ಇನ್ನೂ ಬಿಡುಗಡೆಯಾಗದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ; ಆಕಾಂಕ್ಷಿಗಳು ತತ್ತರ

ಲೋಕಸಭೆ ಚುನಾವಣೆಗೆ ಬಿಜೆಪಿಯ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಆದರೆ ಜೆಡಿಎಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು; ಲೋಕಸಭೆ ಚುನಾವಣೆಗೆ ಬಿಜೆಪಿಯ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಆದರೆ ಜೆಡಿಎಸ್-ಕಾಂಗ್ರೆಸ್ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರುಗಳ ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆಗೆ ಕಾಯುತ್ತಿದ್ದರೆ, ಇತ್ತ ಜೆಡಿಎಸ್ 8 ಸೀಟುಗಳಲ್ಲಿ ಅಭ್ಯರ್ಥಿಗಳ ಹುಡುಕಾಟದಲ್ಲಿಯೇ ಇನ್ನೂ ನಿರತವಾಗಿದೆ.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಿಂದಾಗಿ ಟಿಕೆಟ್ ಆಕಾಂಕ್ಷಿಗಳಿಗೆ ಮಾತ್ರ ಕಷ್ಟವಾಗುತ್ತಿದೆ. ಅವರಿಗೆ ಇನ್ನೂ ಚುನಾವಣಾ ಪ್ರಚಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ರಾಜ್ಯಕ್ಕೆ ಬಂದು ಎರಡು ಬಾರಿ ಪ್ರಚಾರ ನಡೆಸಿದ್ದಾರೆ, ಆದರೆ ಅಧಿಕೃತವಾಗಿ ಒಬ್ಬ ಅಭ್ಯರ್ಥಿಯ ಹೆಸರನ್ನು ಹೇಳಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡರು ಹಾಸನಕ್ಕೆ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಮತ್ತು ಮಂಡ್ಯಕ್ಕೆ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಘೋಷಿಸಿದ್ದಾರೆ, ಆದರೆ ಪಕ್ಷದಿಂದ ಮಾತ್ರ ಅಧಿಕೃತವಾಗಿ ಇನ್ನೂ ಅಭ್ಯರ್ಥಿಗಳ ಪಟ್ಟಿ ಹೊರಬಂದಿಲ್ಲ.
ದೇವೇಗೌಡರು ಇನ್ನೂ ತಮ್ಮ ಸ್ಪರ್ಧೆಯ ಆಯ್ಕೆಯ ಕ್ಷೇತ್ರದ ಬಗ್ಗೆ ಗೊಂದಲದಲ್ಲಿದ್ದಾರೆ. ಜೆಡಿಎಸ್ ನ ಇತರ ಆಕಾಂಕ್ಷಿಗಳು ಯಾವಾಗ ಘೋಷಣೆಯಾಗುತ್ತದೆ ಎಂದು ಕಾಯುತ್ತಲೇ ಇದ್ದಾರೆ. ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಪಕ್ಷ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಜೆಡಿಎಸ್ ಕೊನೆಗೆ ತನ್ನಲ್ಲಿ ಅಭ್ಯರ್ಥಿಯಿಲ್ಲದೆ ಕಾಂಗ್ರೆಸ್ ನಿಂದ ಪಡೆದರೆ ಅಚ್ಚರಿಯಿಲ್ಲ.
ಎರಡೂ ಪಕ್ಷಗಳ ನಡುವೆ ಅಭ್ಯರ್ಥಿಗಳ ಮರುಹಂಚಿಕೆಗೆ ಇದು ತಡವಾದ ಸಮಯ. ಆದರೂ ಅದು ನಡೆಯುವ ಸಾಧ್ಯತೆಯಿದೆ. ಉಡುಪಿಯಲ್ಲಿ ಕಾಂಗ್ರೆಸ್ ನಿಂದ ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್ ಸೆಳೆದುಕೊಳ್ಳುವ ಸಾಧ್ಯತೆಯಿದೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಲ್ಲುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮೊನ್ನೆ 16ಕ್ಕೆ ತನ್ನ ಪಟ್ಟಿ ಬಿಡುಗಡೆ ಮಾಡಬೇಕಾಗಿತ್ತು. ಮರುದಿನ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಿದ್ದರು.
ಆದರೆ ಟಿಕೆಟ್ ಆಕಾಂಕ್ಷಿಗಳು, ಟಿಕೆಟ್ ಕೈತಪ್ಪಿಹೋದವರಿಂದ ರಾಹುಲ್ ಭೇಟಿಗೆ ಅಡ್ಡಿಯಾಗಬಹುದು ಎಂದು ಘೋಷಿಸಿರಲಿಲ್ಲ. ಮಾರ್ಚ್ 18ರ ರಾಜ್ಯ ಭೇಟಿ ನಂತರ ರಾಹುಲ್ ಗಾಂಧಿ ಬೇರೆ ರಾಜ್ಯಗಳಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಬ್ಯುಸಿಯಾಗಿದ್ದರು. ಪಟ್ಟಿಗೆ ಅನುಮೋದನೆ ಹಾಕಲು ಅವರಿಗೆ ಸಮಯವಿರಲಿಲ್ಲ ಎಂದು ಕಾಂಗ್ರೆಸ್ ಸಚಿವರೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com