ನನ್ನ ಮನೆ ಮುಂದೆ ಗೂಢಾಚಾರಿಗಳ ಬಿಟ್ಟು ಸರ್ಕಾರದಿಂದ ಅಧಿಕಾರ ದುರುಪಯೋಗ: ಸುಮಲತಾ ಆರೋಪ

ಮಂಡ್ಯ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ, ಮಂಡ್ಯ ಲೋಕಸಭೆ ಚುನಾವಣೆಗೆ...
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ, ಮಂಡ್ಯ ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಅಧಿಕಾರದ ದುರುಪಯೋಗವಾಗುತ್ತಿದೆ, ಜೆಡಿಎಸ್ ನವರು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು , ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿಯವರ ಮಗನೇ ಕಣಕ್ಕಿಳಿದಿರುವುದರಿಂದ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ ಮಾಡುತ್ತಿದ್ದಾರೆ. ನನ್ನ ಮನೆಯ ಮುಂದೆ ಕಳೆದ ಒಂದೂವರೆ-ಎರಡು ತಿಂಗಳಿನಿಂದ ಗೂಢಚಾರಿ ಪೊಲೀಸರನ್ನು ಬಿಟ್ಟಿದ್ದಾರೆ. ನಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ನಮ್ಮ ಭದ್ರತೆ ಬಗ್ಗೆ ಆತಂಕವಿದೆ, ಮನೆಯ ಪಕ್ಕ ಗೂಢಚಾರಿ ಬಿಡುವ ಅಗತ್ಯವೇನಿದೆ? ನಾನೇನು ಕ್ರಿಮಿನಲಾ? ನಾನು ಕ್ರಿಮಿನಲ್ ಕೆಲಸವನ್ನು ಮಾಡಿದ್ದೇನೆಯೇ, ಆ ಅಧಿಕಾರ ಯಾರಿಗೂ ಇಲ್ಲ ಎಂದು ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರಿ ಇಲಾಖೆಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ತಿದ್ದಾರೆ. ಇವತ್ತು ನಿಖಿಲ್ ಕುಮಾರಸ್ವಾಮಿಯ ಸಮಾವೇಶಕ್ಕೆ ಜನ ಸೇರಿಸಲು ಮಂಡ್ಯದಲ್ಲಿ ಮನೆಮನೆಗೆ ಹೋಗಿ ಹಣ ನೀಡುತ್ತಿದ್ದಾರೆ. ವಿವಿಧ ರೀತಿಯಲ್ಲಿ ಹಣದ ಆಮಿಷ ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com