೇತರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ತನ್ನ ವೆಬ್ ಸೈಟ್‍ನ ಲ್ಲಿ ಪ್ರಕಟಿಸಬಹುದು ಎಂದು ಬರೆದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಇನ್ನು ಈ ಹಿಂದೆ ಮಾರ್ಚ್ 5 ರಂದು ಬಿಜೆಪಿ ವೆಬ್‍ಸೈಟ್ ಹ್ಯಾಕ್ ಆಗಿತ್ತು. ಹ್ಯಾಕ್ ಆದ ವಿಚಾರವನ್ನು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಪ್ರಸ್ತಾಪಿಸಿ ಕಾಲೆಳೆದಿದ್ದಾರೆ. ಭಾಯಿ ಔರ್ ಬೆಹನೋ.. ಈಗ ಬಿಜೆಪಿ ವೆಬ್ ಸೈಟನ್ನು ಒಂದು ಬಾರಿ ನೋಡಿ ಎಂದು ಹೇಳಿ ಕಾಲೆಳೆದಿದ್ದರು. ಕೂಡಲೇ ಪ್ರತಿಕ್ರಿಯಿಸಿದ ಬಿಜೆಪಿ, ಕೆಲವೇ ಕ್ಷಣಗಳಲ್ಲಿ ಬಿಜೆಪಿ ವೆಬ್ ಸೈಟ್ ಸರಿಹೋಗಲಿದೆ ಎಂದು ಸ್ಪಷ್ಟಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com