ಶ್ರೀಮಂತ ಅಭ್ಯರ್ಥಿ: ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಆಸ್ತಿ ಎಷ್ಟು ಗೊತ್ತಾ?

ಭರ್ಜರಿ ರೋಡ್ ಶೋ ಮೂಲಕ ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ...
ನಾಮಪತ್ರ ಸಲ್ಲಿಸುತ್ತಿರುವ ನಿಖಿಲ್
ನಾಮಪತ್ರ ಸಲ್ಲಿಸುತ್ತಿರುವ ನಿಖಿಲ್
ಮಂಡ್ಯ: ಭರ್ಜರಿ ರೋಡ್ ಶೋ ಮೂಲಕ ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ ಈಗ ಬಹಿರಂಗವಾಗಿದೆ.
ನಿಖಿಲ್ ಕುಮಾರಸ್ವಾಮಿ ಒಟ್ಟು ಆಸ್ತಿ ಮೌಲ್ಯ 17,53,87, 761.77 ಕೋಟಿ ರೂಪಾಯಿ. ನಿಖಿಲ್ ಹೆಸರಿನಲ್ಲಿರುವ ಸಾಲ 2,40, 04,283 ರೂಪಾಯಿ. 3 ಕೋಟಿ 11 ಲಕ್ಷ ರೂ. ಮೌಲ್ಯದ ಒಂದು ಐಶಾರಾಮಿ ಕಾರು ಹಾಗೂ  23 ಲಕ್ಷ ರೂಪಾಯಿ ಮೌಲ್ಯದ 2 ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ.
4.55 ಲಕ್ಷ ರೂಪಾಯಿ ಮೌಲ್ಯದ 200 ಗ್ರಾಂ ಚಿನ್ನ ಹೊಂದಿರುವುದಾಗಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com