ನಾನು ಯಾವುದೇ ಶಿಕ್ಷಾರ್ಹ ತಪ್ಪು ಮಾಡಿಲ್ಲ: ಮಂಡ್ಯ ಡಿಸಿ ನೋಟಿಸ್ ಗೆ ಸುಮಲತಾ ಖಡಕ್ ಉತ್ತರ

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಮಂಡ್ಯ ಜಿಲ್ಲಾಧಿಕಾರಿ ನೀಡಿದ್ದ ನೋಟಿಸ್ ಗೆ ಶನಿವಾರ ಖಡಕ್...
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಮಂಡ್ಯ ಜಿಲ್ಲಾಧಿಕಾರಿ ನೀಡಿದ್ದ ನೋಟಿಸ್ ಗೆ ಶನಿವಾರ ಖಡಕ್ ಉತ್ತರ ನೀಡಿದ್ದು, ಐಪಿಸಿ ಸೆಕ್ಷನ್ 189ರಡಿ ಕ್ರಮ ಕೈಗೊಳ್ಳುವ ಯಾವುದೇ ತಪ್ಪು ನಾನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 ಸೆಕ್ಷನ್ 189ರಡಿ ಕ್ರಮ ಕೈಗೊಳ್ಳುವ ಯಾವುದೇ ಅಪರಾಧವಾಗಲಿ ಅಥವಾ ತಪ್ಪಾಗಲಿ ನಾನು ಮಾಡಿಲ್ಲ, ನೋಟೀಸ್‌ನಲ್ಲಿ ಹೆಸರಿಸಿರುವಂತೆ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಜರೂರಾಗಲಿ, ಆಧಾರಾಂಶಗಳಾಗಲಿ ಅಥವಾ ಅನಿವಾರ್ಯತೆಯಾಗಲಿ ಕಂಡು ಬರುವುದಿಲ್ಲ. ನೀವು ನೋಟೀಸ್ ನೀಡಿರುವುದೇ ಕಾನೂನು ಬಾಹಿರ ಎಂದು ಜಿಲ್ಲಾಧಿಕಾರಿ ಎನ್ ಮಂಜುಶ್ರೀ ಪ್ರತ್ಯುತ್ತರ ನೀಡಿದ್ದಾರೆ.
ಜಿಲ್ಲಾಡಳಿತ ಮೇಲೆ ಅಪನಂಬಿಕೆ ಬರುವಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಆರೋಪದ ಮೇಲೆ ಸುಮಲತಾ ಅವರಿಗೆ ನೋಟಿಸ್ ನೀಡಿದ್ದ ಜಿಲ್ಲಾಧಿಕಾರಿ, ಐಪಿಸಿ ಸೆಕ್ಷನ್ 189ರಡಿ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದ್ದರು. ಈ ಕುರಿತು  ಒಂದು ದಿನದೊಳಗೆ ಉತ್ತರ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಇಂದು ನೋಟಿಸ್ ಗೆ ಉತ್ತರ ನೀಡುವ ಮೂಲಕ ತಮ್ಮ ಹೇಳಿಕೆಯನ್ನ ಸರ್ಮರ್ಥಿಸಿಕೊಂಡಿರುವ ಸುಮಲತಾ ಅಂಬರೀಷ್ ಅವರು, ನೀವು ಕರ್ತವ್ಯ ಲೋಪ ಮಾಡಿರುವುದು ಸತ್ಯ. ದುರುದ್ದೇಶದಿಂದ ನನಗೆ ನೋಟಿಸ್ ನೀಡಿದ್ದು, ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸತ್ಯವನಷ್ಟೇ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದೇನೆ.  ವಾಸ್ತವಿಕ ಸತ್ಯವನ್ನು ಮಾಧ್ಯಮದೊಂದಿಗೆ  ಹೇಳಿದ್ದೇನೆ. ನೀವು ನೋಟಿಸ್ ನೀಡಿರುವ ಆಗೇ ನಾನು ತಪ್ಪು ಮಾತನಾಡಿಲ್ಲ. ನನ್ನ ಮೇಲೆ ಕಾನುನೂ ಕ್ರಮ ಕೈಗೋಳ್ಳುವ  ತಪ್ಪು ಮಾಡಿಲ್ಲ. ನನ್ನ ವಿರುದ್ಧ ಕ್ರಮ ಜರುಗಿಸುವ ಅನಿವರ್ಯತೆ ಇಲ್ಲ. ನೀವು ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದೆ ಎಂದು ಮಂಡ್ಯ ಡಿಸಿ ಮಂಜುಶ್ರೀಗೆ ಸುಮಲತಾ ಅಂಬರೀಶ್ ಉತ್ತರ ಖಡಕ್ ಆಗಿಯೇ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com