ಇವಿಎಂ ಅಭ್ಯರ್ಥಿಗಳ ಸ್ಥಾನದಲ್ಲೂ ಸಮಲತಾ ಲಾಸ್ಟ್, ನಿಖಿಲ್ ಫಸ್ಟ್

ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ನೀಡಿದ್ದು, ಮಂಡ್ಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಅವರಿಗೆ 1 ನೇಕ್ರಮ ಸಂಖ್ಯೆ ನೀಡಿರುವ ಆಯೋಗ ಸುಮಲತಾ ಅಂಬರೀಶ್ ಅವರಿಗೆ 20ನೇ ಕ್ರಮ ಸಂಖ್ಯೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಡ್ಯ: ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ನೀಡಿದ್ದು, ಮಂಡ್ಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಅವರಿಗೆ 1 ನೇಕ್ರಮ ಸಂಖ್ಯೆ ನೀಡಿರುವ ಆಯೋಗ ಸುಮಲತಾ ಅಂಬರೀಶ್ ಅವರಿಗೆ 20ನೇ ಕ್ರಮ ಸಂಖ್ಯೆ ನೀಡಿದೆ.
ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ  ಸುಮಲತಾ ಅಂಬರೀಶ್ ಅವರಿಗೆ ಕೊನೆಯವರಲ್ಲಿ 3ನೇ ಯವರಾಗಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಮೊದಲ ಸ್ಥಾನದಲ್ಲಿದೆ. 
ಅಂತೆಯೇ ಸುಮಲತಾ ಸುಮಲತಾ ಅಂಬರೀಶ್ ಹೆಸರಿನ ಮೊದಲಿಗೆ ಮತ್ತು ನಂತರದಲ್ಲಿ ಕೊನೆಯವರಾಗಿ ಇನ್ನಿಬ್ಬರು ಸುಮಲತಾ ಹೆಸರಿನ ಪಕ್ಷೇತರ ಅಭ್ಯರ್ಥಿಗಳು ಇದ್ದಾರೆ. ಇನ್ನು ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಚಿನ್ಹೆಯೊಂದಿಗೆ ಅವರ ಭಾವಚಿತ್ರಗಳೂ ಇರುವುದು ವಿಶೇಷ. ಇವಿಎಂನಲ್ಲಿ ಈ ಬಾರಿ ಅಭ್ಯರ್ಥಿಗಳ ಫೋಟೋವು ಇರುವುದರಿಂದ ಮತದಾರರಿಗೆ ಅಷ್ಟೊಂದು ಗೊಂದಲ ಆಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com