ಚಾಮರಾಜನಗರ: ಹ್ಯಾಟ್ರಿಕ್ ಗೆಲುವಿನ ಮೇಲೆ ಧ್ರುವನಾರಾಯಣ ಕಣ್ಣು, ಕಾಂಗ್ರೆಸ್ ಗೆ ಪ್ರಸಾದ್ ಬಿಸಿ ತುಪ್ಪ

ಸಂಸದ ಧ್ರೃವನಾರಾಯಣ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಕೊನೆ ಗಳಿಗೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

Published: 22nd March 2019 12:00 PM  |   Last Updated: 22nd March 2019 12:15 PM   |  A+A-


R Dhruvanarayana, Srinivasa Prasad

ಧ್ರುವನಾರಾಯಣ, ಶ್ರೀನಿವಾಸ್ ಪ್ರಸಾದ್

Posted By : ABN
Source : The New Indian Express
ಬೆಂಗಳೂರು:  ನಂಜುಂಡಪ್ಪ ಸಮಿತಿ ವರದಿ ಅನುಸಾರ ಹೆಚ್ಚಿನ  ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಚಾಮರಾಜ ನಗರ ಜಿಲ್ಲೆ ಬದಲಾವಣೆಯ ಗಾಳಿ ಬೀಸುತ್ತಿದೆ.ಈ ಹಿಂದುಳಿದ ಪ್ರಾಂತ್ಯದಲ್ಲಿನ ಕಾಡುಗಳಲ್ಲಿ  ಎರಡು ದಶಕಗಳಿಗೂ ಹೆಚ್ಚು ಕಾಲ ಕಾಡುಗಳ್ಳ ವೀರಪ್ಪನ್ ಮೆರೆದಿದ್ದ. ಆದರೆ, ಆತನ ಸಾವಿನ ಬಳಿಕ ಇತ್ತೀಚಿನ ದಿನಗಳಲ್ಲಿ ಪ್ರಗತಿ ಕಂಡುಬರುತ್ತಿದೆ.

ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ  ಮಹತ್ವದ ಬದಲಾವಣೆಯಾಗಿದೆ.ಕೈಗಾರಿಕೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಂಜಿನಿಯರಿಂಗ್ , ವೈದ್ಯಕೀಯ ಕಾಲೇಜು, ವಸತಿ ಶಾಲೆಗಳು, ಹೊಸ ರೈಲುಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಚಾಮರಾಜನಗರದ ಮೂಲಕ ನೆರೆಯ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತಿವೆಯ ಆದಾಗ್ಯೂ ಕಿಚುಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆಯಿಂದ 19 ಕ್ಕೂ ಹೆಚ್ಚು ಜನರು ಮೃತಪಡುವ ಮೂಲಕ ಚಾಮರಾಜನಗರ ಕೆಟ್ಟದಾಗಿ ಸುದ್ದಿಯಾಗಿತ್ತು.

ಜಿಲ್ಲೆಯಲ್ಲಿ ಶೇ, 51 ರಷ್ಟು ಅರಣ್ಯ ಪ್ರದೇಶವಿದ್ದು, ಅಂತರ್ಜಲ ಕುಸಿತ ಹಾಗೂ ಬೇರೆ ಕಾರಣಗಳಿಂದಾಗಿ ವಲಸೆಗಾರರು ಕೆಲಸ ಅರಸಿ ಕೊಡಗು ಕಾಫಿ ಎಸ್ಟೇಟ್  ಹಾಗೂ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.  ಪ್ರತ್ಯೇಕ ಬುಡಕಟ್ಟು ಅಭಿವೃದ್ದಿ ಪ್ರಾಧಿಕಾರ, ಪಂಚಾಯತ್ ಗಳಲ್ಲಿ  ರಾಜಕೀಯ ಮೀಸಲಾತಿ ಮತ್ತಿತರ ಬೇಡಿಕೆಗಳು ಬಡುಕಟ್ಟ ಜನರ ಬೇಡಿಕೆಗಳಾಗಿವೆ.

ಸಂಸದ ಧ್ರೃವನಾರಾಯಣ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ,  ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಕೊನೆ ಗಳಿಗೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ  ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ವೀರಶೈವ, ದಲಿತ ಹಾಗೂ ನಾಯಕ ಮತ್ತಿತರ ಸಮುದಾಯಗಳ ಮತಗಳು ಇಲ್ಲಿ ನಿರ್ಣಾಯಕವಾಗಿವೆ.

20 ವರ್ಷ ವಿರಾಮದ ಬಳಿಕ ಪ್ರಸಾದ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ವೈಯಕ್ತಿಕ ವರ್ಚಸ್ಸು ಹಾಗೂ ದಲಿತ ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಕಾಂಗ್ರೆಸ್  ಪಕ್ಷಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಆದಾಗ್ಯೂ,ಧ್ರವನಾರಾಯಣ್  ಅವರು ಅನೇಕ ಕೆಲಸಗಳನ್ನು ಮಾಡಿದ್ದು, ಅವರ ಪರ ಹೆಚ್ಚಿನ ಒಲವಿದೆ. ಪ್ರಸಾದ್ ಅವರಿಗೆ ಅನಾರೋಗ್ಯ, ಹಾಗೂ ವಯಸ್ಸಿನ ಅಂತರ ಮುಳುವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಸಿದ್ದಯ್ಯನಪುರದ ಮತದಾರರೊಬ್ಬರು ಹೇಳುತ್ತಾರೆ.

ಈ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪಾಲಾಗಿರುವುದಕ್ಕೆ ಅನೇಕ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಸ್ಪಿ ಕಾಂಗ್ರೆಸ್ ಮತಗಳನ್ನು ತೆಗೆದುಕೊಳ್ಳಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. 

ಬಿಎಸ್ಪಿಯಿಂದ ಶಿವಕುಮಾರ್  ಸ್ಪರ್ಧಿಸಿದ್ದಾರೆ. ಪ್ರಸಾದ್ ಜನರ ಬಳಿಗೆ ಹೇಗೆ ತಲುಪುತ್ತಾರೆ ಎಂಬುದು ಪ್ರಮುಖವಾದ ವಿಚಾರವಾಗಿದೆ. ಮೋದಿ ಕಾರ್ಡ್,  ದಲಿತ ಮತಗಳ ವಿಭಜನೆ ಹಾಗೂ ಉಪ್ಪಾರ ಸಮುದಾಯದ ಮತಗಳಿಗೆ ಅವರಿಗೆ ನೆರವು ನೀಡಬಹುದು ಎಂದು ರಾಮಪುರದ ಗೋವಿಂದ್ ಎಂಬುವರು ಹೇಳುತ್ತಾರೆ
Stay up to date on all the latest ಕರ್ನಾಟಕ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp